ಬೆಂಗಳೂರು : ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಈ ಬಗ್ಗೆ ದಕ್ಷಿಣ ಭಾರತದ ಹಿರಿಯ ನಟಿ ಭವ್ಯ ಈಟಿವಿ ಭಾರತದೊಂದಿಗೆ ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಬೇಕೆಂದಿರುವ ಭವ್ಯ, ಅನ್ಯ ಭಾಷೆಯ ಮೇಲೆ ಕನ್ನಡಿಗರಿಗೆ ಹೆಚ್ಚು ವ್ಯಾಮೋಹವಿದೆ. ಕನ್ನಡ ರಾಜ್ಯೋತ್ಸವ ಬಂದಾಗಲೆಲ್ಲ ಕನ್ನಡ ಬೆಳೆಸಬೇಕು ಅಂತ ನೆನಪಿಸುತ್ತೆ. ಎಲ್ಲರೂ ಕನ್ನಡ ಭಾಷೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಮಾತನಾಡಬೇಕು. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕು ಎಂದರು.
ಇನ್ನು ಕನ್ನಡಿಗರೇ ಕನ್ನಡ ಭಾಷೆ ಮಾತಾಡೋದಿಲ್ವಲ್ಲ ಅಂತ ಮರು ಪ್ರಶ್ನೆ ಕೇಳಿದಾಗ, ಕರ್ನಾಟಕದಲ್ಲಿ ಎಲ್ಲ ಭಾಷೆಯ ಜನರಿದ್ದಾರೆ. ಮಾತನಾಡುವಾಗ ಬೇರೆ ಬೇರೆ ಭಾಷೆಗಳ ಪದಗಳನ್ನು ಬಳಸೋದು ಸಾಮಾನ್ಯ. ಆದರೆ ನಮ್ಮ ಭಾಷೆಯನ್ನು ನಾವು ಬಿಟ್ಟು ಕೊಡಬಾರದು. ನಮ್ಮ ಭಾಷೆಯನ್ನು ಉತ್ತೇಜಿಸಿ ಬೆಳೆಸಬೇಕು ಅಂತ ತಿಳಿಸಿದರು.