ETV Bharat / sitara

ನಟ ಕೋಮಲ್​​ಕುಮಾರ್​​ ಮೇಲೆ ಬೈಕ್ ಸವಾರನಿಂದ ಹಲ್ಲೆ

author img

By

Published : Aug 13, 2019, 7:43 PM IST

ಜಗ್ಗೇಶ್ ಸಹೋದರ, ನಟ ಕೋಮಲ್ ಕುಮಾರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ರಕ್ತ ಸುರಿಯುವಂತೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಕೋಮಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೋಮಲ್​​ಕುಮಾರ್

ಸ್ಯಾಂಡಲ್​​ವುಡ್ ನಟ ಕೋಮಲ್ ​​ಕುಮಾರ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಮಲ್ಲೇಶ್ವರಂ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಹಾಗೂ ಕೋಮಲ್ ನಡುವೆ ಜಗಳ ನಡೆದಿದ್ದು ಈ ವೇಳೆ ಹಲ್ಲೆ ನಡೆದಿದೆ.

ಕೋಮಲ್​​ಕುಮಾರ್​​ ಮೇಲೆ ಬೈಕ್ ಸವಾರನಿಂದ ಹಲ್ಲೆ

ಕೋಮಲ್​ ಕುಮಾರ್ ಅವರನ್ನು ವಾಹನ ಸವಾರ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಕೋಮಲ್ ಆ ವ್ಯಕ್ತಿಗೆ ಬಾರಿಸಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಕೋಮಲ್ ಅವರು ಕೆಳಗೆ ಬೀಳುವಂತೆ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ಕೋಮಲ್ ಅವರ ಬಾಯಿಂದ ರಕ್ತ ಸುರಿದಿದೆ. ಹಲ್ಲೆಗೊಳಗಾದ ನಟ ಕೋಮಲ್ ಕುಮಾರ್ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕೋಮಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಂಪಿಗೆ ಚಿತ್ರಮಂದಿರದ ರೈಲ್ವೆ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದೆ. ಸ್ಥಳೀಯರು ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುವ ಮುನ್ನ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Intro:ಸ್ಯಾಂಡಲ್ ವುಡ್ ನ ನಟ ಕೋಮಲ್ ಕೋಮಲ್ ಕುಮಾರ್ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ..

ಸ್ಯಾಂಡಲ್ ವುಡ್ ನ ನಟ ಕೋಮಲ್ ಕೋಮಲ್ ಕುಮಾರ್ ಮೇಲೆ ಅಪರಿಚಿತ ವ್ಯಕ್ಯಿಯೊರ್ವ ಹಲ್ಲೆ ನಡೆಸಿದ್ದಾನೆ.‌ ಮಲ್ಲೇಶ್ವರಂನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿ ಕೋಮಲ್ ಕಾರ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾನೆ. ಸುಖಾ ಸುಮ್ಮನೆ ಅಪರಿಚಿತ ವ್ಯಕ್ತಿ ಕೋಮಲ್ ಮುಖದಲ್ಲಿ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾನೆ.ಹಲ್ಲೆಗೊಳಗಾದ ನಟ ಕೋಮಲ್ ಕುಮಾರ್ ಪೊಲೀಸ್ ಮೊರೆಹೋಗಿದ್ದಾರೆ. ಸದ್ಯ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾದರೆ.ಅಲ್ಲದೆ ಮಲ್ಲೇಶ್ವರಂ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.Body:ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ ಘಟನೆ ನಡೆದಿದ್ದು ಸದ್ಯಅಪರಿಚಿತ.
ವ್ಯಕ್ತಿಯನ್ನ ಠಾಣೆಯಲ್ಲಿ ವಿಚಾರಣೆ ನಡೆಸುತ್ತರುವ ಪೊಲೀಸ್ರು.ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಅಪರಿಚಿತ ಕೋಮಲ್ ಅವರನ್ನು ಕರೆದೊಯ್ದಿದ್ದಾರೆ.ಇನ್ನೂ ಘಟನೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.