ETV Bharat / sitara

'ಗೋಬರ್​' ವಿಡಂಬನಾತ್ಮಕ ಚಿತ್ರ ನಿರ್ಮಾಣಕ್ಕೆ ಸಿದ್ಧಾರ್ಥ್ ರಾಯ್ ಕಪೂರ್ ಜತೆ ಅಜಯ್​ ದೇವಗನ್​ ಸಾಥ್​! - ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಅಜಯ್​ ದೇವಗನ್​ ಸಿನಿಮಾ ನಿರ್ಮಾಣ

ಈ ನಡುವೆ ಅಜಯ್ ಪ್ರಸ್ತುತ ತಮ್ಮ ನಿರ್ದೇಶನದ ಮೇಡೇ ಚಿತ್ರದಲ್ಲಿ ನಿರತರಾಗಿದ್ದಾರೆ. ಮೇಜರ್ ಸಾಬ್, ಖಾಕೀ, ಸತ್ಯಾಗ್ರಹ ಮತ್ತು ಹಿಂದೂಸ್ತಾನ್ ಕಿ ಕಸಮ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಅಮಿತಾಬ್ ಬಚ್ಚನ್ ಮತ್ತು ಅಜಯ್ ಮತ್ತೆ ಈ ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ..

Ajay Devgn, Siddharth Roy Kapur to bankroll satire titled 'Gobar!'
ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಅಜಯ್​ ದೇವಗನ್​
author img

By

Published : Apr 16, 2021, 3:52 PM IST

ಹೈದರಾಬಾದ್ ​: ದಿ ಬಿಗ್ ಬುಲ್ ಸಿನಿಮಾದ ನಂತರ ಅಜಯ್ ದೇವ್‌ಗನ್ ಹಾಗೂ ಸಿದ್ಧಾರ್ಥ್ ರಾಯ್ ಕಪೂರ್ ಸಹಯೋಗದೊಂದಿಗೆ ವಿಡಂಬನಾತ್ಮಕ ಚಿತ್ರ ನಿರ್ಮಾಣವಾಗುತ್ತಿದೆ. ಇದಕ್ಕೆ 'ಗೋಬರ್' ಎಂದು ಹೆಸರಿಡಲಾಗಿದೆ. ಈಗಾಗಲೇ ಇವರಿಬ್ಬರೂ ಜಂಟಿಯಾಗಿ ಹಣ ಹೂಡಿಕೆ ಮಾಡಿದ್ದಾರೆ.

ಗೋಬರ್​ ಸಿನಿಮಾವು ಸಾಕಷ್ಟು ಅನನ್ಯ, ವಿಭಿನ್ನ ಹಾಗೂ ನಂಬಲಾಗದಷ್ಟು ತಮಾಷೆ ಒಳಗೊಂಡಿದೆ. ಇದು ವೀಕ್ಷಕರನ್ನು ಚಿತ್ರಮಂದಿರಗಳಿಗೆ ಹೋಗುವಂತೆ ಒತ್ತಾಯಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಮ್ಮ ಮುಂಬರುವ ಸಿನಿಮಾದ ಬಗ್ಗೆ ಮಾತನಾಡುತ್ತಾ ಅಜಯ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಚಲನಚಿತ್ರದ ಕುರಿತು ಸಿದ್ಧಾರ್ಥ್ ಮಾತನಾಡುತ್ತಾ, ಚಲನಚಿತ್ರವು ಮನರಂಜನೆ ಮತ್ತು ಅನನ್ಯತೆ ಉಂಟು ಮಾಡುತ್ತದೆ. ಇದು ಸಾಂದರ್ಭಿಕ ಹಾಸ್ಯ ಎಂದಿದ್ದಾರೆ. 'ಗೋಬರ್‌ ಚಿತ್ರ ನಿರ್ಮಾಪಕ ಸಬಲ್ ಶೇಖಾವತ್ ಅವರು ಸಂಬಿ ಮಿಶ್ರಾ ಅವರೊಂದಿಗೆ ಚಿತ್ರಕಥೆ ಸಹ ಬರೆದಿದ್ದಾರೆ.

ಈ ನಡುವೆ ಅಜಯ್ ಪ್ರಸ್ತುತ ತಮ್ಮ ನಿರ್ದೇಶನದ ಮೇಡೇ ಚಿತ್ರದಲ್ಲಿ ನಿರತರಾಗಿದ್ದಾರೆ. ಮೇಜರ್ ಸಾಬ್, ಖಾಕೀ, ಸತ್ಯಾಗ್ರಹ ಮತ್ತು ಹಿಂದೂಸ್ತಾನ್ ಕಿ ಕಸಮ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಅಮಿತಾಬ್ ಬಚ್ಚನ್ ಮತ್ತು ಅಜಯ್ ಮತ್ತೆ ಈ ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ. ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ನಟಿಸಿದ್ದಾರೆ.

ಓದಿ: ಆಸ್ಪತ್ರೆಗೆ ದಾಖಲಾದ ಬಿಎಸ್​ವೈ: ಸಿಎಂ ಇನ್ನೂ ಸುಮಾರು ಬ್ಯಾಟಿಂಗ್ ಮಾಡ್ತಾರೆ- ವಿ. ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.