ETV Bharat / sitara

ರಿಷಭ್​​ ಶೆಟ್ಟಿಯ 'ಬೆಲ್​​​​​​​​ಬಾಟಮ್' ತೊಡುತ್ತಿರುವ ಟಾಲಿವುಡ್, ಬಾಲಿವುಡ್ ನಟರು - ತೆಲುಗು ಬೆಲ್​ಬಾಟಮ್​ಗೆ ನಾಣಿ ನಾಯಕ

'ಬೆಲ್​​​​​​​​ಬಾಟಮ್' ಚಿತ್ರವನ್ನು ತೆಲುಗು ಹಾಗೂ ಹಿಂದಿಗೆ ಸಾಹಸ ನಿರ್ದೇಶಕ ರವಿವರ್ಮ ರಿಮೇಕ್ ರೈಟ್ಸ್ ಖರೀದಿಸಿದ್ದು, ರಿಷಭ್​​​​​​​​​​​​​​​​​​​​​​​​​ ಶೆಟ್ಟಿ ನಿಭಾಯಿಸಿದ್ದ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ತೆಲುಗಿನಲ್ಲಿ ನಾಣಿ ಹಾಗೂ ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಮಾಡುತ್ತಿದ್ದಾರೆ.

'ಬೆಲ್​​​​​​​​ಬಾಟಮ್'
author img

By

Published : Nov 9, 2019, 11:44 PM IST

ಜಯತೀರ್ಥ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ನಟಿಸಿರುವ 'ಬೆಲ್​ಬಾಟಮ್' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸಾಲಿಗೆ ಸೇರಿರುವ ಸಿನಿಮಾ. ಈ ಸಿನಿಮಾ ಮೂಲಕ ರಿಷಭ್​ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು, ನಿರ್ದೇಶಕ ಮಾತ್ರವಲ್ಲ ಒಳ್ಳೆಯ ನಟ ಎಂದು ಕೂಡಾ ಪ್ರೂವ್ ಮಾಡಿದ್ದರು.

Bellbottm remake to hindi and telugu, ತೆಲುಗು ಹಿಂದಿಗೆ ಬೆಲ್​​ಬಾಟಮ್ ರೀಮೇಕ್
ರಿಷಭ್ ಶೆಟ್ಟಿ , ಹರಿಪ್ರಿಯಾ

ಇದೀಗ ಈ ಸಿನಿಮಾ ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳಿಗೂ ರಿಮೇಕ್ ಆಗುತ್ತಿದೆ. ಈ ಚಿತ್ರವನ್ನು ತೆಲುಗು ಹಾಗೂ ಹಿಂದಿಗೆ ಸಾಹಸ ನಿರ್ದೇಶಕ ರವಿವರ್ಮ ರಿಮೇಕ್ ರೈಟ್ಸ್ ಖರೀದಿಸಿದ್ದು, ರಿಷಭ್​​​​​​​​​​​​​​​​​​​​​​​​​ ಶೆಟ್ಟಿ ನಿಭಾಯಿಸಿದ್ದ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ತೆಲುಗಿನಲ್ಲಿ ನಾಣಿ ಹಾಗೂ ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಮಾಡುತ್ತಿದ್ದಾರೆ. ಈಗಾಗಲೇ ಈ ಇಬ್ಬರೂ ನಟರೊಂದಿಗೆ ರವಿವರ್ಮ ಮಾತುಕತೆ ನಡೆಸಿದ್ದು ಬಹುತೇಕ ಇಬ್ಬರೂ ನಟಿಸುವುದು ಖಚಿತವಾಗಿದೆ ಎಂದು ರವಿವರ್ಮ ತಿಳಿಸಿದ್ದಾರೆ. ಆದರೆ ಚಿತ್ರವನ್ನು ತೆಲುಗು ಹಾಗೂ ಹಿಂದಿಯಲ್ಲಿ ಯಾರು ನಿರ್ದೇಶಿಸುತ್ತಿದ್ದಾರೆ ಹಾಗೂ ನಾಯಕಿಯರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಒಟ್ಟಿನಲ್ಲಿ ನಾಣಿ ಹಾಗೂ ಆಯುಷ್ಮಾನ್ ಖುರಾನ ರಿಷಭ್ ಶೆಟ್ಟಿಯ ಬೆಲ್​ ಬಾಟಮ್ ತೊಡಲು ರೆಡಿಯಾಗಿದ್ದಾರೆ.

Intro:ಬೆಲ್ ಬಾಟಮ್" ತೊಡಕೆ ರೆಡಿಯಾಗುತ್ತಿದ್ದಾರೆ ಕಾಲಿವುಡ್ ತಾರೆ ನಾನಿ ಹಾಗೂ ಬಾಲಿವುಡ್ ತಾರೆ ಆಯುಷ್ಮಾನ್ ಖುರಾನ್...

ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಬ್ಲಾಕ್ ಬಸ್ಟರ್ ಹಿಟ್ ಚಿತ್ರ. ಮೆಟ್ರೋ ಸ್ಟೈಲ್ ನಲ್ಲಿ ಬಂದ ಈ ಚಿತ್ರಕ್ಕೆ ಅಭಿಮಾನಿಗಳು ಫುಲ್ ಖುಶ್ ಆಗಿ ಭರ್ಜರಿಯಾಗಿ ಈಚಿತ್ರ ಶತದಿನವನ್ನು ಕಂಪ್ಲೀಟ್ ಮಾಡಿದೆ. ಅಲ್ಲದೆ ಸ್ಯಾಂಡಲ್ ವುಡ್ ನಿಂದ ಕಾಲಿವುಡ್ ಹಾರಿದ್ದ ಬೆಲ್ ಬಾಟಮ್ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಕನ್ನಡದಿಂದ ಈ ಚಿತ್ರವನ್ನು ತೆಲುಗು ಹಾಗೂ ಹಿಂದಿಗೆ ಸಾಹಸ ನಿರ್ದೇಶಕ ರವಿವರ್ಮ ರಿಮೇಕ್ ರೈಟ್ಸ್ ಖರೀದಿಸಿದ್ದು, ರಿಷಬ್ ಶೆಟ್ಟಿ ನಿಭಾಯಿಸಿದ್ದ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ತೆಲುಗಿನಲ್ಲಿ ನಾನಿ ಹಾಗೂ ಹಿಂದಿಯಲ್ಲಿ ಆಯುಷ್ಮಾನ್ ಖುರಾನ್ ಬೆಲ್ ಬಾಟಮ್ ತೊಡೊದು ಪಕ್ಕಾ ಆಗಿದೆ. Body:ಈಗಾಗಲೇ ಇಬ್ಬರು ಸ್ಟಾರ್ ನಟರ ಜೊತೆ ರವಿವರ್ಮ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಅವರಿಬ್ಬರು ಬೆಲ್ ಬಾಟಮ್ ರಿಮೇಕ್ ನಲ್ಲಿ ನಟಿಸೋದು ಬಹುತೇಕ ಒಕೆ ಆಗಿದೆ ಎಂದು ರವಿವರ್ಮ ಈಟಿವಿ ಭಾರತ ತಿಳಿಸಿದ್ದಾರೆ. ಆದರೆ ತೆಲುಗು ಹಾಗೂ ಹಿಂದಿಯಲ್ಲಿ ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಹಾಗೂ ಯಾರು ನಾಯಕಿ ಯಾರು ಎಂಬುದು ಮಾತ್ರ ಇನ್ನೂ ಆಗಿಲ್ಲ.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.