ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ ಪೌರ ಕಾರ್ಮಿಕರಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಊಟವನ್ನ ನೀಡುತ್ತಾ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಈ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಮಾಡಿದ್ದರು.
ರಾಗಿಣಿ ಮಾಡ್ತಿದ್ದ ಸಮಾಜ ಸೇವೆ ನೋಡುಗರನ್ನ ಬೆರಗುಗೊಳಿಸಿತ್ತು. ಅಷ್ಟರಲ್ಲೇ ಈ ಬೆಡಗಿಯ ಬದುಕಿನಲ್ಲಿ, ಡ್ರಗ್ಸ್ ಮಾಫಿಯಾ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸಿ, ಜಾಮೀನು ಪಡೆದಿರುವ ರಾಗಿಣಿ ದ್ವಿವೇದಿ ಆ ಕಹಿ ಘಟನೆಯನ್ನ ಮರೆತು ಸಿನಿಮಾ, ಫ್ಯಾಮಿಲಿ ಜೊತೆಗೆ ಮತ್ತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೊನಾ ಎರಡನೇ ಅಲೆ ಶುರುವಾಗಿರೋ ಬೆನ್ನಲ್ಲೇ ಕರ್ನಾಟಕ ಮತ್ತೆ ಲಾಕ್ ಡೌನ್ ಆಗಿದೆ. ಈ ಟೈಮಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಾ ಇರೋ ಪೊಲೀಸ್ ಅಧಿಕಾರಗಳ ಹಸಿವುನ್ನ ನೀಗಿಸುವ ಕೆಲಸ ಮಾಡಿದ್ದಾರೆ ರಾಗಿಣಿ.
ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಇಂದು ರಾಗಿಣಿ ದ್ವಿವೇದಿ 200ಕ್ಕೂ ಹೆಚ್ಚು ಜನಕ್ಕೆ ಊಟ ವಿತರಣೆ ಮಾಡಿದ್ದಾರೆ. ಈ ಮೂಲಕ ರಾಗಿಣಿ, ಮತ್ತೆ ಕೊರೊನಾ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.