ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಬಳಿಕ ಚೆಲುವಿನ ಚಿತ್ತಾರ ಸಿನಿಮಾದಿಂದ ಹೀರೋಯಿನ್ ಆದ ನಟಿ ಅಮೂಲ್ಯ. 2017ರಲ್ಲಿ ಉದ್ಯಮಿ ಜಗದೀಶ್ ಜೊತೆ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಅಮೂಲ್ಯ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದರು. ನಿನ್ನೆ ರಾಜರಾಜೇಶ್ವರಿ ನಗರ ನಿವಾಸದಲ್ಲಿ ಅಮೂಲ್ಯ ಅವರ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಸೀಮಂತ ಕಾರ್ಯಕ್ರಮವನ್ನು ಗ್ರೀನ್ ಥೀಮ್ನ ಸೆಟ್ ಹಾಕಿ ಮಾಡಲಾಯ್ತು.
ಈ ಅದ್ಧೂರಿ ಸೀಮಂತ ಕಾರ್ಯಕ್ರಮಕ್ಕೆ ಎರಡು ಕುಟುಂಬದವರು, ಬಂಧು-ಮಿತ್ರರು ಸಾಕ್ಷಿಯಾದರು. ಅಮೂಲ್ಯ ಸೀಮಂತ ಕಾರ್ಯಕ್ರಮಕ್ಕೆ ನಟ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ಕೂಡ ಬಂದು ಅಮೂಲ್ಯಗೆ ಶುಭ ಹಾರೈಸಿದ್ದಾರೆ.
ಇದರ ಜೊತೆಗೆ ಜಗದೀಶ್ ಕುಟುಂಬದವರು, ಸ್ನೇಹಿತರು ಅಮೂಲ್ಯಗೆ ಹಲವು ಶಾಸ್ತ್ರಗಳನ್ನ ಮಾಡುವ ಮೂಲಕ ಅಮೂಲ್ಯ ಆಸೆಯಂತೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.
ಇದನ್ನೂ ಓದಿ: 'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ