ಕಿರುತೆರೆಯಲ್ಲಿ ರಾಣಿಯಾಗಿ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಅವರ ಪಯಣ 18 ವರ್ಷ ಪೂರೈಸಿದೆ. ಧಾರಾವಾಹಿ, ನಿರೂಪಣೆ, ರಿಯಾಲಿಟಿ ಶೋ, ಸಿನಿಮಾ, ನೃತ್ಯ ಎಲ್ಲವೂ ಕರಗತ ಮಾಡಿಕೊಂಡಿರುವ ಕೊಡಗಿನ ಬೆಡಗಿ ಇದೀಗ ಮಜಾ ಟಾಕೀಸ್ ರಾಣಿ.
18 ವರ್ಷದ ಪಯಣದ ಬಗ್ಗೆ ನಟಿ ಶ್ವೇತಾ ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಎಡಿಟ್ ಮಾಡಿರುವುದು ಅವರ ಪತ್ನಿ ಕಿರಣ್. ಮುದ್ದು ಮಗುವಿನೊಂದಿಗೆ ಕಾಲ ಕಳೆಯುತ್ತಿದ್ದ ಶ್ವೇತಾ ಅನಿರೀಕ್ಷಿತವಾಗಿ ಮತ್ತೆ ಮಜಾ ಟಾಕೀಸ್ಗೆ ಬಂದು ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
![ಶ್ವೇತಾ ಚೆಂಗಪ್ಪ](https://etvbharatimages.akamaized.net/etvbharat/prod-images/kn-bng-02-shwetha-18yrs-photo-ka10018_27012021214206_2701f_1611763926_881.jpg)
ಹೀಗಿದೆ ಶ್ವೇತಾ ಭಾವುಕ ನುಡಿಗಳು..
ಜೊತೆ ಜೊತೆಯಾಗಿ ನನ್ನ ಕನಸನ್ನು ನನಸು ಮಾಡುತ್ತಿರುವ ನನ್ನ ಪತಿಗೆ ನನ್ನ ಕೋಟಿ ನಮನ. ಇಷ್ಟು ವರ್ಷಗಳ ಕಾಲ ನನಗೆ ಊಟ ಕೊಟ್ಟ ಪ್ರೊಡಕ್ಷನ್ ಹುಡುಗರಿಂದ ನಿರ್ಮಾಪಕರವರೆಗೂ, ಎಲ್ಲಾ ಡೈರೆಕ್ಟರ್ಸ್, ನಿರ್ದೇಶನ ತಂಡ, ತಾಂತ್ರಿಕ ತಂಡ, ಕಾಸ್ಟ್ಯೂಮ್ ಡಿಸೈನರ್, ಛಾಯಾಗ್ರಾಹಕರು ಎಲ್ಲರಿಗೂ, ಪ್ರತಿಯೊಬ್ಬರಿಗೂ ಹಾಗೂ ನನ್ನ ಏಳಿಗೆಯನ್ನು ಬಯಸಿದ ನನ್ನ ನಿಜವಾದ ಸ್ನೇಹಿತರಿಗೂ ಕೋಟಿ ನಮನ. ಕೊನೆಯದಾಗಿ ನನ್ನ ಕಲೆಯನ್ನು ಇಷ್ಟ ಪಟ್ಟು, ಹರಸಿ, ಹಾರೈಸಿ ಇಷ್ಟು ಬೆಳೆಸಿದ ಪ್ರತಿಯೊಬ್ಬ ಕನ್ನಡಿಗರಿಗೂ, ನಿಮ್ಮೆಲ್ಲರಿಗೂ ನನ್ನ ಕೋಟಿ ಕೋಟಿ ನಮನ' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ನಟಿ ಶ್ವೇತಾ ಚೆಂಗಪ್ಪ, ಎಸ್.ನಾರಾಯಣ್ ನಿರ್ದೇಶನದ ಸುಮತಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಅರುಂಧತಿ, ಯರಿಗುಂಟು ಯಾರಿಗಿಲ್ಲ, ತಂಗಿಗಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.