ETV Bharat / sitara

ಒಂದೂವರೆ ವರ್ಷದ ಗ್ಯಾಪ್​.. ನಿರೂಪಕಿಯಾಗಿ ಮತ್ತೆ ಕಿರುತೆರೆಗೆ ಮರಳಿದ ಅನುಪಮಾ ಗೌಡ - ರಾಜರಾಣಿ ರಿಯಾಲಿಟಿ ಶೋ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ರಾಜರಾಣಿ'ಯ ನಿರೂಪಕಿಯಾಗಿ ಅನುಪಮಾ ಕಿರುತೆರೆಗೆ ಕಾಲಿಡಲಿದ್ದಾರೆ.

Anupama Gowda
ಒಂದೂವರೆ ವರ್ಷದ ನಂತರ ನಿರೂಪಕಿಯಾಗಿ ಕಿರುತೆರೆಗೆ ಮರಳಿದ 'ಅನುಪಮಾ ಗೌಡ'
author img

By

Published : Jul 8, 2021, 10:10 AM IST

ಕನ್ನಡ ಕೋಗಿಲೆ, ಮಜಾ ಭಾರತ ಶೋಗಳನ್ನು ನಿರೂಪಿಸಿರುವ ಅನುಪಮಾ ಗೌಡ ಈಗ ಮರಳಿ ನಿರೂಪಣೆಗೆ ಬಂದಿದ್ದಾರೆ. ಈ ಬಾರಿ ರಿಯಲ್ ಲೈಫ್ ದಂಪತಿಗಳಿಗೆ ಗೇಮ್ ಶೋ ನಡೆಸಿಕೊಡಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ರಾಜರಾಣಿ'ಯ ನಿರೂಪಕಿಯಾಗಿ ಅನುಪಮಾ ಕಿರುತೆರೆಗೆ ಕಾಲಿಡಲಿದ್ದಾರೆ.

ಸದ್ಯ ಈ ಶೋ ಬರಲಿದ್ದು, ನೇಹಾ ರಾಮಕೃಷ್ಣ, ಚಂದನ್ ಗೌಡ, ನಿವೇದಿತಾ ಗೌಡ, ಚಂದನ್ ಶೆಟ್ಟಿ ದಂಪತಿಗಳು ಸೇರಿದಂತೆ 12 ಸೆಲೆಬ್ರಿಟಿ ದಂಪತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

Anupama Gowda
ನಿರೂಪಕಿ ಅನುಪಮಾ ಗೌಡ

ಈ ಬಗ್ಗೆ ಮಾತನಾಡಿರುವ ಅನುಪಮಾ ಗೌಡ, 'ನಾನು ಒಂದೂವರೆ ವರ್ಷದ ನಂತರ ಸೆಟ್​ಗೆ ಬಂದಿದ್ದೇನೆ. ನನ್ನ ಮೊದಲಿನ ಶೋಗಳು ಇದಕ್ಕಿಂತ ವಿಭಿನ್ನವಾಗಿದ್ದವು. ಕನ್ನಡ ಕೋಗಿಲೆ ಸಂಗೀತ ಶೋ ಹಾಗೂ ಮಜಾ ಭಾರತ ಶೋ ಕಾಮಿಡಿ ಒಳಗೊಂಡಿತ್ತು. ಎರಡು ಶೋಗಳು ತೀರ್ಪುಗಾರರನ್ನು ಒಳಗೊಂಡಿದ್ದವು. ಹೀಗಾಗಿ, ನನ್ನ ಪಾತ್ರ ಮಿತಿ ಹೊಂದಿತ್ತು. ರಾಜರಾಣಿ ಶೋ ಗೇಮ್ ಮೂಲಕ ಜೋಡಿಗಳ ಸಂಬಂಧವನ್ನು ಪ್ರದರ್ಶಿಸುತ್ತದೆ. ನಾನು ಶೋನ ಜವಾಬ್ದಾರಿ ಹೊಂದಿದ್ದೇನೆ. ಈಗಾಗಲೇ ಶೋನ ಮೊದಲು ಸಂಚಿಕೆ ಶೂಟಿಂಗ್ ಆಗಿದೆ. ಇದು ಸವಾಲಿನಿಂದ ಕೂಡಿತ್ತು. ನಾನು ಅವರ ಕೆಮಿಸ್ಟ್ರಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಗೇಮ್ ಮಾತ್ರವಲ್ಲದೇ ಜೋಡಿಗಳು ತಮ್ಮ ಬಗ್ಗೆ ತಿಳಿಯದ ವಿಷಯಗಳನ್ನು ಬಿಚ್ಚಿಡುತ್ತಾರೆ' ಎಂದಿದ್ದಾರೆ.

Anupama Gowda
ನಿರೂಪಕಿ ಅನುಪಮಾ ಗೌಡ

ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಅನುಪಮಾ ಗೌಡ, ಬರೋಬ್ಬರಿ ಒಂದೂವರೆ ವರ್ಷಗಳ ಸುದೀರ್ಘ ಗ್ಯಾಪ್​ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದು, ನಿರೂಪಕಿಯಾಗಿ ಮತ್ತೆ ಕಿರುತೆರೆ ವೀಕ್ಷಕರಿಗೆ ಮನರಂಜನೆ ಉಣಬಡಿಸಲು ತಯಾರಾಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಚಪಾತಿ ಸದ್ದು: ಪ್ರಶಾಂತ್​-ಅರವಿಂದ್​ ಟಾಕ್​ವಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.