ಮೊನ್ನೆಯಷ್ಟೇ ತಮಿಳು ಚಿತ್ರವೊಂದಕ್ಕೆ ನಗ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದ ನಟಿ ಅದಾ ಶರ್ಮಾ, ಈಗ ಇನ್ಸ್ಟಾಗ್ರಾಂನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ತಮ್ಮ ಸರಣಿ ಹಾಟ್ ಲುಕ್ಗಳನ್ನು ಹರಿಬಿಟ್ಟು ಫುಲ್ ಸೆನ್ಷೆಷನ್ ಸೃಷ್ಟಿಸಿದ್ದಾರೆ.
ಚಿರತೆ ಬಣ್ಣದ ಬಿಕಿನಿ ತೊಟ್ಟು ವಿವಿಧ ಭಂಗಿಗಳಲ್ಲಿ ಕುಳಿತು ಕ್ಯಾಮರಾಗೆ ಪೋಸ್ ನೀಡಿರುವ ಅದಾ, ಆ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ದೋಸೆ ಹಾಗೂ ಚಟ್ನಿ ಮಾಡಿಕೊಡುವ ಹುಡುಗನಿಗಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.