ಸ್ಯಾಂಡಲ್ವುಡ್ನಲ್ಲಿ ಲಕ್ಷ್ಮಣ ಹಾಗೂ ಪಂಟ ಚಿತ್ರದಲ್ಲಿ ನಟಿಸಿದ್ದ ಮಾಜಿ ಸಚಿವ ರೇವಣ್ಣ ಪುತ್ರ ಅನೂಪ್ ರೇವಣ್ಣ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಪಂಟ ಚಿತ್ರದ ನಂತರ ಎರಡು ವರ್ಷ ವಿರಾಮ ತೆಗೆದುಕೊಂಡಿದ್ದ ಅನೂಪ್ ಈಗ 'ಗಣ'ನಾಗಿ ತೆರೆ ಮೇಲೆ ಬರೋಕೆ ರೆಡಿ ಆಗಿದ್ದಾರೆ.
ಆ್ಯಕ್ಷನ್ ಹೀರೋ ಅನೂಪ್ 25 ನೇ ವರ್ಷದ ಬರ್ತಡೇ ಪ್ರಯುಕ್ತ 'ಗಣ' ಚಿತ್ರವನ್ನ ಅನೌನ್ಸ್ ಮಾಡಿ ಟೈಟಲ್ ಲಾಂಚ್ ಮಾಡಲಾಯ್ತು .ಈ ಚಿತ್ರದಲ್ಲಿ ಅನೂಪ್ ಬಿಲಿಯನೇರ್ ಮಗನಾಗಿ ವಿದೇಶದಿಂದ ಹಳ್ಳಿಗೆ ಬಂದು ಜನರಿಗೆ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಹೊಸ ನಿರ್ದೇಶಕ ಶಿವ ಮಧು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಸ್ಟೋರಿಗಳನ್ನ ಕೇಳಿದ ನಂತ್ರ ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ.
ಅಲ್ಲದೆ ಅನೂಪ್ ರೇವಣ್ಣ ಚೈನಾದಲ್ಲಿ ಕುಂಗ್ ಫೂ ಕಲಿತು ಬಂದಿದ್ದಾರೆ. ಅಲ್ಲದೆ ಅಮೆರಿಕಾದಲ್ಲಿ ಕೆಲವು ಶಾರ್ಟ್ ಫಿಲಂಗಳನ್ನು ಮಾಡಿ ಸಾಕಷ್ಟು ತಯಾರಿಯೊಂದಿಗೆ ಮೂರನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. ಇನ್ನು ಈ ಚಿತ್ರ ವತ್ಸಲಾ ರೇವಣ್ಣ ನಿರ್ಮಾಣದಲದಲ್ಲಿ ಮೂಡಿ ಬರ್ತಿದ್ದು, 'ಗಣ' ಸಿನಿಮಾಗೆ ಮುಂದಿನ ತಿಂಗಳು ಮುಹೂರ್ತವಾಗಲಿದೆ.