'ಬಾಲಿವುಡ್ ಕಿಲಾಡಿ' ಅಂತಾನೆ ಹೆಸರು ಮಾಡಿರುವ ಅಕ್ಷಯ್ ಕುಮಾರ್ ರಿಯಲ್ ಹೀರೋ ಅಂತ ಪ್ರೂವ್ ಮಾಡಿದ್ದಾರೆ. ಇತ್ತೀಚೆಗೆ ಹಿಂದಿಯ ಮನೀಶ್ ಪೌಲ್ರ 'ಮೂವಿ ಮಸ್ತಿ' ರಿಯಾಲಿಟಿ ಶೋನಲ್ಲಿ ಪರ್ಫಾರ್ಮ್ ಮಾಡ್ತಿದ್ದ ಕಲಾವಿದರೊಬ್ಬರು ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿತ್ತು. ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಅಕ್ಕಿ ಘಟನಾ ಸ್ಥಳದತ್ತ ಧಾವಿಸಿ ಕಲಾವಿದನಿಗೆ ರಕ್ಷಣೆ ಒದಗಿಸಿದ್ದಾರೆ.
- " class="align-text-top noRightClick twitterSection" data="
">
ಅಕ್ಷಯ್ ಕುಮಾರ್ ತಮ್ಮ ಮುಂಬರುವ ಸಿನಿಮಾ 'ಹೌಸ್ಫುಲ್-4' ಪ್ರಮೋಷನ್ಗಾಗಿ ಹಿಂದಿಯ ರಿಯಾಲಿಟಿ ಶೋಗೆ ಹೋಗಿದ್ದರು. ಈ ವೇಳೆ ಘಟನೆ ನಡೆದಿದ್ದು, ಈ ಘಟನೆಯನ್ನು ಮುಂಬೈ ಮೂಲದ ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಶೂಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ 'ಕಿಲಾಡಿ' ಅಭಿಮಾನಿಗಳು 'ಒಳ್ಳೆಯ ಕೆಲಸ ಹ್ಯಾಟ್ಸ್ ಆಫ್ ಅಕ್ಷಯ್ ಕುಮಾರ್' ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.