ETV Bharat / sitara

'ದೊಡ್ಮನೆ' ಆಟದಲ್ಲಿ ರನ್ನರ್ ಅಪ್ ಆದ ಬೈಕರ್ ಅರವಿಂದ್ ಕೆ ಪಿ.. - ಬೈಕರ್ ಅರವಿಂದ್ ಕೆ ಪಿ

ವೀಕ್ಷಕರಿಗೆ ಇದು ಹೊಸ ಮನರಂಜನೆ ನೀಡಿತು. ಹೀಗಾಗಿ, ಈ ಇಬ್ಬರ ಕಾಂಬೀನೇಷನ್ ನೋಡಲು ವೀಕ್ಷಕರು ಕಾಯುತ್ತಿದ್ದರು. ಇಬ್ಬರ ಸ್ನೇಹ ಆರಂಭವಾದಾಗಿನಿಂದಲೂ ಈ ಕ್ಷಣದವರೆಗೂ ದಿವ್ಯಾ ಹಾಗೂ ಅರವಿಂದ್ ಪಕ್ಕದಲ್ಲಿಯೇ ಕುಳಿತುಕೊಂಡಿದ್ದರು..

arvind-k-p
ಅರವಿಂದ್ ಕೆ ಪಿ
author img

By

Published : Aug 8, 2021, 11:00 PM IST

ಬಿಗ್​ಬಾಸ್​ ಸೀಸನ್ 8ರಲ್ಲಿ ಬೈಕರ್ ಅರವಿಂದ್ ಕೆ ಪಿ ಅವರು ರನ್ನರ್ ಅಪ್ ಆಗಿದ್ದಾರೆ. ಇಡೀ ಸೀಸನ್​ನಲ್ಲಿ ಹೆಚ್ಚು ಟಾಸ್ಕ್​​ಗಳಲ್ಲಿ ಗೆದ್ದು ಮಂಜು ಅವರಿಗೆ ಟಫ್ ಕಾಂಪಿಟೇಟರ್ ಆಗಿದ್ದರು. ಆದರೂ, ಮಂಜು ಅವರಿಗಿಂತ ಹೆಚ್ಚು ಮತ ಪಡೆದುಕೊಂಡಿದ್ದರು.

ಬಿಗ್ ಬಾಸ್ ಪ್ರವೇಶಿಸಿದ್ದು ಹೀಗೆ..

ಮನರಂಜನಾ ಕ್ಷೇತ್ರದಿಂದ ಬರದಿದ್ದವರು ಕೂಡ ತಮ್ಮ ಪ್ರತಿಭೆಯನ್ನು ಬಿಗ್ ಬಾಸ್ ಮನೆಯ ಮೂಲಕ ತೋರಿಸಬಹುದು ಎಂಬುದಕ್ಕೆ ಅರವಿಂದ್ ಉದಾಹರಣೆ ಆಗಿದ್ದಾರೆ. ಮೂಲತಃ ಉಡುಪಿಯವರಾದ ಅರವಿಂದ್ ಅವರು ವಿವಿಧ ರಾಷ್ಟ್ರಗಳಲ್ಲಿ ನಡೆದ ಬೈಕ್ ರೇಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಟಿವಿಎಸ್ ಕಂಪನಿ ಇವರ ಬೈಕ್ ರೇಸ್‌ಗಳಿಗೆ ಪ್ರಾಯೋಜಕತ್ವವನ್ನು ವಹಿಸಿದೆ.

ಹಲವಾರು ಬೈಕ್ ರೇಸ್​ನಲ್ಲಿ ಬಿದ್ದು ಗಾಯಗೊಂಡು ಶಸ್ತ್ರಚಿಕಿತ್ಸೆಗಳನ್ನು ಕೂಡ ಮಾಡಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದಾಗಿ ಯಾವುದೇ ರೇಸ್‌ಗಳಿಲ್ಲದೆ ಇದ್ದ ಅರವಿಂದ್ ಅವರನ್ನು ಕೈಬೀಸಿ ಕರೆದಿದ್ದು ಬಿಗ್‌ಬಾಸ್. ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿದಾಗ ಅರವಿಂದ್ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅಲ್ಲದೆ, ಅವರು ಈ ಮನೆಯಲ್ಲಿ ಕೊನೆಯವರೆಗೂ ಉಳಿಯುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ.

ಆದರೆ, ಅರವಿಂದ ತಾವು ಇರುವಂತೆಯೇ ಬಿಗ್‌ಬಾಸ್ ಮನೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ತೋರಿಸಿಕೊಂಡು ಬಂದರು. ತಪ್ಪಿದಾಗ ತಪ್ಪು, ಸರಿ ಇದ್ದರೆ ಸರಿ ಎಂದು ಮನೆಯಲ್ಲಿ ಮುಂದೆ ಬಂದವರು ಅರವಿಂದ್. ಹೀಗಾಗಿ, ತಮ್ಮ ನೈಜ ವ್ಯಕ್ತಿತ್ವವನ್ನು ಮೊದಲ ವಾರದಿಂದಲೇ ವೀಕ್ಷಕರಿಗೆ ಮನಮುಟ್ಟಿಸಿದರು.

ಅರವಿಂದ್ ಮೊದಲ ವಾರದಿಂದಲೇ ಟಾಸ್ಕ್‌ನಲ್ಲಿ ಮುಂದಿದ್ದರು. ಯಾವುದೇ ಟಾಸ್ಕ್ ಆದರೂ ಭೀತಿ ಇಲ್ಲದೇ ಮುನ್ನುಗ್ಗಿದರು. ಆದರೆ, ಮನರಂಜನೆ ನೀಡುವಲ್ಲಿ ವಿಫಲವಾಗಿದ್ದರು. ಆದರೆ, ದಿವ್ಯ ಉರುಡುಗ ಅವರೊಂದಿಗೆ ಸ್ನೇಹ ಅತಿ ಹೆಚ್ಚಾಗಿ ಬೆಳೆಸಿಕೊಂಡಿದ್ದರು. ನಂತರದ ದಿನಗಳಲ್ಲಿ ಅದು ಪ್ರೀತಿಯಾಗಿಯೂ ಬದಲಾಗಿದೆ.

ವೀಕ್ಷಕರಿಗೆ ಇದು ಹೊಸ ಮನರಂಜನೆ ನೀಡಿತು. ಹೀಗಾಗಿ, ಈ ಇಬ್ಬರ ಕಾಂಬೀನೇಷನ್ ನೋಡಲು ವೀಕ್ಷಕರು ಕಾಯುತ್ತಿದ್ದರು. ಇಬ್ಬರ ಸ್ನೇಹ ಆರಂಭವಾದಾಗಿನಿಂದಲೂ ಈ ಕ್ಷಣದವರೆಗೂ ದಿವ್ಯಾ ಹಾಗೂ ಅರವಿಂದ್ ಪಕ್ಕದಲ್ಲಿಯೇ ಕುಳಿತುಕೊಂಡಿದ್ದರು.

ಅರವಿಂದ್, ದಿವ್ಯಾ ಅವರಿಗೆ ಸದಾ ಸಲಹೆ, ಆರೈಕೆ ಮಾಡುತ್ತಲೇ ಇದ್ದರು. ಆದರೂ, ತಮ್ಮ ಆಟದ ಬಗ್ಗೆ ಫೋಕಸ್ ಹೊಂದಿದ್ದ ಅರವಿಂದ್ ಫರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದರು. ಆದರೆ, ಮನರಂಜಿಸುವಲ್ಲಿ ವಿಫಲವಾಗಿದ್ದರು‌. ಹೀಗಾಗಿ, ರನ್ನರ್ ಅಪ್​ಗೆ ತೃಪ್ತಿ ಪಡಬೇಕಾಯಿತು ಅರವಿಂದ್.

ಓದಿ: ನನ್ನ ಬೆಸ್ಟ್ ನಾನು ನೀಡಿದ್ದೀನಿ, ಟಾಪ್ ನಾಲ್ಕು ಬಂದಿದ್ದು ಖುಷಿ ನೀಡಿದೆ.. ವೈಷ್ಣವಿ ಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.