ದುಬೈ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೆಲವೇ ತಿಂಗಳಲ್ಲಿ ತಂದೆ-ತಾಯಿ ಆಗಲಿದ್ದು, ಇದೇ ಖುಷಿಯಲ್ಲಿ ಅನುಷ್ಕಾ ಕಾಲ ಕಳೆಯುತ್ತಿದ್ದಾರೆ. ತಾಯಿ ಆಗುವ ಖುಷಿಯಲ್ಲಿರುವ ನಟಿ ಬೇಬಿ ಬಂಪ್ ಪೋಟೋ ಹಂಚಿಕೊಂಡಿದ್ದಾರೆ.
ಸ್ವಿಮ್ಮಿಂಗ್ ಪೂಲ್ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿರುವ ನಟಿ ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
- " class="align-text-top noRightClick twitterSection" data="
">
ಅನುಷ್ಕಾ ಶರ್ಮಾ ಸದ್ಯ ದುಬೈನಲ್ಲಿ ಪತಿ ವಿರಾಟ್ ಕೊಹ್ಲಿ ಜೊತೆ ಕಾಲಕಳೆಯುತ್ತಿದ್ದು, ಇದರ ಮಧ್ಯೆ ಬೇಬಿ ಬಂಪ್ ಫೋಟೋ ಹರಿಬಿಟ್ಟಿದ್ದಾರೆ. 2021ರ ಜನವರಿಯಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 2017ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.