ಇಂದು ಬಾಲಿವುಡ್ ಬಿಗ್ಬಿ 78ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದೇಶ, ವಿದೇಶದಿಂದಲೂ ಅಮಿತಾಬ್ ಅವರಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದ್ರೆ ಅಮಿತಾಬ್ ಬಚ್ಚನ್ ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಬರ್ತಡೇ ವಿಶ್ ಮಾಡಿದ್ದಾರೆ.
ಹೌದು, ಸೂರತ್ನ ದಿವ್ಯೇಶ್ ಬಿಗ್ಬಿಯ 7,000 ಫೋಟೋಗಳನ್ನು ಸಂಗ್ರಹಿಸಿ ಅಮಿತಾಬ್ಗೆ ವಿಶ್ ಮಾಡಿದ್ದಾರೆ. ಸುಮಾರು ಎರಡು ದಶಕಗಳಿಂದ ಈ ಫೋಟೋಗಳನ್ನು ಇವರು ಸಂಗ್ರಹಿಸಿದ್ದಾರೆ. ವಿಶೇಷ ಏನಂದ್ರೆ ಅಮಿತಾಬ್ ಬಚ್ಚನ್ ಬಾಲಕನಾಗಿದ್ದಾಗ ಇದ್ದ ಪಾಸ್ಪೋರ್ಟ್ ಅಳತೆ ಫೋಟೋ ಕೂಡ ಇವರ ಬಳಿ ಇದೆಯಂತೆ. ಈ ಬಗ್ಗೆ ಹೇಳಿರುವ ದಿವ್ಯೇಶ್, ನಾನು ಹೊಸದಾಗಿ ಅಮಿತ್ ಜಿ ಫೋಟೋ ಕಂಡರೆ ಅದನ್ನು ಕತ್ತರಿಸಿ ನನ್ನ ಆಲ್ಬಮ್ಗೆ ಸೇರಿಸುತ್ತೇನೆ ಎಂದಿದ್ದಾರೆ.
ವಿದ್ಯೇಶ್ಗೆ ಅಮಿತಾಬ್ರನ್ನು ಭೇಟಿಯಾಗಲು ಅವಕಾಶಗಳು ಸಿಕ್ಕಿದ್ದವಂತೆ. ಮೊದಲ ಭೇಟಿಯಲ್ಲಿ ತಾವು ಸಂಗ್ರಹಿಸಿದ್ದ ಫೋಟೋ ಮತ್ತು ಅಮಿತಾಬ್ ಮೊಮ್ಮಗಳಿಗೆ ಬೊಂಬೆಯನ್ನು ನೀಡಿದ್ದರಂತೆ. ಅದಕ್ಕೆ ಖುಷಿ ಪಟ್ಟಿದ್ದ ಬಿಗ್ಬಿ ಇದನ್ನು ಹೇಗೆ ಮಾಡಿದ್ರಿ ಅಂತ ಕೇಳಿದ್ದರಂತೆ. ಇದಕ್ಕೆ ಉತ್ತರಿಸಿದ್ದ ವಿದ್ಯೇಶ್, ಇದು ಕೇವಲ ಟ್ರೈಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಎಂದಿದ್ದರಂತೆ.
ಅಮಿತಾಬ್ರ ಪ್ರತಿಯೊಂದು ಒಳ್ಳೆ ಕೆಲಸಗಳನ್ನು ಅನುಸರಿಸುವ ವಿದ್ಯೇಶ್, ತಮ್ಮ ಮರಣದ ನಂತರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ.