ETV Bharat / sitara

ಕರ್ನಾಟಕದ ಜತೆ ಆತ್ಮೀಯ ಸಂಬಂಧ ಹೊಂದಿದ್ರು ನಟ ಇರ್ಫಾನ್ ಖಾನ್

ಇಂದು ನಿಧನರಾಗಿರುವ ನಟ ಇರ್ಫಾನ್​ ಖಾನ್​ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ನಟ ಇರ್ಫಾನ್ ಖಾನ್​ಗೆ ರಂಗಕರ್ಮಿ ಪ್ರಸನ್ನ ಗುರುಗಳಾಗಿದ್ದರು. ಅಲ್ಲದೇ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಇರ್ಫಾನ್ ಖಾನ್ ಭಾಗಿಯಾಗಿದ್ರು.

Bollywood Actor IrFan khan karanataka Relationship
ಕರ್ನಾಟಕದ ಜೊತೆ ಆತ್ಮೀಯ ಸಂಬಂಧ ಹೊಂದಿದ್ರು ಇರ್ಫಾನ್ ಖಾನ್
author img

By

Published : Apr 29, 2020, 4:45 PM IST

ಬಾಲಿವುಡ್ ನಟ ಇರ್ಫಾನ್ ಇಂದು ಅನಾರೋಗ್ಯದಿಂದ ‌ನಿಧನರಾಗಿದ್ದಾರೆ. ಇರ್ಫಾನ್ ಖಾನ್​​ಗೂ ಕರ್ನಾಟಕಕ್ಕೂ ಆತ್ಮೀಯ ಸಂಬಧ ಇತ್ತು. ಹೌದು ನಟ ಇರ್ಫಾನ್ ಖಾನ್​ಗೆ ರಂಗಕರ್ಮಿ ಪ್ರಸನ್ನ ಗುರುಗಳಾಗಿದ್ದರು.

Bollywood Actor IrFan khan karanataka Relationship
ಇರ್ಫಾನ್ ಖಾನ್​ ಮತ್ತು ರಂಗಕರ್ಮಿ ಪ್ರಸನ್ನ.

ಇರ್ಫಾನ್ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ಪ್ರಸನ್ನರ ಶಿಷ್ಯರಾಗಿದ್ದರು. ಅಲ್ಲದೇ‌ ನಟನೆಯಲಿ ಸ್ಪಷ್ಟತೆ ಬಂದಿದ್ದೇ ಗುರುಗಳಾದ ಪ್ರಸನ್ನ ಅವರಿಂದ ಅಂತಾ ಇರ್ಫಾನ್ ಈ ಹಿಂದೆ ತಿಳಿಸಿದ್ದರು.

ಇದಲ್ಲದೇ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಇರ್ಫಾನ್ ಖಾನ್ ಭಾಗಿಯಾಗಿದ್ರು.

ಇನ್ನು 2015 ರಲ್ಲಿ ನಡೆದ ಈ ಹೋರಾಟದಲ್ಲಿ ಬದನವಾಳು ಗ್ರಾಮದಲ್ಲಿ ಇರ್ಫಾ‌ನ್ ಉಳಿದಿದ್ದರು. ಅಲ್ಲದೇ ತಾವೇ ಸ್ವತಃ ಒಲೆಯಲ್ಲಿ ರಾಗಿ ಅಂಬಲಿ ‌ಮಾಡಿಕೊಂಡು ಸೇವಿಸುತ್ತಿದ್ದರು. ಇನ್ನು ಈ ಹೋರಾಟದ ವೇಳೆ‌ ಇರ್ಫಾನ್ ಜೊತೆಗೆ ಪತ್ನಿ ಸುಪತಾ ಸಿಕ್ದಾರ್ ಕೂಡ ಇದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.