ETV Bharat / sitara

'ಅಡಚಣೆಗಾಗಿ ಕ್ಷಮಿಸಿ' ಚಿತ್ರದ ಆಡಿಯೋ, ಟ್ರೇಲರ್​​ ರಿಲೀಸ್​​​​ - ಅಡಚಣೆಗಾಗಿ ಕ್ಷಮಿಸಿ

'ಅಡಚಣೆಗಾಗಿ ಕ್ಷಮಿಸಿ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ನಿನ್ನೆ ಬಿಡುಗಡೆಯಾಗಿದೆ. ಮಾರ್ಚ್ 22 ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ.

'ಅಡಚಣೆಗಾಗಿ ಕ್ಷಮಿಸಿ' ಚಿತ್ರತಂಡ
author img

By

Published : Mar 13, 2019, 10:55 PM IST

ಹ್ಯಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್ ಅವರ ಶಿಷ್ಯ ಭರತ್ ನವುಂದ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಅಡಚಣೆಗಾಗಿ ಕ್ಷಮಿಸಿ' ಸಿನಿಮಾದ ಆಡಿಯೋ ಮತ್ತು ಟ್ರೇಲರ್​ ನಿನ್ನೆ ಬಿಡುಗಡೆಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮನೋರಂಜನ್ ರವಿಚಂದ್ರನ್, ಪಾರುಲ್​ ಯಾದವ್ ಹಾಗೂ ಸಾ.ರಾ.ಗೋವಿಂದು ಆಡಿಯೋ ಹಾಗೂ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು.

'ಅಡಚಣೆಗಾಗಿ ಕ್ಷಮಿಸಿ' ಆಡಿಯೋ, ಟ್ರೇಲರ್​ ಬಿಡುಗಡೆ

ಇದೇ ವೇಳೆ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಮಾರ್ಚ್ 22 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ 9 ಮುಖ್ಯ ಪಾತ್ರಗಳಿದ್ದು, ಈ ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗಲಿದೆ. ನಾಯಕನಾಗಿ ಪ್ರದೀಪ್ ವರ್ಮ ಕಾಣಿಸಿಕೊಂಡಿದ್ದಾರೆ. ಮೇಘ, ಅರ್ಪಿತ ಗೌಡ ಹಾಗೂ ಪ್ರೀತಿ ಪ್ರದೀಪ್ ಎಂಬ ಮೂವರು ನಾಯಕಿಯರಾಗಿ ನಟಿಸಿದ್ದಾರೆ.

Adachanegagi kashmisi
'ಅಡಚಣೆಗಾಗಿ ಕ್ಷಮಿಸಿ' ಚಿತ್ರತಂಡ

ಇದು ಸೈಕಾಲಜಿಕಲ್​​​, ಹಾರರ್​​​, ಸಸ್ಪೆನ್ಸ್ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕ ಮೂರು ಶೇಡ್​​​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಭರತ್ ನಿರ್ದೇಶಿಸಿದ್ದಾರೆ. ನಾಯಕ ಪ್ರದೀಪ್ ಈ ಚಿತ್ರಕ್ಕೆ ಸಂಗೀತ ನೀಡಿರುವುದು ವಿಶೇಷ. ಶ್ರೀ ಭೂಮಿಕಾ ಪ್ರೊಡಕ್ಷನ್ ಮತ್ತು ಎಸ್​​​​​​​​​​​​​​​ಬಿಎನ್ ಟಾಕೀಸ್ ಅಡಿ ನಾಯಕ ಪ್ರದೀಪ್ ತಂದೆ ಸದ್ಗುಣ ಮೂರ್ತಿ ಚಿತ್ರವನ್ನು ನಿರ್ಮಿಸಿದ್ದಾರೆ.

Intro:Body:

Adachanegagi Kshamisi

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.