ETV Bharat / sitara

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜ್ವಾಲಾಗುಟ್ಟಾ - ನಟ ವಿಷ್ಣು ವಿಶಾಲ್​! - ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

ಭಾರತದ ಮಾಜಿ ಬ್ಯಾಡ್ಮಿಂಟನ್​ ಆಟಗಾರ್ತಿ ಜ್ವಾಲಾ ಗುಟ್ಟಾ ಹಾಗೂ ನಟ ವಿಷ್ಣು ವಿಶಾಲ್ ಇಂದು ಕೆಲವೇ ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Jwala Gutta
Jwala Gutta
author img

By

Published : Apr 22, 2021, 4:30 PM IST

ಹೈದರಾಬಾದ್​: ಭಾರತದ ಸ್ಟಾರ್​​ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ - ನಟ ವಿಷ್ಣು ವಿಶಾಲ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 20 ದಿನಗಳ ಹಿಂದೆ ತಾವು ಮದುವೆ ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದರು.

Jwala Gutta
ಮದುವೆ ಸಂಭ್ರಮದಲ್ಲಿ ಜ್ವಾಲಾ ಗುಟ್ಟಾ

ಇಂದು ಹೈದರಾಬಾದ್​​ನಲ್ಲಿ ಈ ಜೋಡಿಯ ವಿವಾಹ ಮಹೋತ್ಸವ ನಡೆದಿದೆ. ಕಳೆದ ಮೂರು ದಿನಗಳಿಂದ ಅರಿಶಿನ ಶಾಸ್ತ್ರ, ಮೆಹಂದಿ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮ ನಡೆದಿದ್ದು, ಇಂದು ಅದ್ಧೂರಿಯಾಗಿ ವಿವಾಹ ಮುಹೂರ್ತ ನೆರವೇರಿದೆ.

Badminton champion Jwala Gutta
ಜ್ವಾಲಾಗುಟ್ಟಾ-ನಟ ವಿಷ್ಣು ವಿಶಾಲ್

ಮದುವೆ ಸಂಭ್ರಮದ ವೇಳೆ ಕಿತ್ತಳೆ ಬಣ್ಣದ ಸೀರೆ ಹಾಕಿಕೊಂಡು ಜ್ವಾಲಾಗುಟ್ಟಾ ಕಂಗೊಳಿಸಿದ್ದು, ಅರಿಶಿನ ಶಾಸ್ತ್ರದಲ್ಲಿ ಹಳದಿ ಬಣ್ಣದ ಸೀರೆ ಹಾಕಿಕೊಂಡಿದ್ದರು. ಇನ್ನು ವಿಷ್ಣು ವಿಶಾಲ್ ನೀಲಿ ಬಣ್ಣದ ಶೇರ್ವಾನಿ ತೊಟ್ಟಿದ್ದರು.

Jwala Gutta
ಜ್ವಾಲಾಗುಟ್ಟಾ-ನಟ ವಿಷ್ಣು ವಿಶಾಲ್ ಮದುವೆ ಕಾರ್ಡ್​​

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿಯ ಕೆಲವೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಅನೇಕರು ಇವರ ಮದುವೆಗೆ ವಿಶ್​ ಮಾಡಿದ್ದಾರೆ. ಈ ಜೋಡಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ವಿಷ್ಣು ವಿಶಾಲ್​ ಹಾಗೂ ಕೆ. ನಟರಾಜ್​ ಪುತ್ರಿ ರಜನಿ ಪರಸ್ಪರ ಪ್ರೀತಿಸಿ 2010ರಲ್ಲಿ ವಿವಾಹವಾಗಿದ್ದರು. ಆದರೆ ಕಾರಣಾಂತರಗಳಿಂದ 2018ರಲ್ಲಿ ಈ ಜೋಡಿ ಬೇರ್ಪಟ್ಟಿತ್ತು.

Jwala Gutta
ಅರಿಶಿನ ಶಾಸ್ತ್ರದಲ್ಲಿ ಜ್ವಾಲಾಗುಟ್ಟಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.