2019ನೇ ಸಾಲಿನ ಸೈಮಾ ಪ್ರಶಸ್ತಿ ಪುರಸ್ಕಾರ ಸಮಾರಂಭ ಖತಾರ್ನಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ಸದ್ಯಕ್ಕೆ ಕನ್ನಡದ ಆರು ಪ್ರಶಸ್ತಿಗಳು ಪ್ರಕಟಗೊಂಡಿವೆ.
ಚಂದನವನದ ಅಕ್ಕ ಅಂತಾನೇ ಫೇಮಸ್ ಆಗಿರುವ ನಟಿ ಅನುಪಮಾ ಗೌಡ ವೃತ್ತಿ ಜೀವನದಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಅತ್ಯುತ್ತಮ ಡೆಬ್ಯೂ ನಟಿಯಾಗಿ ಅನುಪಮಾ ಹೊರಹೊಮ್ಮಿದ್ದಾರೆ. ದಯಾಳ್ ಪದ್ಮಾನಾಭನ್ ನಿರ್ದೇಶನದ 'ಆ ಕರಾಳ ರಾತ್ರಿ' ಸಿನಿಮಾದ ನಟನೆಗೆ ಸೈಮಾ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ.
-
Diamond producers Association Best Debut Actor Female – Kannada is Anupama Gowde for Aa Karaala Ratri.#PantaloonsSIIMA #SIIMAinQatar #VisitQatar #QatarAirways #Helo #ONEFMQATAR pic.twitter.com/ssrgpPjDM4
— SIIMA (@siima) August 15, 2019 " class="align-text-top noRightClick twitterSection" data="
">Diamond producers Association Best Debut Actor Female – Kannada is Anupama Gowde for Aa Karaala Ratri.#PantaloonsSIIMA #SIIMAinQatar #VisitQatar #QatarAirways #Helo #ONEFMQATAR pic.twitter.com/ssrgpPjDM4
— SIIMA (@siima) August 15, 2019Diamond producers Association Best Debut Actor Female – Kannada is Anupama Gowde for Aa Karaala Ratri.#PantaloonsSIIMA #SIIMAinQatar #VisitQatar #QatarAirways #Helo #ONEFMQATAR pic.twitter.com/ssrgpPjDM4
— SIIMA (@siima) August 15, 2019
2015 ರಲ್ಲಿ 'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಬಂದ ಅನುಪಮಾ, ಕಿರುತೆರೆಯ ಅಕ್ಕ ಧಾರಾವಾಹಿಯಿಂದ ಫೇಮಸ್ ಆದರು. ನಂತರ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟರು. ಅಲ್ಲಿ ಪರಿಚಯವಾದ ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಆ ಕರಾಳ ರಾತ್ರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಈ ನಿರ್ದೇಕರ ಮತ್ತೊಂದು ಚಿತ್ರ 'ತ್ರಯಂಬಕಂ'ನಲ್ಲೂ ನಾಯಕಿಯಾಗಿ ನಟಿಸಿದರು.