ಪ್ರಭಾಸ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ್ ಸೆಟ್ಟೇರಿದೆ. ಈ ಬಗ್ಗೆ ಸ್ವತಃ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿಯನ್ನು ಶೇರ್ ಮಾಡಿದ್ದು, ಆದಿಪುರುಷ್ ಆರಂಭ ಎಂದು ಬರೆದುಕೊಂಡಿದ್ದಾರೆ.
ಈ ಸಿನಿಮಾಕ್ಕೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ರಾಮಾಯಣ ಆಧಾರಿತ ಆದಿಪುರುಷ್ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ಪ್ರಭಾಸ್ ಬಣ್ಣ ಹಚ್ಚುತ್ತಿದ್ರೆ, ನಟ ಸೈಫ್ ಅಲಿಖಾನ್ ರಾವಣನ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.
ಆದಿಪುರುಷನಿಗೆ ಇನ್ನೂ ನಾಯಕಿ ಯಾರೆಂದು ಅಂತಿಮವಾಗಿಲ್ಲ. ಈ ಸಿನಿಮಾವನ್ನು ಹಿಂದಿ ಹಾಗೂ ತೆಲುಗಿನಲ್ಲಿ ಶೂಟಿಂಗ್ ಮಾಡಲಾಗಿದ್ದು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲೂ ಬಿಡುಗಡೆಗೊಳ್ಳಿದೆ. ಈಗಾಗಲೇ ಚಿತ್ರತಂಡ ರಿಲೀಸ್ ಡೇಟ್ ಹೇಳಿದ್ದು, 2022ರ ಆಗಸ್ಟ್ 11ಕ್ಕೆ ಚಿತ್ರ ತೆರೆ ಕಾಣಲಿದೆ.