ETV Bharat / sitara

ನೋ ವೇ, ಚಾನ್ಸೇ ಇಲ್ಲ, ಅದನ್ನು ನಾನು ಎಂದಿಗೂ ಬಿಡುವುದಿಲ್ಲ: ನೇಹಾ ಪಾಟೀಲ್​​ - undefined

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್, ನಾನು ಯಾವುದೇ ಕಾರಣಕ್ಕೂ ನಟಿಸುವುದನ್ನು ಬಿಡುವುದಿಲ್ಲ ಎಂದಿದ್ದಾರೆ. ಪತಿ ಕೂಡಾ ಅವರ ಬೆಂಬಲಕ್ಕೆ ನಿಂತಿರುವುದು ನೇಹಾಗೆ ಖುಷಿ ತಂದಿದೆಯಂತೆ.

ನೇಹಾ ಪಾಟೀಲ್
author img

By

Published : Jun 18, 2019, 2:40 PM IST

Updated : Jun 18, 2019, 3:02 PM IST

ಸಾಕಷ್ಟು ನಟಿಯರು ಮದುವೆ ಬಳಿಕ ಗಂಡ, ಮಕ್ಕಳು, ಅತ್ತೆ, ಮಾವ ಎನ್ನುತ್ತಲೇ ಬ್ಯುಸಿಯಾಗುತ್ತಾರೆ. ಮತ್ತೆ ಕೆಲವು ನಟಿಯರು ಮಕ್ಕಳಾದ ಮೇಲೆ ದಪ್ಪ ಆಗಿಬಿಡುತ್ತಾರೆ. ಮತ್ತೆ ಸಿನಿಮಾಗಳತ್ತ ಮುಖ ಮಾಡುವುದು ಬಹಳ ವಿರಳ ಎಂತಲೇ ಹೇಳಬಹುದು.

pranav neha
ಪತಿ ಪ್ರಣವ್ ಜೊತೆ ನೇಹಾ

ನಟಿ ನೇಹಾ ಪಾಟೀಲ್​​ ಇದಕ್ಕೆ ವಿರುದ್ಧ. ಅವರ ಜೊತೆ ಬಂದ ಸಾಕಷ್ಟು ಗೆಳತಿಯರು ಮದುವೆಯಾಗುವಾಗ ಸಿನಿರಂಗಕ್ಕೆ ಗುಡ್ ಬೈ ಹೇಳಿದರಂತೆ. ಇವೆಲ್ಲದರ ನಡುವೆ ಸಾಕಷ್ಟು ನಿರ್ಮಾಪಕರು ಮದುವೆಯಾದ ಮೇಲೆ ಅವರು ನಾಯಕಿ ಸ್ಥಾನಕ್ಕೆ ಸೂಕ್ತರಲ್ಲ ಎಂದು ನಿರ್ಧರಿಸಿಬಿಡುತ್ತಾರೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಮದುವೆ ಆದ ನಾಯಕಿಯರೇ ಹೆಚ್ಚು ಅವಕಾಶ ಗಿಟ್ಟಿಸಿಕೊಂಡ ಉದಾಹರಣೆಗಳಿವೆ. ಇತ್ತೀಚಿಗೆ ಮದುವೆ ಆದ ನೇಹಾ ಪಾಟೀಲ್ ಕೂಡಾ ನೋ ವೇ... ನಾನು ಸಿನಿಮಾ ಬಿಡುವ ಚಾನ್ಸೇ ಇಲ್ಲ ಎನ್ನುತ್ತಿದ್ದಾರೆ. ‘ನ್ಯೂರಾನ್’ ಚಿತ್ರದ ಮೂವರು ನಾಯಕಿಯರಲ್ಲಿ ನೇಹಾ ಪಾಟೀಲ್ ಕೂಡಾ ಒಬ್ಬರು.

neha
ನೇಹಾ ಪಾಟೀಲ್​​​​​​​​​​​​​​​​​​​​​

ಶಿಲ್ಪಾ ಶೆಟ್ಟಿ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಜೊತೆಗೆ ನೇಹಾ ಕೂಡಾ ‘ನ್ಯೂರಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸಮಾಜ ಸೇವಕಿ ಪಾತ್ರದಲ್ಲಿ ನೇಹಾ ಅಭಿನಯಿಸಿದ್ದಾರೆ. ಇದು ಫ್ರೆಂಡ್ಸ್ ಪ್ರೊಡಕ್ಷನ್ ಅಡಿ ತಯಾರಾಗಿರುವ ಚಿತ್ರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಚಿತ್ರದಲ್ಲೂ ನೇಹಾ ನಟ ಪಂಕಜ್ ಜೋಡಿ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅವರ ನಾಲ್ವರು ಸಹೋದರರಲ್ಲಿ ಪಂಕಜ್ ಕೂಡಾ ಒಬ್ಬರು. ಅಂದಹಾಗೆ ನೇಹಾ ಪಾಟಿಲ್​​​ಗೆ ಮದುವೆ ನಂತರ ಧಾರಾವಾಹಿಗಳಲ್ಲಿ ಅಭಿನಯಿಸಲು ಹೆಚ್ಚು ಅವಕಾಶ ಬರುತ್ತಿದೆಯಂತೆ. ಆದರೆ ಚಾಲೆಂಜಿಂಗ್ ಪಾತ್ರಗಳನ್ನು ನಿಭಾಯಿಸಬೇಕು ಎನ್ನುವುದು ನೇಹಾ ಅವರ ಗುರಿ. ಪತಿ ಪ್ರಣವ್ ಕೂಡಾ ನೇಹಾಗೆ ಪ್ರೋತ್ಸಾಹ ನೀಡುತ್ತಿರುವುದು ಅವರ ಉತ್ಸಾಹ ಇಮ್ಮಡಿಯಾಗಲು ಕಾರಣವಾಗಿದೆಯಂತೆ.

ನಾ ಸಿನಿಮಾ ಬಿಡೋದಿಲ್ಲ....ನೇಹ ಪಾಟೀಲ್

ನಾಯಕಿಯರು ಸಿನಿಮಾ ರಂಗಕ್ಕೆ ಬಹುತೇಕ ಗುಡ್ ಬೈ ಹೇಳಿದಂತೆ ಅವರು ಮದುವೆ ಆದಾಗ. ಇದು ಕೆಲವರಲ್ಲಿ ಸುಳ್ಳಾಗಿದೆ. ಆದರೆ ನಿರ್ಮಾಪಕರು ಮದುವೆ ಆದ ನಾಯಕಿಯರು ಬಹುತೇಕ ನಾಯಕಿ ಆಗುವುದು ಕಷ್ಟ ಅಂತಲೇ ಬಾವಿಸಿರುತ್ತಾರೆ. ಭಾರತೀಯ ಚಿತ್ರ ರಂಗದಲ್ಲಿ ಮದುವೆ ಆದ ನಾಯಕಿಯರು ಹೆಚ್ಚು ಅವಕಾಶ ಗಿಟ್ಟಿಸಿಕೊಂಡ ಉದಾಹರಣೆ ಸಹ ಇದೆ.

ಇತ್ತೀಚಿಗೆ ವಿವಾಹ ಆದ ನಾಯಕಿ ನೇಹ ಪಾಟೀಲ್ ಸಹ ತಾವು ಸಿನಿಮಾ ಬಿಡು ಛಾನ್ಸ್ ಇಲ್ಲವೇ ಇಲ್ಲ ಅನ್ನುತ್ತಾರೆ. ಸಧ್ಯಕ್ಕೆ ನೇಹ ಪಾಟೀಲ್ ಮೂರು ನಾಯಕಿಯರಲ್ಲಿ ನ್ಯೂರಾನ್ ಚಿತ್ರದಲ್ಲಿ ಒಬ್ಬರು. ಶಿಲ್ಪಾ ಶೆಟ್ಟಿ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಜೊತೆ ಇವರು ಸಹ ನಾಯಕಿ. ಇದರಲ್ಲಿ ಸಮಾಜ ಸೇವಕಿ ಪಾತ್ರದಲ್ಲಿ ನೇಹ ಅಭಿನಯಿಸಿದ್ದಾರೆ. ಇದು ಫ್ರೆಂಡ್ಸ್ ಪ್ರೊಡಕ್ಷನ್ ಅಲ್ಲಿ ತಯಾರಾಗಿರುವ ಚಿತ್ರ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲೂ ಸಹ ನೇಹ ನಟ ಪಂಕಜ್ ಜೋಡಿ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಅವರ ನಾಲ್ವರು ಸಹೋದರರಲ್ಲಿ ಪಂಕಜ್ ಸಹ ಒಬ್ಬರು ಒಡೆಯ ಚಿತ್ರದಲ್ಲಿ.

ಅಂದಹಾಗೆ ನೇಹ ಪಾಟಿಲ್ ಅವರಿಗೆ ಮದುವೆ ನಂತರ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಲು ಅವಕಾಶ ಬರುತ್ತಿದೆಯಂತೆ. ಮದುವೆ ನಂತರ ಛಾಲೆಂಜಿಂಗ್ ಪಾತ್ರಗಳ ಮೇಲೆ ಇವರ ಕಣ್ಣು ಇಟ್ಟಿದ್ದಾರೆ. ಮನೆಯಲ್ಲಿ ಗಂಡ ಪ್ರಣವ್ ಪ್ರೋತ್ಸಾಹ ಇದ್ದೇ ಇದೆ. ನಿನಗೆ ಕಮ್ಫರ್ಟ್ ಅನ್ನಿಸಿದ ಪಾತ್ರಗಳಲ್ಲಿ, ವಿಶೇಷ ಅನ್ನಿಸುವ ಪಾತ್ರಗಳಲ್ಲಿ ಅಭಿನಯಿಸಲು ನೇಹ ಪಾಟೀಲ್ ಯಜಮಾನರ ಅಡ್ಡಿಏನು ಇಲ್ಲವಂತೆ. 

Last Updated : Jun 18, 2019, 3:02 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.