ETV Bharat / sitara

ಉತ್ತರಾಖಂಡ್ ಪ್ರವಾಸೋದ್ಯಮ ಪ್ರಚಾರಕ್ಕೆ ಬಿಗ್​​​ಬಿ ನೇತೃತ್ವ

author img

By

Published : Jan 16, 2021, 3:30 PM IST

ಬಾಲಿವುಡ್​​ ಬಿಗ್​ ಬಿ ಕಳೆದ ದಿನಗಳಲ್ಲಿ ಹಲವಾರು ಸಾರ್ವಜನಿಕ ಒಳಿತಿನ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ಉತ್ತರಖಂಡದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಶೋ ನಡೆಸಲಿದ್ದಾರೆ.

ಉತ್ತರಖಂಡ ಪ್ರವಾಸೋದ್ಯಮದ ಪ್ರಚಾರಕ್ಕೆ ನಿಂತ ಬಿಗ್​​​ಬಿ

ಉತ್ತರಾಖಂಡ್ ಪ್ರವಾಸೋದ್ಯಮದ ಪ್ರಚಾರದ ದೃಷ್ಟಿಯಿಂದ ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​​​ ರಿಯಾಲಿಟಿ ಶೋ ಒಂದನ್ನು ನಡೆಸಲಿದ್ದಾರೆ.

ಹೌದು... ಬಾಲಿವುಡ್​​ ಬಿಗ್​ ಬಿ ಕಳೆದ ದಿನಗಳಲ್ಲಿ ಹಲವಾರು ಸಾರ್ವಜನಿಕ ಒಳಿತಿನ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಕೊರೊನಾ ಸಮಯದಲ್ಲಿ ಕಾಲರ್​ ಟ್ಯೂನ್​​​ನಲ್ಲಿ ಕೇಳಿ ಬರುವ ಕೊರೊನಾ ಮುನ್ನೆಚ್ಚರಿಕೆ ಧ್ವನಿಯನ್ನು ನೀಡಿದ್ದರು. ಇದೀಗ ಉತ್ತರಾಖಂಡ್​ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ರಿಯಾಲಿಟಿ ಶೋ ನಡೆಸಲಿದ್ದಾರೆ.

ನಿನ್ನೆ ಶುಕ್ರವಾರ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್​​ ರಾವತ್​​​ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಅಮಿತಾಬ್​​ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ '100 ಡೇಸ್​ ಇನ್​​ ಹೆವನ್'​ ಎಂದು ಹೆಸರಿಡಲಾಗಿದೆ.

ಈ ಕಾರ್ಯಕ್ರಮ ಹಲವಾರು ಸುದ್ದಿ ವಾಹಿನಿಗಳು ಹಾಗೂ ಮನರಂಜನಾ ವಾಹಿನಿಗಳಲ್ಲಿ ಪ್ರಸಾರ ಆಗಲಿದೆ. ಕಾರ್ಯಕ್ರಮವನ್ನು ಸಿನಿಮಾ ನಿರ್ಮಾಣ ಸಂಸ್ಥೆಯಾದ ಮೆಸ್ಸರ್ಸ್​ ಜಂಪಿಂಗ್​​​​ ಟೊಮೊಟೊ ಮಾರ್ಕೆಟಿಂಗ್​​​ ಪ್ರೈ.ಲಿ ನಡೆಸಿಕೊಡುತ್ತಿದ್ದು, ಸರ್ಕಾರದ ವತಿಯಿಂದ 100 ಡೇಸ್​ ಇನ್​​ ಹೆವನ್ ಶೋ ನಡೆಸಲು 12.81 ಕೋಟಿ ಹಣ ನೀಡಲಾಗಿದೆಯಂತೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.