ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಪ್ರೇಕ್ಷಕರ ಮನಸೂರೆಗೊಳಿಸಲು ಕನ್ನಡದ ಹಲವು ಸಿನಿಮಾಗಳು ಸಜ್ಜಾಗುತ್ತಿವೆ. ಈ ಚಿತ್ರಗಳ ಪೈಕಿ ಡಾ.ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾ ಕೂಡ ಒಂದು.
ಈ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಟೀಸರ್ ವಿಶೇಷತೆ ಅಂದ್ರೆ, 1969ರಲ್ಲಿ ರಿಲೀಸ್ ಆಗಿದ್ದ ರಾಜಣ್ಣ ಮತ್ತು ದ್ವಾರಕೀಶ್ ನಟನೆಯ "ಮೇಯರ್ ಮುತ್ತಣ್ಣ" ಸಿನಿಮಾದ ಒಂದು ಹಾಸ್ಯಮಯ ತುಣುಕಿನೊಂದಿಗೆ ಈ ಟೀಸರ್ ಪ್ರಾರಂಭವಾಗುತ್ತದೆ. ಇದರಲ್ಲಿ ಅಯ್ಯೊ ನಾ ಯಾ ಸೀಮೆ ಓದ್ ಓದಿರೋದು, ನಮ್ ಹಳ್ಳಿ ಉಸ್ಕೂಲ್ನ್ಲಾಗೆ ಬರೀ ಕನ್ನಡ ನಾಕ್ನೇ ಕ್ಲಾಸ್ ಓದಿರೋದು ಎಂಬ ರಾಜಣ್ಣನ ಸಂಭಾಷಣೆಯೊಂದಿಗೆ ಆಯುಷ್ಮಾನ್ ಭವ ಟೀಸರ್ ರಿಲೀಸ್ ಆಗಿದೆ.
ಈ ಟೀಸರ್ ನೋಡಿದ್ರೆ ಇದು ಪಕ್ಕಾ ಮಾಸ್ ಸಿನಿಮಾ ರೀತಿ ಮೂಡಿಬರುವ ಸಾಧ್ಯತೆಗಳಿವೆ. ಅಲ್ಲದೆ ಇದ್ರಲ್ಲಿ ಶಿವಣ್ಣನ ಡೈಲಾಗ್ ಒಂದಿದ್ದು, ಶಬ್ದನ ಇಷ್ಟ ಪಟ್ದಿದ್ಯ ಅಂದ್ರೆ ನಿನ್ ದೇಹದಲ್ಲಿ ತಾಳ ಅನ್ನೋದು ಹಾಗೆ ಇದೆ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನು ಸಿನಿಮಾದಲ್ಲಿ ಗ್ರಾಫಿಕ್ ಎಫೆಕ್ಟ್ ತುಂಬಾನೆ ಇದ್ದು, ಸುಮಾರು ಒಂದು ಗಂಟೆಯ ಕಾಲ ಗ್ರಾಫಿಕ್ನ್ನೇ ಬಳಸಲಾಗಿದೆ ಎಂದು ಈ ಹಿಂದೆಯೇ ಹೇಳಲಾಗಿತ್ತು.
- " class="align-text-top noRightClick twitterSection" data="">
ಸಿನಿಮಾವನ್ನು ಪಿ. ವಾಸು ನಿರ್ದೇಶನ ಮಾಡುತ್ತಿದ್ದು, ಬಿ.ಎಸ್ ದ್ವಾರಕೀಶ್, ಯೋಗೀಶ್ ದ್ವಾರಕೀಶ್ ಅವರು ದ್ವಾರಕೀಶ್ ಬ್ಯಾನರ್ನಡಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಚಿತ ರಾಮ್ ಮುಖ್ಯ ಭೂಮಿಕೆಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನವೆಂಬರ್ 1 ರಂದು ಬಿಡುಗಡೆಯಾಗಿ ಕನ್ನಡ ರಾಜ್ಯೋತ್ವದ ಉಡುಗೊರೆಯಾಗಲಿದೆ.