ಹೈದರಾಬಾದ್ : ಬಾಲಿವುಡ್ ನಟಿ ಮಲೈಕಾ ಅರೋರಾ ಹುಟ್ಟು ಹಬ್ಬದ ಹಿನ್ನೆಲೆ ನಟ ಅರ್ಜುನ್ ಕಪೂರ್ ರೋಮ್ಯಾಂಟಿಕ್ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋವನ್ನು ಮಲೈಕಾ ಬೆಸ್ಟ್ ಫ್ರೆಂಡ್ ನಟಿ ಕರೀನಾ ಕಪೂರ್ ಖಾನ್ ಕ್ಲಿಕ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಮಲೈಕಾ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿರುವ ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಮುಖಪುಟದಲ್ಲಿ, 'ಈ ದಿನ ಮತ್ತು ಮುಂದಿನ ಎಲ್ಲಾ ದಿನಗಳು ನನಗೆ ನಿಮ್ಮನ್ನು ನಗಿಸಲು ಬೇಕು. ಈ ವರ್ಷ ನಿನಗೆ ಹೆಚ್ಚಿನ ನಗುತರಲಿ ಎಂದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಮಲೈಕಾ ರೀ ಕಮೆಂಟ್ ಮಾಡಿ, 'ನಾನು ಈ ಚಿತ್ರದಲ್ಲಿ ನಿನ್ನನ್ನು ನಗುವಂತೆ ಮಾಡುತ್ತಿದ್ದೇನೆ', ಎಂದು ತಮ್ಮ ಟೈಮ್‌ಲೈನ್‌ನಲ್ಲಿ ಬರೆದುಕೊಂಡಿದ್ದಾರೆ.
ಅರ್ಜುನ್ ಮಲೈಕಾ ರೋಮ್ಯಾಂಟಿಕ್ ಚಿತ್ರವನ್ನು ಕರೀನಾ ತಮ್ಮ ಮನೆಯಲ್ಲಿ ತೆಗೆದಿದ್ದಾರೆ. ಸದ್ಯ ಅರ್ಜುನ್ ಪೋಸ್ಟ್ಗೆ ಟ್ಟೀಟ್ ಮಾಡಿರುವ ಕರೀನಾ ಫೋಟೋ ಕ್ರೆಡಿಟ್ ಕೋಡುವಂತೆ ಕಾಲೆಳೆದಿದ್ದಾರೆ. ಅದಕ್ಕೆ ಅರ್ಜುನ್ @kareenakapoorkhan ಮುಂದಿನ ಫೋಟೋಶೂಟ್ ನೀವೇ ಮಾಡ್ಬೇಕು ಅದು ಮೆಹಬೂಬ್ ನಲ್ಲಿ ಅಂತಾ ರಿಪ್ಲೈ ಮಾಡಿದ್ದಾರೆ.