ಖ್ಯಾತ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ತೆಲುಗು, ತಮಿಳು, ಮಲಯಾಳಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ 'ನಟಸಾರ್ವಭೌಮ' ಚಿತ್ರದಲ್ಲಿ ಕೂಡಾ ಅನುಪಮಾ ಪುನೀತ್ ರಾಜ್ಕುಮಾರ್ ಜೊತೆ ನಟಿಸಿದ್ದರು.
ಅನುಪಮಾ ಪರಮೇಶ್ವರನ್ ಇದೀಗ ಭಾರೀ ದು:ಖದಲ್ಲಿದ್ದಾರೆ. ಅದಕ್ಕೆ ಕಾರಣ ಕೊರೊನಾ ವೈರಸ್ ಆಗಲೀ, ಚಿತ್ರರಂಗದವರ ನಿಧನವಾಗಲೀ ಅಲ್ಲ, ಅನುಪಮಾ ಅವರ ಎರಡು ಮುದ್ದಿನ ನಾಯಿಮರಿಗಳಾದ 'ರಮ್' ಹಾಗೂ 'ಟಾಡಿ' ಪರವೋ ವೈರಸ್ ಅಟ್ಯಾಕ್ ಆಗಿ ಸತ್ತುಹೋಗಿವೆ. ಇದಕ್ಕೆ ಅನುಪಮಾ ಬಹಳ ದು:ಖದಲ್ಲಿದ್ದಾರೆ. ಅನುಪಮಾ ಅವರ ಬಳಿ ಮೂರು ನಾಯಿಮರಿಗಳಿದ್ದವು. ಆ ನಾಯಿಮರಿಗಳಿಗೆ ವಿಸ್ಕಿ, ರಮ್ ಹಾಗೂ ಟಾಡಿ ಎಂದು ಅನುಪಮಾ ಹೆಸರಿಟ್ಟಿದ್ದರು. ಅವುಗಳಲ್ಲಿ 'ರಮ್' ಕಳೆದ ಮೇನಲ್ಲಿ ಸಾವನ್ನಪಿತು. ಜೂನ್ 8 ರಂದು 'ಟಾಡಿ' ಸಾವನ್ನಪಿತು.
- " class="align-text-top noRightClick twitterSection" data="
">
ತಮ್ಮ ಮುದ್ದಿನ ನಾಯಿಮರಿಗಳ ಬಗ್ಗೆ ಅನುಪಮಾ ಪರಮೇಶ್ವನ್ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದು ಪೆಟ್ಸ್ ಸಾಕುವವರಿಗೆ ವೈರಸ್ನಿಂದ ಜಾಗೃತರಾಗಿರಿ ಎಂದು ಮನವಿ ಮಾಡಿದ್ದಾರೆ.
- " class="align-text-top noRightClick twitterSection" data="
">