ETV Bharat / sitara

ರಾಕಿಂಗ್ ಸ್ಟಾರ್ ಯಶ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

author img

By

Published : Jan 8, 2022, 1:44 PM IST

Birthday wishes to Yash : ಬಾಲಿವುಡ್​​ ನಟಿ ರವೀನಾ ಟಂಡನ್ ಯಶ್​​ ಜನ್ಮ ದಿನಕ್ಕೆ ಶುಭಾಶಯ ಕೋರಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬೂಮ್​ರಾಂಗ್​ ವಿಡಿಯೋ ಶೇರ್​ ಮಾಡೋ ಮೂಲಕ ವಿಶೇಷವಾಗಿ ಬರ್ತ್​ ಡೇ ವಿಶಸ್ ತಿಳಿಸಿದ್ದಾರೆ..

birthday wishes to rocking star Yash
ರಾಕಿಂಗ್ ಸ್ಟಾರ್ ಯಶ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

ಇಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನ.​​ ಅಭಿಮಾನಿಗಳು ಸೇರಿದಂತೆ ಸಿನಿಮಾರಂಗದವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಕಳೆದ ಎರಡ ವರ್ಷಗಳಿಂದ ಕೋವಿಡ್​ ಹಿನ್ನೆಲೆ ಯಶ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿಲ್ಲ. ಈ ವರ್ಷವೂ ಕೂಡ ಕೊರೊನಾ, ಒಮಿಕ್ರಾನ್​, ಕರ್ಫ್ಯೂ ಕಾರಣ ಯಶ್ ಬರ್ತ್ ಡೇ‌ ಸೆಲೆಬ್ರೆಟ್ ಮಾಡುತ್ತಿಲ್ಲ.

ಆದ್ರೆ, ದೇಶಾದ್ಯಂತ ಅಭಿಮಾನಿಗಳು ಯಶ್ ಸಿನಿಮಾಗಳ ಕೆಲ ಫೋಟೋಗಳನ್ನು ಹಾಕಿ ವಿಶೇಷವಾಗಿ ಡಿಸೈನ್ ಮಾಡಿಸಿರೋ ಬರ್ತ್ ಡೇ ಡಿಪಿ, ಫೋಟೋಗಳನ್ನು ಹಾಕಿ ರಾಕಿ ಬಾಯ್​ಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಬಾಲಿವುಡ್​​ ನಟಿ ರವೀನಾ ಟಂಡನ್ ಯಶ್​​ ಜನ್ಮ ದಿನಕ್ಕೆ ಶುಭಾಶಯ ಕೋರಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬೂಮ್​ರಾಂಗ್​ ವಿಡಿಯೋ ಶೇರ್​ ಮಾಡೋ ಮೂಲಕ ವಿಶೇಷವಾಗಿ ಬರ್ತ್​ ಡೇ ವಿಶಸ್ ತಿಳಿಸಿದ್ದಾರೆ.

ವಿಡಿಯೋದಲ್ಲಿ ನಟ ಯಶ್​ ಮತ್ತು ನಟಿ ರವೀನಾ ಟಂಡನ್ ಸಖತ್​ ಸ್ಟೈಲಿಶ್​ ಆಗಿ ಕಾಣುತ್ತಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಕೂಡ ಕೆಜಿಎಫ್​-2 ಹೊಸ ಪೋಸ್ಟರ್​ ಶೇರ್​ ಮಾಡುವ ಮೂಲಕ ಯಶ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.

2022ರ ಏಪ್ರಿಲ್​ 14ರಂದು ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಮೊದಲೇ ಘೋಷಿಸಲಾಗಿತ್ತು. ಆದರೆ, ಈಗ ದೇಶದಲ್ಲಿ ಕೊರೊನಾ ಹಾಗೂ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹಲವಾರು ಬಿಗ್​ ಬಜೆಟ್​ ಸಿನಿಮಾಗಳು ತಮ್ಮ ರಿಲೀಸ್​ ಡೇಟ್ ಅನ್ನು​ ಮುಂದೂಡಿವೆ.

ಹಾಗಾಗಿ, ಕೆಜಿಎಫ್​ ಚಾಪ್ಟರ್​ 2 ಚಿತ್ರದ ರಿಲೀಸ್​ ದಿನಾಂಕದಲ್ಲಿ ಬದಲಾವಣೆ ಆಗಬಹುದಾ ಎಂಬ ಅನುಮಾನ ಮೂಡಿತ್ತು. ಆದರೆ, ಹೊಸ ಪೋಸ್ಟರ್​ನಲ್ಲಿ ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಪಕ್ಕಾ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: Yash Birthday: ರಾಕಿಂಗ್​ ಸ್ಟಾರ್​ ಬರ್ತ್​​ಡೆ ಸ್ಪೆಷಲ್​.. ಕೆಜಿಎಫ್​-2 ಹೊಸ ಪೋಸ್ಟರ್​ ಬಿಡುಗಡೆ

ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಬಾಲಿವುಡ್​ ನಟ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ನಟಿಸಿರುವುದರಿಂದ ಕುತೂಹಲ ಹೆಚ್ಚಿದೆ. ಹೊಸದಾಗಿ ಪ್ರಕಾಶ್​ ರೈ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಾರೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿರೋ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.