ETV Bharat / sitara

ಕನ್ನಡದ ಮೇಲಿನ ಪ್ರೀತಿಗೆ ಸ್ಯಾಂಡಲ್​​​​​​​ವುಡ್​​​​​​​​​​​​​​​​​ಗೆ ಬಂದ ಬಾಲಿವುಡ್ ನಟ - Pailwan

ಬಾಲಿವುಡ್​​​ನ ಮತ್ತೊಬ್ಬ ಖಳನಟ ಚಿರಂಜೀವಿ ಸರ್ಜಾ ಅಭಿನಯದ 'ಕ್ಷತ್ರಿಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಬ್ರಾರ್ ಜಾಹೂರ್​​ ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದು ಬೆಂಗಳೂರು ಮೇಲಿನ ಪ್ರೀತಿಯಿಂದ ಅವರು ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಅಬ್ರಾರ್ ಜಾಹೂರ್
author img

By

Published : Aug 2, 2019, 9:58 AM IST

ಬಾಲಿವುಡ್​​ನ ಸಾಕಷ್ಟು ನಟ-ನಟಿಯರು ಸ್ಯಾಂಡಲ್​ವುಡ್​​ನಲ್ಲಿ ಅಭಿನಯಿಸಿದ್ದಾರೆ. ಕಿಚ್ಚ ಅಭಿನಯದ 'ಪೈಲ್ವಾನ್​​​​' ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ ನಟ ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸಲು ಬಂದಿದ್ದಾರೆ.

abrar
'ಕ್ಷತ್ರಿಯ' ಚಿತ್ರದ ನಿರ್ದೇಶಕನೊಂದಿಗೆ ಅಬ್ರಾರ್ ಜಾಹೂರ್

ಹಿಂದಿಯ 'ಉರಿ-ಸರ್ಜಿಕಲ್ ಸ್ಟ್ರೈಕ್​​' 'ನೀರಜ', 'ಕಮಾಂಡೋ' ಸಿನಿಮಾಗಳ ನಟ ಅಬ್ರಾರ್ ಜಾಹೂರ್​​​​ ಕನ್ನಡದ 'ಕ್ಷತ್ರಿಯ' ಸಿನಿಮಾ ಮೂಲಕ ಸ್ಯಾಂಡಲ್​​ವುಡ್​​​ಗೆ ಆಗಮಿಸಿದ್ದಾರೆ. ಅಬ್ರಾರ್ ಮೂಲತ: ಕಾಶ್ಮೀರದವರು. 3 ಡಿ ಅನಿಮೇಷನ್ ವಿಷಯದಲ್ಲಿ ವ್ಯಾಸಂಗ ಮಾಡಿ ಮಾಡೆಲ್ ಆಗಿ ಕೆಲವು ವರ್ಷ ಬೆಂಗಳೂರು ಹಾಗೂ ಚೆನ್ನೈನಲ್ಲಿ ನೆಲೆಸಿದ್ದರು. ಹಿಂದಿ ಸಿನಿಮಾಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರೂ ಕೂಡಾ ಬೆಂಗಳೂರಿನ ಮೇಲಿನ ಪ್ರೀತಿಗಾಗಿ ಕನ್ನಡ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಎದುರು ವಿಲನ್ ಆಗಿ ಅಭಿನಯಿಸಲು ಸಿದ್ದರಾಗಿದ್ದಾರೆ.

Abrar jahor
ಅಬ್ರಾರ್ ಜಾಹೂರ್

'ಕ್ಷತ್ರಿಯ' ಸಿನಿಮಾ ಅಕ್ಕ ಹಾಗೂ ತಮ್ಮನ ನಡುವೆ ಹೆಣೆದಿರುವ ಕಥೆ. ಚಿತ್ರದ ನಾಯಕ ಸಮಾಜದ ಒಳಿತಿಗಾಗಿ ಹೇಗೆ ಜವಾಬ್ದಾರಿ ನಿರ್ವಹಿಸುತ್ತಾನೆ ಎಂಬುದು ಕಥಾ ವಸ್ತು. ವೈಷ್ಣವಿ ಮನು ಕ್ರಿಯೇಷನ್ಸ್​​​​​ ಅಡಿಯಲ್ಲಿ ಎ. ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ.ವಿ. ಮನಿಷ್ ಮತ್ತು ಎಂ.ಜಿ. ವಿಷ್ಣುವರ್ಧನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಿಲ್ ಮಂಡ್ಯ ಈ ಚಿತ್ರದ ನಿರ್ದೇಶಕರು. ಧರ್ಮವಿಶ್ ಸಂಗೀತ, ರವಿವರ್ಮ ಸಾಹಸ, ಬಹದ್ದೂರ್ ಚೇತನ್ ಸಂಭಾಷಣೆ ಚಿತ್ರಕ್ಕಿದೆ. ಸದ್ಯಕ್ಕೆ ಚಿರಂಜೀವಿ ಸರ್ಜಾ ಅವರಿಗೆ ನಾಯಕಿ ಹಾಗೂ ಅಕ್ಕನ ಪಾತ್ರಗಳಿಗೆ ಆಯ್ಕೆ ನಡೆಯುತ್ತಿದೆ.

ಹಿಂದಿ ನಟ ಅಬ್ರಾರ್ ಜಾಹೂರ್ ವಿಲನ್ ಆಗಿ ಕನ್ನಡಕ್ಕೆ

ಹಿಂದಿಯಲ್ಲಿ ತಯಾರಾದ ಊರಿ- ಸರ್ಜಿಕಾಲ್ ಸ್ತ್ರೈಕ್, ನೀರಜ, ಕಮಂಡೋ ಸಿನಿಮಾಗಳ ನಟ ಅಬ್ರಾರ್ ಜಾಹೂರ್ ಕನ್ನಡ ಸಿನಿಮಾ ಕ್ಷತ್ರಿಯ ಮೂಲಕ ಆಗಮಿಸಿದ್ದಾರೆ. ಇವರು ಮೂಲತಃ ಕಾಶ್ಮೀರಿ, 3 ಡಿ ಅನಿಮೇಷನ್ ಅಲ್ಲಿ ವ್ಯಾಸಂಗ ಪಡೆದು ಮಾಡೆಲ್ ಆಗಿ ಕೆಲವು ವರ್ಷ ಬೆಂಗಳೂರು ಹಾಗೂ ಚೆನ್ನೈ ಅಲ್ಲಿ ನೆಲಸಿದ್ದರು ಕೂಡ.

ಹಿಂದಿಯಲ್ಲಿ ಜನಪ್ರಿಯತೆ ಪಡೆದು ಇವರು ಬೆಂಗಳೂರಿನ ಮೇಲಿನ ವಿಶ್ವಾಸಕ್ಕಾಗಿ ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ಚಿರಂಜೀವಿ ಸರ್ಜಾ ಎದುರು ಅಭಿನಯಿಸಲು ಸಿದ್ದರಾಗಿದ್ದಾರೆ.

ಕ್ಷತ್ರಿಯ ಕನ್ನಡ ಸಿನಿಮಾ ಅಕ್ಕ ಹಾಗೂ ತಮ್ಮನ ನಡುವೆ ಹಣೆದಿರುವ ಕಥೆ. ಆದರೆ ತಮ್ಮ ಮಾತ್ರ ತರ್ಲೆ. ಆತ ಸಮಾಜದ ಒಳಿತಿಗಾಗಿ ಹೇಗೆ ಜವಾಬ್ದಾರಿ ನಿರ್ವಹಿಸುತ್ತಾನೆ ಎಂಬುದು ಕಥಾ ವಸ್ತು.

ವೈಷ್ಣವಿ ಮನು ಕ್ರಿಯೇಷನ್ ಅಡಿಯಲ್ಲಿ ಎ ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ ವಿ ಮನಿಷ್ ಮತ್ತು ಎಂ ಜಿ ವಿಷ್ಣುವರ್ಧನ ನಿರ್ಮಾಣ ಮಾಡುತ್ತಿದ್ದಾರೆ. ಮಂಡ್ಯ ಕ್ಷತ್ರಿಯ ಈ ಚಿತ್ರದ ನಿರ್ದೇಶಕರು. ಧರ್ಮ ವಿಶ್ ಸಂಗೀತ, ರವಿ ವರ್ಮ ಸಾಹಸ, ಬಹದ್ದೂರ್ ಚೇತನ್ ಸಂಭಾಷಣೆ ಬರೆದಿದ್ದಾರೆ.

ಸಧ್ಯಕ್ಕೆ ಚಿರಂಜೀವಿ ಸರ್ಜಾ ಅವರಿಗೆ ನಾಯಕಿ ಹಾಗೂ ಅಕ್ಕ ಪಾತ್ರದಾರಿ ಆಯ್ಕೆ ನಡೆಯುತ್ತಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.