ಸ್ಯಾಂಡಲ್ವುಡ್ ನಟಿಗಾಗಿ ಗೆಳೆಯರಿಬ್ಬರ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟಿ ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅಶೋಕ್ ನಗರ ಪೊಲೀಸರು ರಾಗಿಣಿಗೆ ನೋಟಿಸ್ ನೀಡಿದ್ದಾರೆ.

ಮೂರು ದಿನಗಳ ಹಿಂದೆ ನಗರದ ರೆಸಿಡೆನ್ಸಿ ರಸ್ತೆಯ ರಿಟ್ಜ್ ಕಾರ್ಲ್ಟನ್ ಖಾಸಗಿ ಹೋಟೆಲ್ನಲ್ಲಿ ಶಿವಪ್ರಕಾಶ್ ಹಾಗೂ ಆರ್ಟಿಒ ಅಧಿಕಾರಿ ರವಿಶಂಕರ್ ಇಬ್ಬರೂ ರಾಗಿಣಿ ಎದುರಿಗೇ ಬಿಯರ್ ಬಾಟಲ್ನಿಂದ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಈ ಮುನ್ನ ಉದ್ಯಮಿ ಶಿವಪ್ರಕಾಶ್ ಜೊತೆ ಆತ್ಮೀಯರಾಗಿದ್ದ ರಾಗಿಣಿ ಇತ್ತೀಚೆಗೆ ರವಿಶಂಕರ್ ಅವರೊಂದಿಗೆ ಹೆಚ್ಚು ಇರುತ್ತಿದ್ದರೆನ್ನಲಾಗಿದೆ. ರವಿ ಜೊತೆ ರಾಗಿಣಿಯನ್ನು ಹೋಟೆಲ್ನಲ್ಲಿ ನೋಡಿದ ಶಿವಪ್ರಕಾಶ್ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿದ್ದು, ಕೊನೆಗೆ ಇಬ್ಬರೂ ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ.
ಘಟನೆ ನಂತರ ಹೋಟೆಲ್ನವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಘಟನೆ ನಡೆದಾಗ ಇದ್ದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಹಾಗೇ ವಿಚಾರಣೆಗೆ ಹಾಜರಾಗಲು ರಾಗಿಣಿಗೆ ಕೂಡಾ ನೋಟಿಸ್ ಜಾರಿ ಮಾಡಿದ್ದಾರೆ. ಈ ಸಂಬಂಧ ಇಂದು ರಾಗಿಣಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.