ETV Bharat / sitara

ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಆಘಾತ: ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಂದೆ ನಿಧನ - ಪುನೀತ್ ರಾಜ್​ಕುಮಾರ್​ ಮಾವ ನಿಧನ

ದಿವಂಗತ ನಟ ಪುನೀತ್ ರಾಜ್​ಕುಮಾರ್​ ಪತ್ನಿ ಅಶ್ವಿನಿ ​​ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ashwini-puneeth-rajkumar-father-passes-away
ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಂದೆ ನಿಧನ
author img

By

Published : Feb 20, 2022, 4:39 PM IST

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್​ಕುಮಾರ್​ ಅವರ ಮಾವ, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ತಂದೆ ಭಾಗಮನೆ ರೇವನಾಥ್​ ಹೃದಯಾಘಾತದಿಂದ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ದೊಡ್ಮನೆಯಲ್ಲಿ ಮತ್ತೆ ಶೋಕ ಮಡುಗಟ್ಟಿದೆ.

ಚಿಕ್ಕಮಗಳೂರು ಮೂಲದ ರೇವನಾಥ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

20 ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆಯಾಗಿ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಎನ್​ಹೆಚ್​ಎಐ ಮುಖ್ಯ ಇಂಜಿನಿಯರ್​ ಆಗಿ ರೇವನಾಥ್​ ನಿವೃತ್ತಿ ಹೊಂದಿದ್ದರು. ಪುನೀತ್​ ರಾಜ್​ಕುಮಾರ್​ ನಿಧನದ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ.

ಕೆಲ ತಿಂಗಳ ಹಿಂದೆ ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು, ಅವರ ಪತ್ನಿ ಅಶ್ವಿನಿ ಅವರಿಗೆ ತೀವ್ರ ಆಘಾತ ಉಂಟು ಮಾಡಿತ್ತು. ಆ ನೋವು ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಆಘಾತ ಎದುರಾಗಿದೆ.

ಇದನ್ನೂ ಓದಿ: ಸಿಎಂ ಆಗಿ ಕನ್ನಡ ಚಿತ್ರರಂಗಕ್ಕೆ ಯಡಿಯೂರಪ್ಪ ಎಂಟ್ರಿ: ಯಾವ ಚಿತ್ರ, ಕಥೆ ಏನು?

ಪುನೀತ್​ ನಿಧನಕ್ಕೆ ಇಂದಿಗೂ ಕೂಡ ಹಲವರು ಅಶ್ವಿನಿ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಪರಭಾಷೆಯ ಅನೇಕ ಸ್ಟಾರ್​ ಕಲಾವಿದರು ಪುನೀತ್​ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿಗೆ ಧೈರ್ಯ ತುಂಬುತ್ತಿದ್ದಾರೆ. ಇನ್ನೇನು ಅವರು ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.