ETV Bharat / sitara

ಸ್ಯಾಂಡಲ್​​ವುಡ್​​ ಡ್ರಗ್ಸ್ ದಂಧೆ ಪ್ರಕರಣ: ಕಾರ್ತಿಕ್​ ರಾಜ್​ನಿಂದ ಮತ್ತೊಂದು ಹೆಸರು ಬಹಿರಂಗ!

ಸ್ಯಾಂಡಲ್​​ವುಡ್​​ನ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಇದೀಗ ಒಬ್ಬೊಬ್ಬರದ್ದೇ ಹೆಸರು ಬಯಲಿಗೆ ಬರುತ್ತಿದೆ. ಸಿಸಿಬಿ ವಶದಲ್ಲಿರುವ ಕಾರ್ತಿಕ್​ ರಾಜ್​ ಇದೀಗ ಮತ್ತೊಂದು ಹೊಸ ಬಾಂಬ್​ ಸಿಡಿಸಿದ್ದಾನೆ.

author img

By

Published : Sep 4, 2020, 8:12 PM IST

Another name revealed from Karthik Raj
ಕಾರ್ತಿಕ್​ ರಾಜ್​

ಬೆಂಗಳೂರು : ಸ್ಯಾಂಡಲ್​​ವುಡ್ ನಟ - ನಟಿಯರ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ವಶದಲ್ಲಿರುವ ಕಾರ್ತಿಕ್​ ರಾಜ್​ ಹಾಗೂ ಅನಿಕಾ ಗ್ಯಾಂಗ್​ ಲಿಂಕ್​ ಇರುವ ಸಂಗತಿ ಬೆಳಕಿಗೆ ಬಂದಿದೆ. ಕಾರ್ತಿಕ್​ ರಾಜ್ ತನ್ನೊಂದಿಗಿದ್ದ ಪರಿಚಯಯಸ್ಥರ ಹೆಸರನ್ನು ಇದೀಗ ಬಹಿರಂಗಪಡಿಸಿದ್ದಾನೆ ಎನ್ನಲಾಗುತ್ತಿದೆ.

ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಸ್ನೇಹಿತನಾಗಿದ್ದ ಕಾರ್ತಿಕ್​ ರಾಜ್​ಗೆ ಕೇಂದ್ರದ ನಾರ್ಕೋಟಿಕ್ ಕಂಟ್ರೋಲ್‌ ಬ್ಯೂರೋ (ಎನ್​ಸಿಬಿ) ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಪೈಕಿ ಓರ್ವನಾದ ಅನೂಪ್ ಮೊಹಮ್ಮದ್​ನ ಪರಿಚಯವಿದೆಯಂತೆ.

ಈ ಬಗ್ಗೆ ಸಿಸಿಬಿ ತನಿಖಾಧಿಕಾರಿಗಳ ಮುಂದೆ ಕಾರ್ತಿಕ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಕಾರ್ತಿಕ್ ಆಯೋಜಿಸಿದ್ದ ಪಾರ್ಟಿಗಳಲ್ಲಿ ಅನೂಪ್ ಸಹ ಭಾಗಿಯಾಗುತ್ತಿದ್ದ. ಆದರೆ, ಈ ಡ್ರಗ್ಸ್​ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಕೆಲ ವರ್ಷಗಳಿಂದ ಸಿಸಿಬಿ ಬಂಧನಕ್ಕೆ ಒಳಗಾಗಿದ್ದ ಪ್ರತೀಕ್‌ ಶೆಟ್ಟಿ ಆರೋಪಿಯೊಂದಿಗೆ ನಂಟು ಇರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಸ್ಯಾಂಡಲ್​ವುಡ್ ನಟ ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪದಡಿ ಅನಿಕಾ, ಅನೂಪ್ ಸೇರಿದಂತೆ ಮೂವರು ಆರೋಪಿಗಳನ್ನು ಎನ್​ಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ನಟ - ನಟಿಯರಿಗೆ ಮಾದಕ ವಸ್ತು ಸಪ್ಲೈ ಮಾಡುತ್ತಿರುವುದಾಗಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟಿದ್ದಾರೆ. ಮೂಲಗಳ ಪ್ರಕಾರ ಕಾರ್ತಿಕ್ ರಾಜ್​ನನ್ನು ಬಂಧಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.