ETV Bharat / sitara

ಪಕ್ಕದ ಮನೆಯವರಿಗೆ ಬೈದು, ಕೊಲೆ ಬೆದರಿಕೆ ಹಾಕಿದ ಪ್ರಕರಣ:ಬಾಲಿವುಡ್​ ನಟಿ ಅರೆಸ್ಟ್​​

ಬೆದರಿಕೆ ಹಾಕಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಪಾಯಲ್​ಗೆ ಪೊಲೀಸರು ಬಂಧನ ಮಾಡಿದ್ದರು. ಇದಾದ ಬಳಿಕ ಷರತ್ತುಬದ್ಧ ಜಾಮೀನು ನೀಡಿ ರಿಲೀಸ್ ಮಾಡಿದ್ದಾರೆ.

author img

By

Published : Jun 25, 2021, 7:33 PM IST

Actress Payal Rohatagi
Actress Payal Rohatagi

ಅಹಮದಾಬಾದ್​: ಸದಾ ಒಂದಿಲ್ಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುವ ಬಾಲಿವುಡ್ ನಟಿ ಪಾಯಲ್​ ರೋಹಟಿಗಿ ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದು, ಆಕೆಯ ವಿಚಾರಣೆ ನಡೆಸಿರುವ ಪೊಲೀಸರು ಷರತ್ತುಬದ್ಧ ಜಾಮೀನು ನೀಡಿದ್ದಾರೆ.

ಪರಾಗ್​ ಶಾ ಎಂಬ ವೈದ್ಯರು ನಟಿಯ ವಿರುದ್ಧ ಸ್ಯಾಟಲೈಟ್​​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಗುಜರಾತ್​ನ ಅಹಮದಾಬಾದ್​​ನಲ್ಲಿ ಹೌಸಿಂಗ್​ ಸೊಸೈಟಿ ಸದಸ್ಯರಾಗಿರುವ ದೂರುದಾರರು, ನಟಿ ತಮಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವ ಬೆದರಿಕೆ ನೀಡಿದ್ದರು ಎಂದು ಆರೋಪಿಸಿದ್ದರು. ಗುಜರಾತ್​ನ ಅಹಮದಾಬಾದ್​ನ ಪೊಲೀಸರು ನಟಿಯ ಬಂಧನ ಮಾಡಿ ವಿಚಾರಣೆ ನಡೆಸಿದ್ದು, ಇದಾದ ಬಳಿಕ ಷರತ್ತುಬದ್ಧ ಜಾಮೀನು ನೀಡಿ ಮನೆಗೆ ಕಳುಹಿಸಿದ್ದಾರೆ.

ಏನಿದು ಪ್ರಕರಣ

ಅಹಮದಾಬಾದ್​ನ ಹೌಸಿಂಗ್​ ಸೊಸೈಟಿಯಲ್ಲಿ ಪರಾಗ್​ ಸದಸ್ಯರಾಗಿದ್ದು, ವ್ಯಾಟ್ಸ್​ಅಪ್​ ಗ್ರೂಪ್​ನಲ್ಲಿ ಪರಾಗ್​ ವಿರುದ್ಧ ಬಾಲಿವುಡ್​ ನಟಿ ಕೆಟ್ಟ ಶಬ್ದ ಬಳಿಕೆ ಮಾಡಿದ್ದರು. ಜತೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರ ಮಧ್ಯೆ ನಟಿ ಪಕ್ಕದ ಮನೆಯವರೊಂದಿಗೆ ಜಗಳ ಸಹ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಇದೀಗ ಅವರನ್ನ ಬಂಧನ ಮಾಡಲಾಗಿದೆ.

ಇದನ್ನೂ ಓದರಿ: ಬೈಕ್​ ಸವಾರನ ಪ್ರಾಣ ಉಳಿಸಲು ಹೋಗಿ ಕಾರು ಅಪಘಾತ : ಆರು ಮಂದಿ ದುರ್ಮರಣ

ಈ ಹಿಂದೆ ಭಾರತದ ಮಾಜಿ ಪ್ರಧಾನಿ ದಿವಂಗತ ಜವಹರ್​​​ಲಾಲ್ ನೆಹರು ಅವರ ಕುಟುಂಬದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ಪೊಲೀಸರ ವಶದಲ್ಲಿದ್ದ ಬಾಲಿವುಡ್ ನಟಿ ಪಾಯಲ್​ ರೋಹಟಗಿಗೆ ತದನಂತರ ನ್ಯಾಯಾಲಯ ಜಾಮೀನು ನೀಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.