ETV Bharat / sitara

ಅಪ್ಪು ಸಮಾಧಿಗೆ ಭೇಟಿ ನೀಡಿ ಅಲ್ಲು ನಮನ: ಪುನೀತ್​ ಜೊತೆ ಕೊನೆಯ ಮಾತು ನೆನೆದ ಸ್ಟೈಲಿಶ್​ ಸ್ಟಾರ್ - ಪುನೀತ್​ ರಾಜ್​ಕುಮಾರ್​ ಕುಟುಂಬಸ್ಥರ ಭೇಟಿ ಮಾಡಿದ ಅಲ್ಲು ಅರ್ಜುನ್​

'ಅಲಾ ವೈಕುಂಟಪುರಮುಲೋ' ಸಿನಿಮಾ ನೋಡಿದ ಬಳಿಕ ಪುನೀತ್​ ನನಗೆ ಕರೆ ಮಾಡಿ, 'ಬುಟ್ಟಾ ಬೊಮ್ಮಾ' ಸೇರಿದಂತೆ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ಹೇಳಿದ್ರು. ಆ ಬಳಿಕ ನಾವು ಭೇಟಿ ಆಗಬೇಕು ಅಂದುಕೊಂಡಿದ್ವಿ. ಆದ್ರೆ ಕೋವಿಡ್​ ಲಾಕ್​ಡೌನ್​ನಿಂದ ಸಾಧ್ಯವಾಗಿರಲಿಲ್ಲ ಎಂದು ಅಪ್ಪು ಜೊತೆ ಕೊನೆಯದಾಗಿ ಮಾತನಾಡಿದ್ದನ್ನು ಅಲ್ಲು ಅರ್ಜುನ್​ ನೆನೆದರು.

Allu Arjun remembers Appu after paying homage to Puneet rajkumar's grave
ಅಪ್ಪು ಸಮಾಧಿಗೆ ಭೇಟಿ ನೀಡಿ ಅಲ್ಲು ನಮನ
author img

By

Published : Feb 3, 2022, 3:56 PM IST

Updated : Feb 3, 2022, 6:09 PM IST

ಬೆಂಗಳೂರು: ನಮ್ಮೆಲ್ಲರ ನೆಚ್ಚಿನ ಅಪ್ಪು ಅಗಲಿದ ಬಳಿಕ ದಕ್ಷಿಣ ಭಾರತ ಚಿತ್ರರಂಗದ ಅನೇಕ ತಾರೆಯರು ಪುನೀತ್​ ರಾಜ್​ಕುಮಾರ್​ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಇಂದು ಪುನೀತ್​ ಸ್ನೇಹಿತರಲ್ಲಿ ಒಬ್ಬರಾದ ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅವರು ಅಪ್ಪು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಖಾಸಗಿ ವಿಮಾನದಲ್ಲಿ ಬೆಂಗಳೂರಿನ ಹೆಚ್​ಎಎಲ್ ಏರ್​ಪೋರ್ಟ್​ಗೆ ಬಂದಿಳಿದ ಅಲ್ಲು ಅರ್ಜುನ್​ ಮೊದಲಿಗೆ ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದರು. ಬಳಿಕ ಶಿವಣ್ಣನ​ ಜೊತೆ ಸೇರಿ ನೇರ ಸದಾಶಿವ ನಗರದಲ್ಲಿರುವ ಅಪ್ಪು ಮನೆಗೆ ಭೇಟಿ ನೀಡಿದರು. ಮನೆಯಲ್ಲಿ ಅಪ್ಪು ಫೋಟೋಗೆ ನಮಿಸಿದ ಅಲ್ಲು ಅರ್ಜುನ್​ ಪುನೀತ್​ ಪತ್ನಿ ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿ, ಸಮಾಧಾನ ಹೇಳಿದರು.

ಪುನೀತ್​ ಜೊತೆ ಕೊನೆಯ ಮಾತು ನೆನೆದ ಸ್ಟೈಲಿಶ್​ ಸ್ಟಾರ್

ಪುನೀತ್ ರಾಜ್‍ಕುಮಾರ್​ ಸಮಾಧಿಗೂ ಭೇಟಿ ನೀಡಿದ ಬನ್ನಿ, ಇದರ ಜೊತೆಗೆ ರಾಜ್ ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಹಾಗು ಅಂಬರೀಶ್ ಅವರ ಸಮಾಧಿಗೆ ನಮಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಲ್ಲು, "ಎಲ್ಲರಗೂ ನಮಸ್ಕಾರ. ಬೆಂಗಳೂರಿಗೆ ಬಂದು ಪುನೀತ್​ ರಾಜ್​ಕುಮಾರ್​ ಕುಟುಂಬವನ್ನ ಭೇಟಿ ಮಾಡಬೇಕೆಂದು ನಾನು ತುಂಬಾ ದಿನದಿಂದ ಎದುರು ನೋಡುತ್ತಿದ್ದೆ. 'ಪುಷ್ಪ' ಸಿನಿಮಾದ ಗಜಿಬಿಜಿ ಮುಗಿದು ಶಾಂತವಾಗಿ ಬಂದು ಮೀಟ್​ ಮಾಡಬೇಕು ಅಂದುಕೊಂಡಿದ್ದೆ. ಇಂದು ಬಂದು ಭೇಟಿ ಮಾಡಿದ್ದೇನೆ. ಹೇಳೊದಕ್ಕೆ ಏನೂ ಇಲ್ಲ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಆಗ್ತಾ ಇದ್ದೆ. ಅವರು ಹೈದರಾಬಾದ್​ಗೆ ಬಂದಾಗ ನನ್ನ ಭೇಟಿ ಆಗ್ತಾ ಇದ್ರು" ಎಂದರು.

ಇದನ್ನೂ ಓದಿ: ಪುನೀತ್​ ರಾಜಕುಮಾರ್ ಫೋಟೋಗೆ ನಮಿಸಿದ ಆಪ್ತಮಿತ್ರ ಅಲ್ಲು ಅರ್ಜುನ್​!

ಅಪ್ಪು ಜೊತೆ ಕೊನೆಯ ಮಾತು ನೆನೆದ ಅಲ್ಲು.. 'ಅಲಾ ವೈಕುಂಟಪುರಮುಲೋ' ಸಿನಿಮಾ ನೋಡಿದ ಬಳಿಕ ಪುನೀತ್​ ನನಗೆ ಕರೆ ಮಾಡಿ, 'ಬುಟ್ಟಾ ಬೊಮ್ಮಾ' ಸೇರಿದಂತೆ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ಹೇಳಿದ್ರು. ಆ ಬಳಿಕ ನಾವು ಭೇಟಿ ಆಗಬೇಕು ಅಂದುಕೊಂಡಿದ್ವಿ. ಆದ್ರೆ ಕೋವಿಡ್​ ಲಾಕ್​ಡೌನ್​ನಿಂದ ಸಾಧ್ಯವಾಗಿರಲಿಲ್ಲ ಎಂದು ಅಪ್ಪು ಜೊತೆ ಕೊನೆಯದಾಗಿ ಮಾತನಾಡಿದ್ದನ್ನು ಅಲ್ಲು ನೆನೆದರು. ನನಗೆ ಪುನೀತ್ ಡ್ಯಾನ್ಸ್ ಇಷ್ಟವಾಗುತ್ತಿತ್ತು. ಪುನೀತ್ ನೆನಪೇ ಇಂದು ಶಾಶ್ವತ. ಶಿವಣ್ಣನನ್ನ ಭೇಟಿಯಾಗಿ ಸಮಾಧಾನವಾಯ್ತು. ನಮಗೆ ಅಪ್ಪು ಯಾವಾಗಲೂ ಮಾದರಿಯಾಗಿರ್ತಾರೆ ಎಂದು ಅಲ್ಲು ಅರ್ಜುನ್​ ಭಾವುಕರಾದರು.

ಅಲ್ಲು ಟ್ವೀಟ್​: ಇನ್ನು ಅಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್​ ಹ್ಯಾಂಡಲ್​ನಲ್ಲಿ ಶೇರ್ ಮಾಡಿರುವ ಅಲ್ಲು, "ಪುನೀತ್ ಅವರಿಗೆ ನನ್ನ ನಮನಗಳು. ರಾಜಕುಮಾರ್ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ನನ್ನ ಗೌರವ" ಎಂದು ಬರೆದುಕೊಂಡಿದ್ದಾರೆ.

Last Updated : Feb 3, 2022, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.