ETV Bharat / sitara

ಪುನೀತ್ ಪಿ.ಆರ್.ಕೆ ಬ್ಯಾನರ್​ನಲ್ಲಿ ಅಭಿನಯಿಸಿರುವುದು ನನ್ನ ಸೌಭಾಗ್ಯ: ನಟಿ ಶರ್ಮಿತಾ ಗೌಡ - ಪುನೀತ್ ರಾಜ್​ಕುಮಾರ್ ಬಗ್ಗೆ ನಟಿ ಶರ್ಮಿತಾ ಅಭಿಪ್ರಾಯ

ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಹುಟ್ಟು ಹಾಕಿರುವ ಪಿ.ಆರ್.ಕೆ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿರುವ ಫ್ಯಾಮಿಲಿ ಪ್ಯಾಕ್ ಚಿತ್ರದಲ್ಲಿ ಶರ್ಮಿತಾ ಗೌಡ ಅಭಿನಯಿಸುವ ಮೂಲಕ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

Actress Sharmita Gowda
ನಟಿ ಶರ್ಮಿತಾ ಗೌಡ
author img

By

Published : Mar 9, 2022, 6:20 PM IST

ಕಿರುತೆರೆ ಲೋಕದಲ್ಲಿ ನೆಗೆಟಿವ್ ರೋಲ್​ನಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವ ನಟಿ ಶರ್ಮಿತಾ ಗೌಡ. ಸದ್ಯ ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಇವರು ಮೂಲತಃ ಚಿಕ್ಕಮಗಳೂರಿನವರು. ಜಾನಕಿ ರಾಘವ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇವರು, ಕಿರುತೆರೆಯಲ್ಲಿ ಬೇಡಿಕೆಯ ನಟಿ ಎನಿಸಿರುವ ಶರ್ಮಿತಾ ಗೌಡ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿನಯದ ಚಿತ್ರ ಮತ್ತು ಪುನೀತ್​ ಸರ್​ ಭೇಟಿಯಾದ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಹುಟ್ಟು ಹಾಕಿರುವ ಪಿ.ಆರ್.ಕೆ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿರುವ ಫ್ಯಾಮಿಲಿ ಪ್ಯಾಕ್ ಚಿತ್ರದಲ್ಲಿ ಶರ್ಮಿತಾ ಗೌಡ ಅಭಿನಯಿಸುವ ಮೂಲಕ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಆಯ್ಕೆ.. ಅಮೆಜಾನ್ ಪ್ರೈಮ್​​ನಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ನಟಿ ಶರ್ಮಿತಾ ಗೌಡ ಅವರ ಸ್ಪೆಷಲ್ ಸಿನಿಮಾ ಆಗಿದೆ. ಏಕೆಂದರೆ ಕಿರುತೆರೆಯಲ್ಲಿ ನೆಗೆಟಿವ್ ಪಾತ್ರದಲ್ಲಿ ಹೆಚ್ಚು ಗಮನ ಸೆಳೆದಿದ್ದ ಇವರು, ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಆಯ್ಕೆ ಆಗಿದ್ದು ಇಂಟ್ರೆಸ್ಟಿಂಗ್ ಆಗಿದೆ.

ನಟಿ ಶರ್ಮಿತಾ ಗೌಡ ಮಾತನಾಡಿರುವುದು

ತಾಯಿ ಪಾತ್ರ ಅಂದಾಕ್ಷಣ ಬೇಜಾರು ಮಾಡಿಕೊಂಡ್ರಂತೆ.. ನಿರ್ದೇಶಕ ಅರ್ಜುನ್ ಕುಮಾರ್, ಶರ್ಮಿತಾ ಗೌಡ ಈ ಪಾತ್ರ ಮಾಡಬೇಕು ಅಂತಾ ಕೇಳಿದಾಗ ನನಗೆ ಸಂಭಾವನೆಗಿಂತ ನನ್ನ ಪಾತ್ರಕ್ಕೆ ಎಷ್ಟು ಸ್ಕೋಪ್ ಇದೆ ಅಂತಾ ಕೇಳಿದ್ರಂತೆ. ಶರ್ಮಿತಾ ಗೌಡ ಹೇಳುವ ಈ ಚಿತ್ರದಲ್ಲಿ ತಾಯಿ ಪಾತ್ರ ಅಂದಾಕ್ಷಣ ಬೇಜಾರು ಮಾಡಿಕೊಂಡ್ರಂತೆ. ಬಳಿಕ ಈ ಚಿತ್ರದಲ್ಲಿ ತಾಯಿ ಅಲ್ಲದೇ ಪ್ರೀತಿಸುವ ಹುಡುಗಿಯ ಪಾತ್ರವೂ ಇದೆ ಎಂಬ ಕಾರಣಕ್ಕೆ ಒಪ್ಪಿಕೊಂಡರಂತೆ.

ಮತ್ತೊಂದು ಕಡೆ ಪಿ.ಆರ್.ಕೆ ಬ್ಯಾನರ್ ಅಭಿನಯಕ್ಕೆ ಅವಕಾಶ ಸಿಗೋದು ಬಹಳ ಕಷ್ಟ. ಈ ಕಾರಣಕ್ಕೆ ನಾನು ಫ್ಯಾಮಿಲಿ ಪ್ಯಾಕ್ ಸಿನಿಮಾದಲ್ಲಿ ಅಭಿನಯಿಸಿರೋದು ಎನ್ನುತ್ತಾರೆ.

ಶರ್ಮಿತಾ ಗೌಡ ಬಯಸದೆ ಬಣ್ಣದ ಲೋಕಕ್ಕೆ ಬಂದ ಚೆಲುವೆ. ವೃತ್ತಿಯಲ್ಲಿ ನ್ಯೂಟ್ರಿಷಿಯನಿಸ್ಟ್ ಆಗಿದ್ದ ಶರ್ಮಿತಾ ಇಂದು ಪೂರ್ಣ ಪ್ರಮಾಣದ ನಟಿಯಾಗಿ ಬಣ್ಣದ ಲೋಕದಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಒತ್ತಾಯಕ್ಕೆ ಮಣಿದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ.. ಬಯೋಕೆಮಿಸ್ಟ್ರಿಯಲ್ಲಿ ಎಂಎಸ್​​ಸಿ ಮುಗಿಸಿದ ಬಳಿಕ ನ್ಯೂಟ್ರಿಷಿಯನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ಸ್ನೇಹಿತರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಶರ್ಮಿತಾ, ಮಿಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡರು. ನಂತರವಷ್ಟೇ ಕಿರುತೆರೆಗೆ ಕಾಲಿಟ್ಟರಂತೆ.

ಈಗಾಗಲೇ ಕಿರುತೆರೆಯಲ್ಲಿ ನೆಗೆಟಿವ್ ಪಾತ್ರದಲ್ಲಿ ಹೆಚ್ಚು ಫೇಮಸ್ ಆಗಿರುವ ಶರ್ಮಿತಾ ಗೌಡ ಅವ್ರಿಗೆ ಚಾಲೆಂಜಿಂಗ್ ಹಾಗು ವೆರೈಟಿ ಪಾತ್ರಗಳನ್ನ ಮಾಡುವ ಆಸೆಯ‌ಂತೆ. ಸದ್ಯ ಈಗ ನಾನು ಮಾಡುತ್ತಿರುವ ಪಾತ್ರ ನೋಡಿದ್ರೆ, ನಾನು ಹಳ್ಳಿ ಅಥವಾ ಊರುಗಳಿಗೆ ಹೋದ್ರೆ ನನಗೆ ಹೊಡೆಯೋದು ಗ್ಯಾರಂಟಿ ಅಂತಾರೆ ಶರ್ಮಿತಾ ಗೌಡ.

ನನಗೆ ಅಭಿನಯಿಸೋಕ್ಕೆ ಸಾಧ್ಯವಾಯಿತು.. ಫ್ಯಾಮಿಲಿ ಪ್ಯಾಕ್ ಸಿನಿಮಾದಲ್ಲಿ ನಾನು ಚೆನ್ನಾಗಿ ಅಭಿನಯಿಸಿದ್ದೀ‌ನಿ ಅಂದ್ರೆ, ಅದಕ್ಕೆ ಕಾರಣ ರಂಗಾಯಣ ರಘು, ಅಚ್ಯುತ್ ಕುಮಾರ್, ಪದ್ಮಜಾ ರಾವ್ ಅವರ ಸಪೋರ್ಟ್​ನಿಂದ ನನಗೆ ಅಭಿನಯಿಸೋಕ್ಕೆ ಸಾಧ್ಯವಾಯಿತು ಅಂತಾರೆ‌.

ಫ್ಯಾಮಿಲಿ ಪ್ಯಾಕ್ ಸಿನಿಮಾ ಶೂಟಿಂಗ್ ಟೈಮಲ್ಲಿ ಪುನೀತ್ ರಾಜ್​​ಕುಮಾರ್​ ಹಾಗು ಪತ್ನಿ ಅಶ್ವಿನಿ, ಶೂಟಿಂಗ್ ಸೆಟ್​ಗೆ ಬಂದಿದ್ದರು. ತುಂಬಾ ಮುದ್ದಾದ ಜೋಡಿ, ಈ ಕಪಲ್ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಾವು ಪುನೀತ್ ಸಾರ್ ಅವರನ್ನು ಕಳೆದುಕೊಂಡಿದ್ದೀವಿ ಎಂದರು.

ಪುನೀತ್ ಮೆಚ್ಚುಗೆ.. ಪುನೀತ್ ಸಾರ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಕೂಡ ನನ್ನ ಹತ್ತಿರ ಬಂದು ಮಾತನಾಡಿಸಿದರು. ಇವರು ಚಿಕ್ಕಮಗಳೂರಿನವರು ಅಂತಾ ಪತ್ನಿ ಅಶ್ವಿನಿಗೆ ಪರಿಚಯಿಸಿದರು. ಹಾಗೆಯೇ, ಈ ಸಿನಿಮಾವನ್ನ‌ ಸೆಕೆಂಡ್ ಟೈಮ್ ರೀ ಶೂಟ್ ಮಾಡಿಸಿದರು. ಆಗ ನನ್ನ ಪಾತ್ರ ನೋಡಿ ನೀವು ಚೆನ್ನಾಗಿ ಅಭಿನಯಿಸಿದ್ದೀರಾ ಅಂತಾ ಶರ್ಮಿತಾ ಗೌಡ ಅವರಿಗೆ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದರಂತೆ.

ಈ ಸಿನಿಮಾ ಅಲ್ಲದೇ ಶರ್ಮಿತಾ ಗೌಡ, 'ಆಮ್ಲೆಟ್' ಹಾಗೂ 'ಸೀತಾಯಾನ' ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರಂತೆ. ಮುಂದೆ ಚಾಲೆಂಜಿಂಗ್ ಪಾತ್ರಗಳಲ್ಲಿ ಅಭಿನಯಿಸಬೇಕು ಅನ್ನೋದು ಶರ್ಮಿತಾ ಅವರ ಕನಸು ಆಗಿದೆ.

ಓದಿ: ಅಧಿವೇಶನದಲ್ಲಿ ಯಾವುದೇ ವಿಚಾರಗಳ ಚರ್ಚೆಗೆ ನಿರ್ಬಂಧವಿಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.