ETV Bharat / sitara

ಹಿರಿಯ ನಟಿ ತಾರಾ ಅನುರಾಧ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮ - Varamahalakshmi festival

ಕೊರೊನಾ ಭೀತಿ ನಡುವೆಯೂ ಇಂದು ರಾಜ್ಯಾದ್ಯಂತ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬವನ್ನು ಜನರು ಆಚರಿಸುತ್ತಿದ್ದಾರೆ. ಕೆಲವರು ಎಂದಿನಂತೆ ಬಹಳ ಅದ್ಧೂರಿಯಾಗಿ ಆಚರಿಸಿದರೆ ಮತ್ತೆ ಕೆಲವರು ಈ ಬಾರಿ ಬಹಳ ಸರಳವಾಗಿ ಹಬ್ಬ ಆಚರಿಸಿದ್ದಾರೆ.

Actress Tara Anuradha
ತಾರಾ ಅನುರಾಧ
author img

By

Published : Jul 31, 2020, 3:37 PM IST

ಸೆಲಬ್ರಿಟಿಗಳು ಕೂಡಾ ಈ ಬಾರಿ ಬಹಳ ಸರಳವಾಗಿ ಹಬ್ಬ ಆಚರಿಸಿದ್ದಾರೆ. ಹಿರಿಯ ನಟಿ, ಮಾಜಿ ಎಂಎಲ್​​​​ಸಿ ತಾರಾ ಅನುರಾಧ ಅವರ ಮನೆಯಲ್ಲಿ ಕೂಡಾ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬ ಸರಳವಾಗಿ ನಡೆದರೂ ತಾರಾ ಮನೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ಪೂಜೆ ಪುನಸ್ಕಾರ ಮುಗಿಸಿದ ತಾರಾ, ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿದ್ದಾರೆ.

ತಾರಾ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಇಡೀ ಜಗತ್ತನ್ನೇ ನಡುಗಿಸಿರುವ ಕೊರೊನಾ ವೈರಾಣುವನ್ನು ಆ ತಾಯಿ ನಾಶ ಮಾಡಲಿ, ಒಳ್ಳೆ ಮಳೆ-ಬೆಳೆಯಾಗಿ ನಾವೆಲ್ಲಾ ಸುಖ ಶಾಂತಿ ನೆಮ್ಮದಿಯಿಂದ ಇರುವಂತಾಗಲಿ ಎಂದು ಶುಭ ಹಾರೈಸಿದ್ದಾರೆ‌. ಪ್ರತಿ ವರ್ಷ ನಟಿ ತಾರ ಪೌರ ಕಾರ್ಮಿಕರಿಗೆ ಬಾಗಿನ ನೀಡುವ ಮೂಲಕ ಹಬ್ಬ ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಅದ್ಧೂರಿ ಆಚರಣೆಗೆ ಬ್ರೇಕ್ ಬಿದ್ದಿರುವುದರಿಂದ ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ.

Actress Tara Anuradha
ವರಮಹಾಲಕ್ಷ್ಮಿ ಪೂಜೆ ಮಾಡುತ್ತಿರುವ ತಾರಾ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.