ETV Bharat / sitara

ಮಗುವಿನ ಮುದ್ದಾದ ಹೆಸರು ರಿವೀಲ್ ಮಾಡಿದ ಕೃಷ್ಣಲೀಲಾ ಬೆಡಗಿ

ಸ್ಯಾಂಡಲ್​ವುಡ್​ ನಟಿ ಮಯೂರಿ ತಮ್ಮ ಮಗನ ಫೋಟೋ​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗನ ಮುದ್ದಾದ ಹೆಸರನ್ನು ರಿವೀಲ್ ಮಾಡಿದ್ದಾರೆ.

author img

By

Published : Jun 7, 2021, 8:03 PM IST

Updated : Jun 7, 2021, 9:44 PM IST

mayuri
mayuri

ಕೃಷ್ಣಲೀಲಾ, ಇಷ್ಟಕಾಮ್ಯ, ರುಸ್ತುಂ, ನಟರಾಜ ಸರ್ವೀಸ್‌ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಮಯೂರಿ. ಗಣಪ ಸಿನಿಮಾ ಆದ್ಮೇಲೆ ಮಯೂರಿ, ಮದುವೆ ಆಗಿ ಈಗ ತಾಯ್ತನದ ಖುಷಿಯನ್ನ ಅನುಭವಿಸುತ್ತಿದ್ದಾರೆ. ಸದ್ಯ ಮಯೂರಿ ತಮ್ಮ ಮುದ್ದಿನ ಮಗನ ಜೊತೆಗಿರುವ ಫೋಟೋ, ಹೆಸರನ್ನ ರಿವೀಲ್ ಮಾಡಿದ್ದಾರೆ.

ಮಾರ್ಚ್ 15, 2021ರಂದು ಮಗ ಹುಟ್ಟಿದ್ದಾನೆ. ಬದುಕು ಸಂಪೂರ್ಣವಾಗಿ ಬದಲಾಗಿದೆ. ನನ್ನ ಮಗನೇ ನನಗೀಗ ಹೊಸ ಪ್ರಪಂಚ. ನನ್ನ ಮಗು ಆರವ್ ಎಂದು ನಟಿ ಮಯೂರಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮಗನ ಜೊತೆ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಆರವ್‌ಗೆ 15 ದಿನ ಇದ್ದಾಗ ಫೋಟೋಶೂಟ್ ಮಾಡಿಸಲಾಗಿದೆಯಂತೆ.

ಮಗುವಿನ ಮುದ್ದಾದ ಹೆಸರು ರಿವೀಲ್ ಮಾಡಿದ ಕೃಷ್ಣಲೀಲಾ ಬೆಡಗಿ

ಕಳೆದ ವರ್ಷ ಜೂನ್ 12, 2020ರಂದು ಮದುವೆ ಆಗಿದ್ದರು. ಲಾಕ್‌ಡೌನ್ ಇರೋದಕ್ಕೆ ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ ಅವರು ಬಹುಕಾಲದ ಗೆಳೆಯ ಅರುಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಯೂರಿ ಹಾಗು ಅರುಣ್ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೊನೆಗೆ ಇಬ್ಬರ ಕುಟುಂಬದಲ್ಲಿ ಇವ್ರ ಪ್ರೀತಿಗೆ ಒಪ್ಪಿಗೆ ಪಡೆದು ಕಳೆದ ವರ್ಷ ಹಸೆಮಣೆ ಏರಿದ್ದರು. ಸದ್ಯ ತಾಯ್ತನದ ಖುಷಿಯಲ್ಲಿರುವ ಮಯೂರಿ ನಟನೆಯಿಂದ ದೂರ ಉಳಿದಿದ್ದಾರೆ.

Last Updated : Jun 7, 2021, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.