ಹಿಂದಿಯ 'ಮೈನೆ ಪ್ಯಾರ್ ಕಿಯಾ' ಸಿನಿಮಾದಿಂದ ಖ್ಯಾತಿ ಪಡೆದಿದ್ದ ಬಾಲಿವುಡ್ ನಟಿ ಭಾಗ್ಯಶ್ರೀ ಪತಿಯನ್ನು ಜೂಜು ದಂದೆ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಟ, ನಿರ್ಮಾಪಕ ಹಾಗೂ ಉದ್ಯಮಿ ಆಗಿದ್ದ ಹಿಮಾಲಯ ದಸನಿಯನ್ನು ತಮ್ಮ ನಿವಾಸದಲ್ಲಿಯೇ ಅಂಬಲಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧನದ ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾದಿದ್ದು, ಸದ್ಯ ಹಿಮಾಲಯ ದಸನಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ.
ಇತ್ತೀಚೆಗೆ ಅಂಬಾನಿ ಠಾಣಾ ಪೊಲೀಸರು ಒಂದು ಜೂಜುಕೋರರ ದಂಧೆ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಸಿಕ್ಕ ಆರೋಪಿಗಳನ್ನು ವಿಚಾರಿಸುವ ಸಂದರ್ಭದಲ್ಲಿ ಹಿಮಾಲಯ ದಸನಿಯು ಜೂಜು ದಂಧೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಹಿಮಾಲಯ ದಸನಿ 1992ರಲ್ಲಿ ಪಾಯಲ್ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದರು. ಸದ್ಯ ಹಿಮಾಲಯ ಉದ್ಯಮಿ ಆಗಿದ್ದಾರೆ.
ನಟಿ ಭಾಗ್ಯಶ್ರೀ ಹಿಂದಿ, ಕನ್ನಡ, ಮರಾಠಿ, ತೆಲುಗು, ಹಾಗೂ ಭಜಪುರಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡದಲ್ಲಿ ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದ 'ಅಮ್ಮಾವ್ರ ಗಂಡ' ಸಿನಿಮಾದಲ್ಲಿ ಭಾಗ್ಯಶ್ರೀ ನಟಿಸಿರುವುದು ವಿಶೇಷ.