ಮೈಸೂರು: ಬಾಲಿವುಡ್ ನಟಿ ಜೂಹಿ ಚಾವ್ಲಾ ಕುಟುಂಬ ಸಮೇತರಾಗಿ ಆಗಮಿಸಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಬಿನಿ ಹಿನ್ನೀರಿನಲ್ಲಿ ಸಫಾರಿ ಮಾಡಿ ಖುಷಿ ಪಟ್ಟಿದ್ದಾರೆ.
ಕಬಿನಿ ಜಲಾಶಯ, ಕಾರಾಪುರ ಜಂಗಲ್ ಲಾಡ್ಜ್ಗೆ ಭೇಟಿ ನೀಡಿ ರಾಷ್ಟ್ರೀಯ ಉದ್ಯಾನದ ಹಸಿರು ವಾತಾವರಣವನ್ನು ಗುಣಗಾನ ಮಾಡಿದರು. ಪುತ್ರ ಅರ್ಜುನ ಜೊತೆ ವಾಸ್ತವ್ಯ ಹೂಡಿದ್ದ ರೆಸಾರ್ಟ್ ಬಳಿ ಗಿಡ ನೆಟ್ಟು ಸಂಭ್ರಮಿಸಿದ ವಿಡಿಯೋವನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.