ರೆಬಲ್ ಸ್ಟಾರ್ ಅಂಬರೀಶ್ ಇಂದು ಬದುಕಿದ್ದರೆ, ಸಾವಿರಾರು ಅಭಿಮಾನಿಗಳ ಜೊತೆ 68ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ರು. ಅಂಬರೀಶ್ ಐಶಾರಾಮಿ ಜೀವನ ಶೈಲಿ ನೋಡಿ, ಆ ಯಮರಾಜನಿಗೂ ಹೊಟ್ಟೆ ಹುರಿ ಬಂದಿರಬೇಕು. ಅದಕ್ಕೆ ಅಂಬರೀಶ್ ನನ್ನು ಬೇಗನೆ ಮೇಲಕ್ಕೆ ಕರೆಯಿಸಿಕೊಂಡ ಅನಿಸುತ್ತೆ. ಆದರೆ ಅಂಬರೀಶ್ ಸಿನಿಮಾಗಳಲ್ಲಿ ಹೊಡೆದ ಪಂಚಿಂಗ್ ಡೈಲಾಗ್ಗಳ ಇವತ್ತಿಗೂ ಜೀವಂತವಾಗಿದೆ.
ರೆಬಲ್ ಸ್ಟಾರ್ ಅಂಬರೀಷ್ ಆಗೋದಿಕ್ಕಿಂತ ಮುಂಚೆ, ಈ ಮಂಡ್ಯದ ಗಂಡಿನ ಮೊದಲ ಹೆಸರು ಅಮರನಾಥ. ನೋಡೋದಕ್ಕೆ ಬಾಲಿವುಡ್ನ ಶತ್ರುಘ್ನ ಸಿನ್ಹಾ ತರಹ ಇದ್ದ ಅಂಬರೀಶ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಇಂಟ್ರಸ್ಟಿಂಗ್.
ಕಾಲೇಜ್ ಟೈಮ್ನಲ್ಲಿ ಲೀಡರ್ ಶಿಪ್ ಕ್ವಾಲಿಟಿ ಹೊಂದಿದ್ದ ಅಮರನಾಥ, 1972ರಲ್ಲಿ ಬಂದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಆದರೆ, ಈ ಚಿತ್ರ ಅಮರನಾಥನ ಅಂಬರೀಶ್ ಆಗಿ ಬದಲಾಯಿಸುತ್ತದೆ ಅಂತಾ ಸ್ವತಃ ಅಂಬರೀಶ್ ಅಂದುಕೊಂಡಿರಲಿಲ್ಲ.
ಈ ಚಿತ್ರದಲ್ಲಿ ಡಾ ವಿಷ್ಣುವರ್ಧನ್ ಎದುರು ಅಂಬರೀಶ್ ವಿಲನ್ ಆಗಿ ಕಾಣಿಸಿಕೊಂಡಿದ್ರು. ಈ ಚಿತ್ರದ ಬಳಿಕ ವಿಷ್ಣುವರ್ಧನ್ ಹಾಗೂ ಅಂಬರೀಶ್ ಕುಚಿಕು ಗೆಳೆಯರು ಆಗ್ತಾರೆ. ಅಂತಾ ಯಾರು ಊಹಿಸಿರಲಿಲ್ಲ.ಅಂದಿನಿಂದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಗೆಳೆಯರು ಅಲ್ಲದೇ ಸಾಕಷ್ಟು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದಾರೆ.
ನಾಗರಹಾವು ಚಿತ್ರದಲ್ಲಿ ಅಂಬರೀಶ್ ಹೊಡೆಯುವ ಬುಲ್ ಬುಲ್ ಡೈಲಾಗ್, ಆವತ್ತಿನ ದಿನಗಳಲ್ಲಿ ಕಾಲೇಜು ಹುಡುಗರ ಫೇವರಿಟ್ ಡೈಲಾಗ್ ಆಗಿತ್ತು. ಈ ಚಿತ್ರದಲ್ಲಿ ಕೇವಲ 15 ನಿಮಿಷ ಬರುವ ಅಂಬರೀಶ್ ಈ ಚಿತ್ರದ ಒಂದು ಡೈಲಾಗ್, ಹಲವಾರು ನಟರು ತಮ್ಮ ಸಿನಿಮಾಗಳಲ್ಲಿ ಈ ಡೈಲಾಗ್ ಬಳಸಿಕೊಂಡಿದ್ದಾರೆ.
ಇನ್ನೊಂದು ಅಚ್ಚರಿ ವಿಷ್ಯ ಅಂದ್ರೆ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಅಮರನಾಥನಿಗೆ ಅಂಬರೀಶ್ ಅಂತಾ ಹೊಸ ನಾಮಕರಣ ಮಾಡಿದ್ರು. ಅಷ್ಟೇ ಅಲ್ಲ ಅಂಬರೀಶ್ ದತ್ತು ಪುತ್ರ ಅಂತಾ ಕರೆಯಿಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಲ್ ಬುಲ್ ಮಾತಡಕಿಲ್ವಾ ಅಂತಾ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ರು. ಅಚ್ಚರಿ ಅಂದ್ರೆ ಈ ಸಿನಿಮಾದಲ್ಲಿ ಈ ಮಂಡ್ಯದ ಗಂಡು ಕೂಡ ಅಭಿನಯಿಸಿದ್ರು.
ಮೇರಿ ಸಪ್ನೋಕಿ ರಾಣಿ ಕಬ್ ಆಯೇಗಾ. ಹೇ ಬುಲ್ ಬುಲ್ ಮಾತಡಕಿಲ್ವಾ ಡೈಲಾಗ್ ಅಂಬರೀಶ್ ಕೆರಿಯರ್ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಈ ಫೇಮಸ್ ಡೈಲಾಗ್ ನಂತ್ರ ಅಂಬರೀಶ್ ಆ್ಯಂಗ್ರಿ ಮ್ಯಾನ್ ಎಂಬ ಚರೀಷ್ಮಾ ತಂದು ಕೊಟ್ಟ ಚಿತ್ರ ಎಂದರೆ ಅದು ’ಅಂತ’.
ಅಂತ ಚಿತ್ರದಲ್ಲಿ ಡಬ್ಬಲ್ ರೋಲ್ನಲ್ಲಿ ಮಾಡಿದ್ದ ಅಂಬರೀಶ್ ಹೇ ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ಎಂಬ ಡೈಲಾಗ್ ಅಂಬರೀಶ್ ಮಗ ಅಭಿಷೇಕ್ ಸೇರಿದಂತೆ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ರೋಚಕ ಸಂಗತಿ ಅಂದ್ರೆ, ಅಂಬರೀಶ್ ಮನೆಯಲ್ಲಿ ಸಾಕಿರುವ ಹೈ ಬ್ರಿಡ್ ಶ್ವಾನಗಳಿಗೆ ಕನ್ವರ್ ಲಾಲ್ ಅಂತಾ ಹೆಸರಿಟ್ಟಿದ್ದಾರೆ.
ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಟೈಮ್ನಲ್ಲಿ ಅಂಬರೀಶ್ ಮನೆಗೆ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳು ಬಂದಿರುತ್ತಾರೆ. ಆಗ ಮಾಧ್ಯಮದವರ ಜೊತೆ ಮಾತನಾಡಬೇಕಾದ್ರೆ, ಅಂಬರೀಶ್ ಸ್ವತಃ ಹೊಡೆದ ಡೈಲಾಗ್, ನೋ ವೇ ಚಾನ್ಸೇ ಇಲ್ಲಾ ಎಂಬ ಡೈಲಾಗ್, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡಿತ್ತು.
ಒಟ್ಟಾರೆ ರೆಬಲ್ ಸ್ಟಾರ್ ಅಂಬರೀಶ್ ಖಡಕ್ ಡೈಲಾಗ್ಗಳು ಇವತ್ತಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.