ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ ಕಾಣೆಯಾದ ದಿವ್ಯಾ ಉರುಡುಗ ಮನೆ ಮಂದಿಗೆಲ್ಲಾ ಶಾಕ್ ನೀಡಿದ್ದಾರೆ.
ಈ ಬಗ್ಗೆ ಬಿಗ್ ಬಾಸ್ ಮಾಹಿತಿ ನೀಡಿ, ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ, ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಸ್ಕ್ಯಾನಿಂಗ್ ಬಳಿಕ ಯೂರಿನರಿ ಇನ್‍ಫೆಕ್ಷನ್ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರು ಕ್ಷೇಮವಾಗಿದ್ದಾರೆ ಎಂದು ಹೇಳಿತು.
ಇದನ್ನು ಕೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾದರು. ಮನೆಯ ಸದಸ್ಯರು ಅವರು ಹುಷಾರಾಗುತ್ತಾರೆ ಎಂದು ಅರವಿಂದ್‍ಗೆ ಧೈರ್ಯ ತುಂಬಿದರು. ಆಗ ಅವರು ಭಾವುಕರಾಗಿಯೇ ‘ಯಾ.. ಯಾ.. ಇಲ್ಲಿಗಿಂತ ಅಲ್ಲಿ ಚೆನ್ನಾಗಿರುತ್ತಾಳೆ’ ಎಂದರು.
ಈ ಬಗ್ಗೆ ದಿವ್ಯ ಉರುಡುಗ ಅವರ ಇನ್ಸ್ಟಾಗ್ರಾಮ್ನಲ್ಲಿ ಅವರ ಟೀಮ್ ಸದಸ್ಯರು ಪ್ರತಿಕ್ರಿಯಿಸಿದ್ದು, ಅವರು ಚೇತರಿಸಿಕೊಳ್ತಿದ್ದಾರೆ. ನಿಮ್ಮ ಪ್ರಾರ್ಥನೆಗಳಿರಲಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಅವರನ್ನು ಜೋಡಿಹಕ್ಕಿಗಳೆಂದೇ ಪರಿಗಣಿಸಲಾಗಿತ್ತು.