ETV Bharat / sitara

‘ಡೆಡ್ಲಿ ಸೋಮ’ನಿಗೆ ಹೊಸ ‘ಮಾಸ್ಟರ್​’ ಆದರು ನಿರ್ದೇಶಕ ಓಂ ಪ್ರಕಾಶ್‌ ರಾವ್‌.. - etv bharat

ಓಂಪ್ರಕಾಶ್​ ರಾವ್‌ ನಿರ್ದೇಶನ ಮಾಡುತ್ತಿರುವ ಮಾಸ್ಟರ್​ ಸಿನಿಮಾದಲ್ಲಿ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

‘ಮಾಸ್ಟರ್​’ ಓಂ ಪ್ರಕಾಶ್​ ನಿರ್ದೇಶನದಲ್ಲಿ ‘ಡೆಡ್ಲಿ ಸೋಮ’
author img

By

Published : May 11, 2019, 12:29 PM IST

ಬೆಂಗಳೂರು : ಸ್ಯಾಂಡಲ್​ವುಡ್​ನಲ್ಲಿ ಡೆಡ್ಲಿ ಸೋಮನೆಂದೇ ಖ್ಯಾತಿ ಪಡೆದಿರುವ ಆದಿತ್ಯಾ ಇದೀಗ ‘ಮಾಸ್ಟರ್’ ಆಗುತ್ತಿದ್ದಾರೆ. ಈ ಹಿಂದೆ ವಿಷ್ಣುವರ್ಧನ್​ ಮತ್ತು ಸುಹಾಸಿನಿ ಸ್ಕೂಲ್​ ಮಾಸ್ಟರ್​ ಸಿನಿಮಾಸಲ್ಲಿ ಅಭಿನಯ ಮಾಡಿದ್ದರು ಆದಿತ್ಯಾ. ಈಗ ಕಮರ್ಷಿಯಲ್​ ಸಿನಿಮಾಗಳ ಪಂಟ ಎಂದೇ ಕರೆಸಿಕೊಳ್ಳುವ ಓಂ ಪ್ರಕಾಶ್​ ಮಾಸ್ಟರ್ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಆದಿತ್ಯ ಖಡಕ್​ ಪೊಲೀಸ್​ ಅಧಿಕಾರಿಯಾಗಿ ಈ ಚಿತ್ರದಲ್ಲಿ ಮಿಂಚು ಹರಿಸಲಿದ್ದಾರಂತೆ.

ಈ ಸಿನಿಮಾದಲ್ಲಿ ಓಂ ಪ್ರಕಾಶ್​, ಸಮಾಜದಲ್ಲಿ ನಡೆಯುತ್ತಿರುವ ಇಂದಿನ ಸ್ಥಿತಿಗತಿಗಳನ್ನು ಎಳೆ ಎಳೆಯಾಗಿ ತೋರಿಸುವ ಪ್ರಯತ್ನ ಮಾಡಿದ್ದಾರಂತೆ. ಅಲ್ಲದೆ ಇತ್ತೀಚೆಗೆ ನಡೆದಿರುವ ಪ್ರಪಂಚದ ಘೋರ ಕೃತ್ಯಗಳಾದ ಪುಲ್ವಾಮಾ ದಾಳಿ ಹಾಗೂ ಶ್ರೀಲಂಕಾ ಸ್ಫೋಟದ ಬಗ್ಗೆಯೂ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಆದಿತ್ಯಾರಿಗೆ ಇಬ್ಬರು ನಾಯಕಿಯರಿದ್ದಾರಂತೆ. ಆದರೆ, ನಾಯಕಿಯರು ಯಾರೆಂದು ಇನ್ನೂ ನಿರ್ಧಾರ ಆಗಿಲ್ಲ. ಸಿನಿಮಾ ಚಿತ್ರೀಕರಣವನ್ನು ಮೈಸೂರು, ಕಾಶ್ಮೀರ, ಮಹಾರಾಷ್ಟ್ರದಲ್ಲಿ ಮಾಡಲಾಗಿದೆ. ಶ್ರೀ ರೇಣುಕ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ, ತೆಲುಗು ಮೂಲದ ಜೀವನ್ ಬಾಬು ಸಂಗೀತ ನೀಡಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಲಕ್ಷ್ಮಣ್ ರೆಡ್ಡಿ ಸಂಕಲನ ಚಿತ್ರಕ್ಕಿದೆ.

ಆದಿತ್ಯ ಈಗ ಮಾಸ್ಟರ್ ಓಂ ಪ್ರಕಾಷ್ ನಿರ್ದೇಶನದಲ್ಲಿ

ಕನ್ನಡದಲ್ಲಿ ಸ್ಕೂಲ್ ಮಾಸ್ಟರ್ 1958 (ಬಿ ಆರ್ ಪಂತುಲು ಸಿನಿಮಾ ಡಾ ಶಿವಾಜಿ ಗಣೇಶನ್ ಬಾಲ ನಟ ಆಗಿ ಅಭಿನಯಿಸಿದ ಚಿತ್ರ) ಹಾಗೂ 2010 ರಲ್ಲಿ ಸ್ಕೂಲ್ ಮಾಸ್ಟರ್ ಡಾ ವಿಷ್ಣುವರ್ಧನ, ಸುಹಾಸಿನಿ ಅಭಿನಯದ ಸಿನಿಮಾ ಕೇಳಿದ್ದೀರಾ. ಈಗ ಮಾಸ್ಟರ್ ಆದಿತ್ಯ ಅಭಿನಯದಲ್ಲಿ ಹಾಗೂ ಕಮರ್ಷಿಯಲ್ ಚಿತ್ರಗಳ ಪಂಟ ಎನ್ ಓಂ ಪ್ರಕಾಷ್ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿದೆ. ಒಂದು ತಿಂಗಳ ಹಿಂದೆ ಸೆಟ್ಟೇರಿ ಇದು ಚಿತ್ರೀಕರಣವನ್ನು ಮಾಡುತ್ತಿದೆ.

ನಟ ಆದಿತ್ಯ ಡೆಡ್ಲಿ ಸೋಮ ಎಂದೇ ಖ್ಯಾತಿ ಪಡೆದವರು ವೃತ್ತಿ ಬದುಕಿನಲ್ಲಿ ಖಡಕ್ ಖಾಕಿ ತೊಟ್ಟು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಭರ್ಜರಿ ಸಾಹಸ, ಸಂಭಾಷಣೆ ಹಾಗೂ ಅಭಿನಯ ಮಾಡಲು ಸಜ್ಜಾಗಿದ್ದಾರೆ.

ಎನ್ ಎಂ ಪ್ರಕಾಷ್ ರಾವ್ ಸಮಾಜದ ಇಂದಿನ ಸ್ಥಿತಿ ಗತಿ ಬಗ್ಗೆ ಈ ಸಿನಿಮಾ ಮುಖಾಂತರ ಕನ್ನಡಿ ಹಿಡಿಯುತ್ತಿದ್ದಾರೆ. ದೇಶದಲ್ಲಿ ಇರುವ ಮನಸುಗಳು ಸುಂದರವಾಗಿಲ್ಲ, ಸಾವು ಹಾಗೂ ನಲಿವಿನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಪುಲ್ವಮ ದಾಳಿ ಹಾಗೂ ಶ್ರೀಲಂಕಾ ಸ್ಫೋಟದ ಬಗ್ಗೆ ಸಹ ಕಥೆಯಲ್ಲಿ ಸೇರಿಸಿಕೊಂಡಿದ್ದಾರೆ ಓಂ ಪ್ರಕಾಷ್ ರಾವ್.

ಆದಿತ್ಯ ಅವರಿಗೆ ಇಬ್ಬರು ನಾಯಕಿಯರು. ನಾಯಕಿಯರ ಆಯ್ಕೆ ಇನ್ನ ನಡೆಯುತ್ತಿದೆ. 60 ದಿವಸಗಳ ಚಿತ್ರೀಕರಣ ಮೈಸೂರು, ಕಾಶ್ಮೀರ, ಮಹಾರಾಷ್ಟ್ರ ಸ್ಥಳಗಳಲ್ಲಿ ಶ್ರೀ ರೇಣುಕ ಮೂವಿ ಮಕೇರ್ಸ್ ಅಡಿಯಲ್ಲಿ ನಿರ್ಮಾಪಕ ಎ ಎಂ ಉಮೇಶ್ ರೆಡ್ಡಿ ಯೋಜನೆ ಸಿದ್ದಪಡಿಸಿದ್ದಾರೆ.

ತೆಲುಗು ಮೂಲದ ಜೀವನ್ ಬಾಬು ಸಂಗೀತ, ಅಣಜಿ ನಾಗರಾಜ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ಫಳಣಿ ರಾಜ್ ಸಾಹಸ ಒದಗಿಸುತ್ತಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.