ETV Bharat / sitara

ಜೇಮ್ಸ್ ಸಿನಿಮಾದಲ್ಲಿ ಶಿವಣ್ಣ​​, ನಾನು ನಟಿಸಿರುವುದು ಪ್ರಚಾರದ ಗಿಮಿಕ್ ಅಲ್ಲ: ರಾಘವೇಂದ್ರ ರಾಜ್​ಕುಮಾರ್ - Raghavendra Rajkumar says acting in James movie is not for publicity

ಪಾರ್ವತಮ್ಮ ರಾಜ್ ಕುಮಾರ್ ಅವ್ರು, ರಾಜ್ ಕುಮಾರ್ ಜೊತೆ ಮಕ್ಕಳಾದ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಹಾಕಿ ಒಂದು ಸಿನಿಮಾ ಮಾಡುವ ಕನಸು ಕಂಡಿದ್ರಂತೆ. ಆದ್ರೆ ಆ ಆಸೆ ಸಹ ಈಡೇರಲಿಲ್ಲ. ಈಗ ಅಪ್ಪಾಜಿ ಇಲ್ಲದೆ, ಜೇಮ್ಸ್ ಚಿತ್ರದಲ್ಲಿ ನಾವು ಒಟ್ಟಿಗೆ ನಟಿಸಿದ್ವಿ. ಇದು ಪ್ರಚಾರದ ಗಿಮಿಕ್ ಅಲ್ಲ. ಅಲ್ಲದೆ ಅಪ್ಪು ಚಿತ್ರಕ್ಕೆ ಪ್ರಚಾರ ಮಾಡುವವರು ಯಾರೂ ಇಲ್ಲವೆಂದು ಹಿರಿಯ ನಟ ರಾಘವೇಂದ್ರ ರಾಜ್​ ಕುಮಾರ್​ ಹೇಳಿದ್ದಾರೆ.

Raghavendra Raj Kumar
ಜೇಮ್ಸ್‌ ಸಿನಿಮಾದಲ್ಲಿ ನಟನೆ ಪ್ರಚಾರದ ಗಿಮಿಕ್‌ ಅಲ್ಲ
author img

By

Published : Jan 24, 2022, 4:57 PM IST

Updated : Jan 24, 2022, 5:02 PM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನದ ನೋವನ್ನು ಅಭಿಮಾನಿಗಳಲ್ಲದೆ, ಇಡೀ ರಾಜ್ ಕುಟುಂಬಕ್ಕೇ ಮರೆಯೋದಕ್ಕೆ ಆಗ್ತಾ ಇಲ್ಲ. ಈ ಮಧ್ಯೆ ಪವರ್ ಸ್ಟಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ರಾಘವೇಂದ್ರ ರಾಜ್​ಕುಮಾರ್

ಸ್ತಬ್ಧ ಸಿನಿಮಾದಲ್ಲಿ ನಟಿಸುತ್ತಿರುವ ನಟ ರಾಘವೇಂದ್ರ ರಾಜ್ ಕುಮಾರ್, ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವ್ರು, ರಾಜ್ ಕುಮಾರ್ ಜೊತೆ ಮಕ್ಕಳಾದ ಶಿವಣ್ಣ, ರಾಘಣ್ಣ ಹಾಗು ಅಪ್ಪು ಹಾಕಿ ಒಂದು ಸಿನಿಮಾ ಮಾಡುವ ಕನಸು ಕಂಡಿದ್ರಂತೆ.

Raghavendra Raj Kumar
ಮಕ್ಕಳೊಂದಿಗೆ ಪಾರ್ವತಮ್ಮ ರಾಜ್​ ಕುಮಾರ್​​

ಒಮ್ಮೆ ಪಾರ್ವತಮ್ಮ ರಾಜ್ ಕುಮಾರ್ ಕೆಜಿ ರಸ್ತೆಯಲ್ಲಿ ಕಾರಲ್ಲಿ ಹೋಗಬೇಕಾದ್ರೆ, ಗಂಡ ಹಾಗು ಮಕ್ಕಳಾದ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಕಟೌಟ್​​ಗಳನ್ನ ನೋಡಿ, ರಾಜ್​ಕುಮಾರ್​​ ಜೊತೆ ಮಕ್ಕಳ ಸಿನಿಮಾ ಮಾಡುವ ಆಸೆಯನ್ನ ವ್ಯಕ್ತಪಡಿಸಿದ್ರಂತೆ. ಆಗ ಡಾ. ರಾಜ್​ ಕುಮಾರ್​ ಅವರು ದೇವರು ಎಲ್ಲಾ ಕೊಡ್ತಾನೆ ಅಂತ ಹೇಳೋಕೆ ಆಗಲ್ಲ ಅಂದಿದ್ರಂತೆ. ಕೊನೆಗೂ ಅದೇ ರೀತಿ ಅಯ್ತು. ಅಪ್ಪಾಜಿ ಜೊತೆ ನಾವೆಲ್ಲ ನಟಿಸೋಕೆ ಅಗಲಿಲ್ಲ. ಅಮ್ಮ ನೀವು ಮೂರು ಜನ ಒಟ್ಟಿಗೆ ನಟಿಸಿ ಅಂತ ಸಾಕಷ್ಟು ಸಲ ಹೇಳಿದ್ರು. ಆದರೆ ಆ ಆಸೆ ಸಹ ಈಡೇರಲಿಲ್ಲ. ಈಗ ಅಪ್ಪಾಜಿ ಇಲ್ಲದೆ, ಜೇಮ್ಸ್ ಚಿತ್ರದಲ್ಲಿ ನಾವು ಒಟ್ಟಿಗೆ ನಟಿಸಿದ್ವಿ. ಜೇಮ್ಸ್ ಚಿತ್ರದಲ್ಲಿ ನಾನು, ಶಿವಣ್ಣ ನಟಿಸದೇ ಹೋಗಿದ್ರೆ ಇನ್ಯಾವತ್ತು ಈ ಅವಕಾಶ ಸಿಗ್ತಿರಲಿಲ್ಲ. ಅದಕ್ಕೆ ಜೇಮ್ಸ್ ಚಿತ್ರದಲ್ಲಿ ತುಂಬಾ ನೋವಿನಲ್ಲೇ ನಟಿಸಿದ್ದೀವಿ. ಜೇಮ್ಸ್ ಚಿತ್ರದಲ್ಲಿ ನಾವು ನಟಿಸಿರೋದು ಪ್ರಚಾರದ ಗಿಮಿಕ್ ಅಲ್ಲ. ಅಲ್ಲದೆ ಅಪ್ಪು ಚಿತ್ರಕ್ಕೆ ಪ್ರಚಾರ ಮಾಡುವವರು ಯಾರೂ ಇಲ್ಲ. ಜೇಮ್ಸ್ ಚಿತ್ರದಲ್ಲಿ ನಾವು ನಟಿಸಿದ ಈ ಪಾತ್ರಗಳು ಮೊದಲೇ ಫಿಕ್ಸ್ ಆಗಿದ್ವು ಎಂದು ಸ್ಪಷ್ಟಪಡಿಸಿದ್ದಾರೆ.

Raghavendra Raj Kumar
ಒಂದೇ ಫ್ರೇಮ್​ನಲ್ಲಿ ಅಣ್ಣ ತಮ್ಮಂದಿರು

ಇದನ್ನೂ ಓದಿ: ಅಪ್ಪು ಕನಸಿನ 'ಒನ್‌ ಕಟ್ ಟು ಕಟ್' ಸಿನಿಮಾ ಬಿಡುಗಡೆ ಡೇಟ್ ಪ್ರಕಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್..

ಶೂಟಿಂಗ್​ ಇನ್ನೂ ಪೂರ್ತಿ ಆಗಿರಲಿಲ್ಲ, ಅದಕ್ಕಾಗಿ ನಾನು ಶಿವಣ್ಣ ಈ ಚಿತ್ರದಲ್ಲಿ ನಟಿಸಿದ್ದೇವೆ. ಅವನಿಲ್ಲದೆ ಈ ಚಿತ್ರದಲ್ಲಿ ನಟಿಸಬೇಕಾಯ್ತಲ್ಲ ಅನ್ನೋ ನೋವಿದೆ. ಅಲ್ಲದೆ ಅವನ ಜೊತೆ ನಮಗೆ ಒಂದು ಸೀನ್ ಇಲ್ಲವಲ್ಲ ಅನ್ನೋ ಕೊರಗಿದೆ. ಜೇಮ್ಸ್ ಚಿತ್ರದ ನಿರ್ದೇಶಕ ನಮಗೆ ಈ ಕತೆ ಹೇಳುವಾಗ ಕಣ್ಣೀರಿಡುತ್ತಲೇ ಹೇಳಿದ್ರು. ಶೂಟಿಂಗ್ ಸೆಟ್​ನಲ್ಲಿ ಪ್ರತಿಯೊಬರಲ್ಲೂ ಅಪ್ಪು ಇಲ್ಲ ಅನ್ನೋ ನೋವಿತ್ತು. ಈ ಸಿನಿಮಾ ನೋಡಿದ ಮೇಲೆ ನಮ್ಮ ಪಾತ್ರಗಳು ಜನರಿಗೆ ಇಷ್ಟ ಆಗುತ್ತವೆ ಎಂದು ರಾಘವೇಂದ್ರ ರಾಜ್ ಕುಮಾರ್ ಅಭಿಪ್ರಾಯಪಟ್ಟರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 24, 2022, 5:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.