ETV Bharat / sitara

ವಿಕಲಾಂಗರ ಕುರಿತು ಸಿನಿಮಾದಲ್ಲಿ ಅವಹೇಳನ.. ಕ್ಷಮೆಯಾಚಿಸಿದ ಆಸ್ಕರ್ ವಿನ್ನಿಂಗ್ ನಟಿ

ಹಾಲಿವುಡ್ ವರದಿಯ ಪ್ರಕಾರ, ವಾರ್ನರ್ ಬ್ರದರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಖಳನಟಿಯಂತಹ ಶೇಡ್​​ನಲ್ಲಿ ಹ್ಯಾಥ್​​​​ವೇ ನಟಿಸುತ್ತಿದ್ದಾರೆ. ಇವರ ಎರಡೂ ಕೈಯಲ್ಲಿ ಬೆರಳನ್ನು ವಿಕಾರಗೊಳಿಸಿ ಚಿತ್ರಿಸಲಾಗಿದ್ದು, ಇದು ಬೆರಳುಗಳ ವೈಕಲ್ಯಕ್ಕೆ ಒಳಗಾದವರನ್ನು ಬಿಂಬಿಸುವಂತಿದ್ದು, ಈ ಹಿನ್ನೆಲೆ ಹ್ಯಾಥ್​ವೇ ಪಾತ್ರದ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು..

author img

By

Published : Nov 6, 2020, 5:09 PM IST

anne-hathaway-apologises-to-limb-difference-community-after-the-witches-faces-backlash
ಕ್ಷಮೆಯಾಚಿಸಿದ ಆಸ್ಕರ್ ವಿನ್ನಿಂಗ್ ನಟಿ

ವಾಷಿಗ್ಟಂನ್ ​​: ಆಸ್ಕರ್ ವಿನ್ನಿಂಗ್ ನಟಿ ಆನ್ ಹ್ಯಾಥ್‌ವೇ ಅಂಗ ವ್ಯತ್ಯಾಸ ಸಮುದಾಯದ (ಲಿಂಬ್ ಡಿಫರೆನ್ಸ್ ಕಮ್ಯುನಿಟಿ) ಕುರಿತು ಕ್ಷಮಾಪಣೆ ಕೇಳಿದ್ದಾರೆ. ಅವರ ಸಿನಿಮಾದಲ್ಲಿ ಬೆರಳಿನ ಅಂಗ ವೈಕಲ್ಯಕ್ಕೆ ಒಳಗಾದವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ವಿರೋಧ ವ್ಯಕ್ತವಾಗಿತ್ತು.

ಅವರ ನಟನೆಯ ‘ದಿ ವಿಚ್ಚಸ್’ ಸಿನಿಮಾದಲ್ಲಿ ನಟಿ ಹ್ಯಾಥ್​​ವೇ ಕೈನಲ್ಲಿ ಕೆಲವೇ ಬೆರಳಿರುವಂತೆ ತೋರಿಸಲಾಗಿದ್ದು, ಇದು ಲಿಂಬ್ ಡಿಫರೆನ್ಸ್ ಕಮ್ಯುನಿಟಿಗೆ ಮಾಡಿರುವ ಅವಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು.

ಹಾಲಿವುಡ್ ವರದಿಯ ಪ್ರಕಾರ, ವಾರ್ನರ್ ಬ್ರದರ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಖಳನಟಿಯಂತಹ ಶೇಡ್​​ನಲ್ಲಿ ಹ್ಯಾಥ್​​​​ವೇ ನಟಿಸುತ್ತಿದ್ದಾರೆ. ಇವರ ಎರಡೂ ಕೈಯಲ್ಲಿ ಬೆರಳನ್ನು ವಿಕಾರಗೊಳಿಸಿ ಚಿತ್ರಿಸಲಾಗಿದ್ದು, ಇದು ಬೆರಳುಗಳ ವೈಕಲ್ಯಕ್ಕೆ ಒಳಗಾದವರನ್ನು ಬಿಂಬಿಸುವಂತಿದ್ದು, ಈ ಹಿನ್ನೆಲೆ ಹ್ಯಾಥ್​ವೇ ಪಾತ್ರದ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಅಲ್ಲದೆ ಹ್ಯಾಥ್​ವೇ ಪಾತ್ರವನ್ನು ಅಮಾನವೀಯವಾಗಿ ಹಾಗೂ ಅಗೌರವವಾಗಿ ಚಿತ್ರಿಸಲಾಗಿದ್ದು, ಇದರಿಂದ ಕೆರಳಿದ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಪಾತ್ರವನ್ನು ವಿರೋಧಿಸಿದ್ದರು. ಜಾಲತಾಣಗಳಲ್ಲಿ ತೀವ್ರ ವಿರೋಧದ ಬೆನ್ನಲ್ಲೆ ನಟಿ ಈ ಕುರಿತು ಅವರ ಚಿತ್ರದಲ್ಲಿ ವಿಕಲಾಂಗರ ಕುರಿತು ಅವಹೇಳನ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

ಅಲ್ಲದೆ ನಾನು ‘ದಿ ವಿಚ್ಚಸ್​’ನಲ್ಲಿನ ಪಾತ್ರದಿಂದಾಗಿ ಕೈಬೆರಳು ವಿಕಲಾಂಗರ ನೋವು, ಮುಖ್ಯವಾಗಿ ಚಿಕ್ಕಮಕ್ಕಳು ಯಾವ ರೀತಿಯ ನೋವು ಅನಿಭವಿಸುತ್ತಾರೆ ಎಂಬುದನ್ನು ಕಂಡು ಕೊಂಡಿದ್ದೇನೆ ಎಂದು ವಿವರಿಸಿದ್ದಾರೆ. ಇದಕ್ಕೂ ಮೊದಲು ಚಿತ್ರ ನಿರ್ಮಾಪಕ ಸಂಸ್ಥೆ ವಾರ್ನರ್ ಬ್ರದರ್ಸ್ ಸಹ ವಿಕಲಾಂಗ ಸಮುದಾಯದ ಬಳಿ ಕ್ಷಮೆಯಾಚಿಸಿತ್ತು.

ಕೊರೊನಾ ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತಾದರು ಬಳಿಕ ವಾರ್ನರ್ ಬ್ರದರ್ಸ್ ಅಂಗ ಸಂಸ್ಥೆಯಾದ ಹೆಚ್​​​​ಬಿಒ ಆನ್​​ಲೈನ್​ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.