ETV Bharat / sitara

ನಿರ್ಧಾರ ಬದಲಿಸಿದ ರಘು: ಐವರಲ್ಲಿ ಇಂದು ಮನೆಯಿಂದ ಹೊರಹೋಗುವವರು ಯಾರು? - ಸುದೀಪ್​

ನನ್ನ ವಿರುದ್ಧ ನಾನೇ ಹೋರಾಡುತ್ತಾ ಇದ್ದೀನಿ. ನನಗೆ ಶೋನಿಂದ ಹೊರ ಬರೋ ಆಲೋಚನೆ ಬರುತ್ತಿದೆ. ಇದು ಸರಿಯಲ್ಲ. ನನಗೆ ಲೋನ್ಲಿ ಫೀಲ್, ಫ್ಯಾಮಿಲಿ ಮಿಸ್​ ಮಾಡಿಕೊಳ್ಳುತ್ತಾ ಇದ್ದೀನಿ ಎಂದು ಹೇಳಿದ್ದ ರಘು ಈಗ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದಾರೆ.

Bigg Boss Season 8: Three person Safe in the 2nd Nomination Process
ನಾಳೆ ಮನೆಯಿಂದ ಹೊರಹೋಗುವರು ಯಾರು?
author img

By

Published : Mar 14, 2021, 3:12 AM IST

Updated : Mar 14, 2021, 2:25 PM IST

ಬಿಗ್ ಬಾಸ್ ಸೀಸನ್ 8ರ 2 ನೇ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೂವರು ಸೇಫ್​ ಆಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಹೌದು, ಶುಭಾ ಪೂಂಜಾ, ನಿಧಿ ಸುಬ್ಬಯ್ಯ ಹಾಗೂ ದಿವ್ಯ ಸುರೇಶ್ ಈ ಎಪಿಸೋಡ್ ನಲ್ಲಿ ಸೇಫ್ ಆಗಿದ್ದಾರೆ.

ನಿರ್ಮಲಾ ಚೆನ್ನಪ್ಪ, ವಿಶ್ವನಾಥ್, ಚಂದ್ರಕಲಾ, ವಿಶ್ವನಾಥ್ ಹಾಗೂ ಗೀತಾ ಈ ಐವರಲ್ಲಿ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬುದು ಇಂದಿನ ವೀಕೆಂಡ್​ ವಿಥ್ ಸುದೀಪ್ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

Bigg Boss Season 8: Three person Safe in the 2nd Nomination Process
ಐವರಲ್ಲಿ ನಾಳೆ ಮನೆಯಿಂದ ಹೊರಹೋಗುವರು ಯಾರು?

ಮನೆಯಲ್ಲಿರಲು ಒಪ್ಪಿದ ರಘು:

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯರಾಗಿರುವ ರಘು ಮನೆಯಿಂದ ಹೊರ ಹೋಗಬೇಕು ಅಂದುಕೊಳ್ಳುವ ನಿರ್ಧಾರದಿಂದ ಹೊರಬಂದಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಅಂತಿಮ ನಿರ್ಧಾರವನ್ನು ಹೊರಹಾಕಿದ್ದಾರೆ.

ಪದೇ ಪದೇ ಕ್ಯಾಮರಾ ಮುಂದೆ ಮಾತನಾಡುವ ರಘು, ನಾನು ಯಾಕೋ ಒಂದು ರೀತಿ ಡಿಸ್ಟರ್ಬ್​ ಆಗ್ತಾ ಇದೀನಿ. ನನಗೆ ಇಲ್ಲಿ ಹಿಂಸೆ ಅನಿಸುತ್ತಿದೆ. ನನಗೆ ನಾನೇ ಮಾತಾಡಿಕೊಂಡು ಇದೆಲ್ಲದರಿಂದ ಹೊರಗೆ ಬರುವ ಪ್ರಯತ್ನ ಮಾಡ್ತಾ ಇದೀನಿ. ನನ್ನ ವಿರುದ್ಧ ನಾನೇ ಹೋರಾಡುತ್ತಾ ಇದ್ದೀನಿ. ನನಗೆ ಶೋನಿಂದ ಹೊರ ಬರೋ ಆಲೋಚನೆ ಬರುತ್ತಿದೆ. ಇದು ಸರಿಯಲ್ಲ. ನನಗೆ ಲೋನ್ಲಿ ಫೀಲ್, ಫ್ಯಾಮಿಲಿ ಮಿಸ್​ ಮಾಡಿಕೊಳ್ಳುತ್ತಾ ಇದ್ದೀನಿ ಎಂದಿದ್ದರು.

ಈ ಬಗ್ಗೆ ಸ್ಪಷ್ಟನೆ ಕೇಳಿದ ಸುದೀಪ್, ನಿಮಗೆ ಸ್ವಲ್ಪ ಕಾಲಾವಕಾಶ ನೀಡುತ್ತೇನೆ. ಬಾಗಿಲು ತೆಗೆಯಲಾಗುತ್ತದೆ ಹೊರಹೋಗಬಹುದು ಅಥವಾ ಸರಿಯಾದ ಕಾರಣ ನೀಡಿ ಇಲ್ಲಿರಬೇಕಾಗುತ್ತದೆ ಎಂದರು. ದೊಡ್ಡ ಶೋಗೆ ಬಂದ್ದಿದೀನಿ. ಅವಕಾಶ ಮಿಸ್​ ಮಾಡಿಕೊಳ್ಳಬಾರದೂ. ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ ಅವರ ನಿರೀಕ್ಷೆಗೆ ತಕ್ಕಂತೆ ಆಟ ಆಡುತ್ತೇನೆ ಎಂದು ನನಗೆ ಅನ್ನಿಸುತ್ತಿದೆ ಎಂದು ಹೇಳಿ ರಘು ತಮ್ಮ ಆಲೋಚನೆ ಬದಲಾಯಿಸಿಕೊಂಡರು.

ಶಮಂತ್​ಗೆ ಎಚ್ಚರಿಕೆ ನೀಡಿದ ಸುದೀಪ್:

ಶಮಂತ್ ಯಾವಾಗಲೂ ಇತರೆ ಸ್ಪರ್ಧಿಗಳೊಂದಿಗೆ ಕಿವಿಯಲ್ಲಿ ಮಾತನಾಡುವ ಬಗ್ಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೈಕ್ ಕೊಟ್ಟಿದ್ದೇವೆ. ಅದರಲ್ಲೇ ಎಲ್ಲರಿಗೂ ಕೇಳುವ ಹಾಗೆಯೇ ಮಾತನಾಡಬೇಕು.ನಿಯಮದ ವಿರುದ್ಧ ನಡೆದುಕೊಳ್ಳುವುದು ತಪ್ಪು, ಅದನ್ನು ಮಾಡಲು ಬಿಟ್ಟಿದ್ದು ಮನೆಯವರ ತಪ್ಪುಕೂಡ. ತಪ್ಪಿಗೆ ಶಿಕ್ಷೆಯಾಗಿ ಮುಂದಿನ ವಾರಕ್ಕೆ ನೇರ ನಾಮಿನೇಟ್ ಅಥವಾ ಮನೆಯಲ್ಲಿ ಉಳಿಯಬೇಕಾದರೆ ಇತರೆ ಸ್ಪರ್ಧಿಗಳು ಬೆಡ್​ರೂಂನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬ ಷರತ್ತನ್ನು ಸುದೀಪ್ ಹಾಕುತ್ತಾರೆ. ಕ್ಯಾಪ್ಟನ್ ರಾಜೀವ್​ಗೆ ಒಮ್ಮತದ ಅಭಿಪ್ರಾಯಕ್ಕೆ ಬರುವಂತೆ ಸುದೀಪ್ ಆದೇಶಿಸುತ್ತಾರೆ.

ಅದರಂತೆ ಮನೆಯ ಎಲ್ಲಾ ಸದಸ್ಯರು ಶಮಂತ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸುತ್ತಾರೆ. ಇದಕ್ಕಾಗಿ ಬೆಡ್​ರೂಂನ್ನು ಬಿಟ್ಟುಕೊಡಲು ನಿರ್ಧರಿಸುತ್ತಾರೆ. ಹೀಗಾಗಿ ನಾಮಿನೇಟ್​ನಿಂದ ತಪ್ಪಿಸಿಕೊಂಡು ಸೇಫ್ ಆಗುತ್ತಾರೆ.

Last Updated : Mar 14, 2021, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.