ನಾನು ಬೆಳೆದು ದೊಡ್ಡವಳಾದ ಮೇಲೆ ಸ್ಟಾರ್ ಹೀರೋಯಿನ್ ಆಗುತ್ತೇನೆ ಅಂತ ಈ ಮುದ್ದು ಮಗುವಿಗೆ ಆಗಲೇ ತಿಳಿದಿತ್ತೋ ಏನೋ. ಆಗಲೇ ಅಮ್ಮನ ಸೀರೆಯುಟ್ಟು ಕ್ಯಾಟ್ವಾಕ್ ಮಾಡಲು ಆರಂಭಿಸಿತ್ತಂತೆ ಈ ಮಗು.
ಪುಟ್ಟ ಪುಟ್ಟ ಜುಟ್ಟು, ಗಿಂಡಬೇಕೆನಿಸುವ ಕೆನ್ನೆಗಳು, ನೋಡಿದ ಕೂಡಲೇ ಮುದ್ದು ಮಾಡಬೇಕೆನಿಸುವ ಈ ಬೇಬಿ ಬೇರಾರೂ ಅಲ್ಲ. 'ವಚ್ಚಿಂದೆ ಪಿಲ್ಲ ಮೆಲ್ಲಗೆ ವಚ್ಚಿಂದೆ' ಎಂದು ಹಾಡುತ್ತಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ರೌಡಿ ಬೇಬಿ ಸಾಯಿ ಪಲ್ಲವಿ. ಅಭಿನಯಕ್ಕಿಂತ ಹೆಚ್ಚಾಗಿ ತನ್ನ ಡ್ಯಾನ್ಸ್ನಿಂದಲೇ ಎಲ್ಲರನ್ನು 'ಫಿದಾ' ಆಗುವಂತೆ ಮಾಡಿದವರು ಈಕೆ. ಪಲ್ಲವಿ ಯಾವ ಡ್ಯಾನ್ಸ್ ಸ್ಕೂಲ್ಗೂ ಹೋಗದೆ ಡ್ಯಾನ್ಸ್ ಕಲಿತದ್ದಂತೆ. ಡಾಕ್ಟರ್ ಆಗಬೇಕೆಂದುಕೊಂಡಿದ್ದ ಪಲ್ಲವಿ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬರುವಂತಾಯಿತು. ಸದ್ಯಕ್ಕೆ ಈ ಪಿಂಪಲ್ ಬ್ಯೂಟಿ ತೆಲುಗಿನ 'ವಿರಾಟ ಪರ್ವಂ 1992 ' ಚಿತ್ರದಲ್ಲಿ ಬ್ಯುಸಿಯಿದ್ದಾರೆ.
- " class="align-text-top noRightClick twitterSection" data="
">