ETV Bharat / sitara

'ಅಮೀರ್ ಖಾನ್ 3ನೇ ಮದುವೆ ವದಂತಿ ಸಂಪೂರ್ಣ ಸುಳ್ಳು' - ಅಮೀರ್ ಖಾನ್ ಮೂರನೇ ಮದುವೆ ವದಂತಿ

ಬಾಲಿವುಡ್​ನ ಅಮೀರ್​ ಖಾನ್​ ಮೂರನೇ ಮದುವೆ ಮಾಡಿಕೊಳ್ಳಲು ಸಿದ್ಧರಾಗುತ್ತಿದ್ದಾರೆಂಬ ವದಂತಿಗೆ ಇದೀಗ ಉತ್ತರ ಸಿಕ್ಕಿದ್ದು, ಆ ರೀತಿಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ನಟನ ಆಪ್ತ ಮೂಲಗಳು ಮಾಹಿತಿ ನೀಡಿವೆ.

B-town actor Aamir khan
B-town actor Aamir khan
author img

By

Published : Nov 22, 2021, 8:17 PM IST

ಮುಂಬೈ: ಕಳೆದ ಕೆಲ ತಿಂಗಳ ಹಿಂದೆ ಬಾಲಿವುಡ್​​ ನಟ ಅಮೀರ್​ ಖಾನ್​ (B-town actor Aamir Khan) ಹಾಗೂ ಅವರ ಎರಡನೇ ಪತ್ನಿ ಕಿರಣ್​ ರಾವ್ (Kiran Rao) ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇದರ ಬೆನ್ನಲ್ಲೇ ಅಮೀರ್​ ಖಾನ್​ ಮೂರನೇ ಮದುವೆ ಮಾಡಿಕೊಳ್ಳಲಿದ್ದಾರೆಂಬ ವದಂತಿ ಎಲ್ಲೆಡೆ ಹಬ್ಬಲು ಶುರುವಾಗಿತ್ತು. ಆದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಲಾಗಿದೆ.

ಬಾಲಿವುಡ್​ ನಟಿ ಕರೀನಾ ಕಪೂರ್ (Kareena Kapoor) ಖಾನ್​ ಜೊತೆ ನಟನೆ ಮಾಡಿರುವ ಲಾಲ್​ ಸಿಂಗ್​​ ಚಡ್ಡಾ (Laal Singh Chaddha) ಚಿತ್ರ ರಿಲೀಸ್ ನಂತರ ಅಮೀರ್ ಖಾನ್​​​ ಮೂರನೇ ಮದುವೆ ಮಾಡಿಕೊಳ್ಳಲಿದ್ದಾರೆಂಬ ಮಾತು ಕೇಳಿ ಬಂದಿತ್ತು. ಜೊತೆಗೆ ಶೀಘ್ರವೇ ಇದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆಂಬ ಮಾಹಿತಿ ಕೂಡ ಹಬ್ಬಿತ್ತು. ಅಮೀರ್ ಖಾನ್​ ಸಹ ನಟಿಯರೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಖುದ್ದಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅದಕ್ಕೆ ಪೂರ್ಣ ವಿರಾಮ ಇಡಲಾಗಿದ್ದು, ಮದುವೆ ವದಂತಿ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 'ಫಿಟ್​​ ಹೈ ತೋ ಹಿಟ್​ ಹೈ': 85ರ ಹರೆಯದಲ್ಲೂ 3 ಚಿನ್ನದ ಪದಕ ಗೆದ್ದ ಕ್ರೀಡಾಪ್ರೇಮಿ!

ಇವರ ಮದುವೆ ವದಂತಿ ಸುದ್ದಿ ಹರಿದಾಡಲು ಶುರುವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಲ್ಲ ಮೂಲಗಳು ಆ ರೀತಿಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೊಂದು ಸುದ್ದ ಸುಳ್ಳು ಎಂದಿದ್ದಾರೆ. "ಲಗಾನ್" ಚಿತ್ರದ ಸೆಟ್​ನಲ್ಲಿ ಅಶುತೋಷ್ ಗೋವಾರಿಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದ ಕಿರಣ್ ಅವರನ್ನು ಅಮೀರ್ 2005 ರಲ್ಲಿ ವಿವಾಹವಾದರು. 2011 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗ ಆಜಾದ್ ರಾವ್ ಖಾನ್​ನನ್ನು ಪಡೆದರು. 15 ವರ್ಷಗಳ ಬಳಿಕ ಜುಲೈ ತಿಂಗಳಲ್ಲಿ ವಿಚ್ಛೇದನ ಪಡೆದಿದ್ದಾರೆ.

ಲಾಲ್​​ ಸಿಂಗ್​ ಚಡ್ಡಾ ಚಿತ್ರ ಮುಂದಿನ ವರ್ಷದ ಏಪ್ರಿಲ್​​​ 14ರಂದು ರಿಲೀಸ್​​​ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.