ETV Bharat / sitara

ಕೃತಿ ಜೊತೆ ಹೆಜ್ಜೆ ಹಾಕಿದ ಬಿಗ್ ​ಬಿ.. ಕಾಲೇಜಿನ ಆ ದಿನಗಳನ್ನು ನೆನೆದ ಅಮಿತಾಭ್​​​​​​​

ಕೌನ್ ಬನೇಗಾ ಕರೋಡ್​ಪತಿ’ಯ 13ನೇ ಸೀಸನ್ ನ ಈ ವಾರದ ಸಂಚಿಕೆಯಲ್ಲಿ ಬಾಲಿವುಡ್​ನ ಖ್ಯಾತ ನಟಿ ಕೃತಿ ಸನೋನ್ ಭಾಗವಹಿಸಿದ್ದರು. ಈ ಕುರಿತು ಬಿಗ್​ಬಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಮಿತಾಬ್​​​ ಕೃತಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ನೃತ್ಯ ಮಾಡುವಾಗ ಅಮಿತಾಭ್​ಗೆ ತಮ್ಮ ಕಾಲೇಜಿನ ದಿನಗಳು ನೆನಪಾದವು ಎಂದು ಸ್ವತಃ ಅವರೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

author img

By

Published : Oct 19, 2021, 7:07 PM IST

Updated : Oct 19, 2021, 7:23 PM IST

big-b-relives-college-days-thanks-to-kriti-sanon
ಕೃತಿ ಸೋನನ್​ ಜೊತೆ ಅಮಿತಾಭ್​ ಡ್ಯಾನ್ಸ್​​

ಕೌನ್ ಬನೇಗಾ ಕರೋಡ್​ಪತಿ 13ನೇ ಸೀಸನ್​ನಲ್ಲಿ ಮೆಗಾಸ್ಟಾರ್​ ನಟ ಅಮಿತಾಭ್ ಬಚ್ಚನ್ ಬಾಲಿವುಡ್​ನ ಖ್ಯಾತ ನಟಿ ಕೃತಿ ಸನೋನ್ ಜೊತೆಗೆ ಹೆಜ್ಜೆ ಹಾಕಿದರು. ಈ ವೇಳೆ ಅವರು, ಕಾಲೇಜಿನ ದಿನಗಳ ನೆನಪಿಗೆ ಜಾರಿದ್ದರು.

ಅಮಿತಾಭ್ ಬಚ್ಚನ್ ‘ಕೌನ್ ಬನೇಗಾ ಕರೋಡ್​ಪತಿ’ಯ 13ನೇ ಸೀಸನ್ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಸಂಚಿಕೆ ಪ್ರಸಾರವಾಗುತ್ತದೆ. ಅದರಲ್ಲಿ ವಿವಿಧ ಕ್ಷೇತ್ರಗಳ ಖ್ಯಾತ ತಾರೆಯರು ಚಾರಿಟಿಯ ಉದ್ದೇಶದಿಂದ ಭಾಗವಹಿಸುತ್ತಾರೆ.

ಈ ವಾರದ ಸಂಚಿಕೆಯಲ್ಲಿ ಬಾಲಿವುಡ್​ನ ಖ್ಯಾತ ನಟಿ ಕೃತಿ ಸನೋನ್ ಭಾಗವಹಿಸಿದ್ದರು. ಈ ಕುರಿತು ಬಿಗ್​ಬಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಮಿತಾಬ್​​​ ಕೃತಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ನೃತ್ಯ ಮಾಡುವಾಗ ಅಮಿತಾಭ್​ಗೆ ತಮ್ಮ ಕಾಲೇಜಿನ ದಿನಗಳು ನೆನಪಾದವು ಎಂದು ಸ್ವತಃ ಅವರೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಇನ್​​​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅಮಿತಾಭ್, ಅದಕ್ಕೆ ಕ್ಯಾಪ್ಶನ್ ನೀಡುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ನಟಿ ಕೃತಿಯೊಂದಿಗೆ ಬಲ್ರೂಮ್ ನೃತ್ಯ ಮಾಡುತ್ತಾ ತನ್ನ ಕಾಲೇಜು ಹಾಗೂ ಕೋಲ್ಕತ್ತಾದ ದಿನಗಳು ನೆನಪಾದವು’ ಎಂದು ಅಮಿತಾಭ್ ಸಂಭ್ರಮ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Oct 19, 2021, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.