ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾರಾಮ್ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಖತ್ ಬ್ಯುಸಿ ನಡುವೆಯೂ ರಚಿತಾರ ಮತ್ತೊಂದು ಸಿನಿಮಾ ನಾಳೆ ಅನೌನ್ಸ್ ಆಗುತ್ತಿದೆ.
ಹೌದು.. ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ವುಡ್ ಕೃಷ್ಣ ಅಜಯ್ ರಾವ್ ಜೊತೆ ರಚಿತಾ ರಾಮ್ ತೆರೆ ಹಂಚಿಕೊಳ್ಳಲು ಸಿದ್ದವಾಗಿದ್ದು, ಈ ಚಿತ್ರಕ್ಕೆ ಲವ್ ಯು ರಚ್ಚು ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಟೈಟಲ್ ಲಾಂಚ್ ಕಾರ್ಯಕ್ರಮ ನಾಳೆ ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥರಾದ ಆಧ್ಯಾತ್ಮ ಗುರುಗಳಾದ ರವಿಶಂಕರ ಗುರೂಜಿ ನಾಳೆ ಟೈಟಲ್ ಲಾಂಚ್ ಮಾಡಲಿದ್ದಾರೆ.
ಈ ಚಿತ್ರಕ್ಕೆ ಶಂಕರ್ ರಾಜ್ ನಿರ್ದೇಶನ ಮಾಡುತ್ತಿದ್ದು, ಇದು ಶಂಕರ್ ಪಾಲಿನ ಚೊಚ್ಚಲ ನಿರ್ದೇಶನದ ಸಿನಿಮಾವಾಗಲಿದೆ. ಇನ್ನು ಕ್ರಿಯೇಟಿವ್ ಹೆಡ್ ಆಗಿರುವ ಗುರು ದೇಶಪಾಂಡೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯ ರಚಿತಾ ರಾಮ್ ಕೈಲಿ ಹಲವು ಸಿನಿಮಾಗಳಿದ್ದು, ಈಗಾಗಲೆ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ, ಸೂಪರ್ ಮಚ್ಚಿ, ವೀರಂ, ಪಂಕಜ ಕಸ್ತೂರಿ, ಡಾಲಿ, ರವಿ ಬೋಪಣ್ಣ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ