ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಮಾಯಾ ಆಗಿ ನಟಿಸುತ್ತಿರುವ ಚೆಲುವೆಯ ಹೆಸರು ಐಶ್ವರ್ಯಾ ಬಸ್ಪುರೆ. ವಿಲನ್ ಮಾಯಾ ಆಗಿ ಅಭಿನಯಿಸುತ್ತಿದ್ದ ಐಶ್ವರ್ಯಾ ಸದ್ಯ ಮೋಹಿನಿ ಆಗಿ ನಟಿಸುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.
ಇದೀಗ ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡಿರುವ ಐಶ್ವರ್ಯಾ ಅವರು, ನಂದಿ ಹಿಲ್ಸ್ ಗೆ ತೆರಳಿದ್ದು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ. ಈ ಕುರಿತಾಗಿ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ ಐಶ್ವರ್ಯಾ.
ಪಯಣ ನನ್ನನ್ನು ಮಗುವಿನಂತೆ ಮಾಡುತ್ತದೆ. ನಾನು ಮಳೆಹನಿ, ಸೂರ್ಯನ ಕಿರಣ, ರಸ್ತೆಯ ಪ್ರತಿಯೊಂದು ಹಾದಿಯನ್ನು ಹೆಚ್ಚಿಸುವ ಅಥವಾ ಕಮ್ಮಿ ಮಾಡುವ ಪ್ರತಿ ಸಂಖ್ಯೆಯನ್ನು ಆಸ್ವಾದಿಸುವೆ. ಡೆಸ್ಟಿನೇಷನ್ ಗಿಂತ ಹೆಚ್ಚಾಗಿ ನಾನು ಸುಂದರ ಪ್ರಯಾಣಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ಯಾಕೆಂದರೆ ಪ್ರಯಾಣ ಎಂಬುದು ನನಗೆ ಚಿಕಿತ್ಸೆಯಿದ್ದಂತೆ. ಈ ವೇಳೆ ನಾನು ಆತಂಕ, ಚಿಂತೆ ಹಾಗೂ ಒತ್ತಡಗಳನ್ನು ಮರೆಯುವೆ. ನಂದಿ ಬೆಟ್ಟದ ವಾತಾವರಣ ಚೆನ್ನಾಗಿತ್ತು. ನಾನು ಅದನ್ನು ಆಹ್ಲಾದಿಸಿ ಸಂತೋಷಪಟ್ಟಿರುವೆ" ಎಂದು ಬರೆದುಕೊಂಡಿದ್ದಾರೆ.
ನಂದಿಬೆಟ್ಟಕ್ಕೆ ತೆರಳಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಐಶ್ವರ್ಯಾ, "ನಂದಿಹಿಲ್ಸ್ ಗೆ ನಾನು ಸಂಜೆ ಸುಮಾರು 4 -30 ರ ಹೊತ್ತಿಗೆ ತೆರಳಿದ್ದೆ, ಸುಂದರ ಹವಾಮಾನ ಸೆಳೆಯುವಂತಿತ್ತು" ಎಂದು ಹೇಳಿಕೊಂಡಿದ್ದಾರೆ.
ಯಾರೇ ನೀ ಮೋಹಿನಿ ಧಾರಾವಾಹಿಯ ಮಾಯಾ ಆಗಿ ನಟಿಸುತ್ತಿರುವ ಐಶ್ವರ್ಯಾ, ಉದಯ ವಾಹಿನಿಯ 'ಮಹಾಸತಿ' ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಆರಂಭಿಸಿದ್ದರು.