ETV Bharat / sitara

ನನ್ನ ಹುಟ್ಟುಹಬ್ಬ ಇರುವ ಜಾಗದಲ್ಲೇ ಆಚರಿಸಿ ಹರಸಿ: ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಮನವಿ - Actor Upendra birthday

ಸೆ. 18 ರಂದು ಅಭಿಮಾನಿಗಳ ಜೊತೆಗೆ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿದ್ದರೂ ಫ್ಯಾನ್ಸ್‌ಗೆ ಖುಷಿ ನೀಡುವ ಸುದ್ದಿಯೊಂದು ಈಗಾಗಲೇ ಸಿಕ್ಕಿದೆ. ಉಪೇಂದ್ರ ಹುಟ್ಟುಹಬ್ಬದ ಮುಂಚಿತವಾಗಿ ಅವರದ್ದೇ ನಿರ್ದೇಶನದ ಹೊಸ ಸಿನಿಮಾ ಅನೌಸ್ ಆಗಿದ್ದು ಚಿತ್ರದ ಟೈಟಲ್ ಕೂಡ ಈಗಾಗಲೇ ಲೀಕ್ ಆಗಿದೆ.

Actor Upendra tweeted about her birthday
ರಿಯಲ್ ಸ್ಟಾರ್ ಉಪೇಂದ್ರ
author img

By

Published : Sep 17, 2021, 1:34 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಹಾಗೂ ನಟಿಯರ ಹುಟ್ಟುಹಬ್ಬ ಬಂದರೆ ಸಾಕು ಅವರ ಅಭಿಮಾನಿಗಳು ಹಬ್ಬದದಂತೆ ಆಚರಿಸುತ್ತಿದ್ದರು. ಆದರೆ, ಕಳೆದ ಎರಡು ವರ್ಷದಿಂದ ಚಂದನವನದಲ್ಲಿ ಯಾವ ಸ್ಟಾರ್​ ನಟರೂ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿಲ್ಲ. ಈಗ ಇದೇ ನಿರ್ಧಾರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮುಂದಾಗಿದ್ದಾರೆ.

Actor Upendra tweeted about her birthday
ಉಪೇಂದ್ರ ಅವರ ಮನವಿ

ಹೌದು, ಸೆಪ್ಟೆಂಬರ್ 18 ಆಗಮಿಸುತ್ತಿದ್ದಂತೆ ಸಾವಿರಾರೂ ಅಭಿಮಾನಿಗಳು ನಟ ಉಪೇಂದ್ರ ಅವರ ಕತ್ರಿಗುಪ್ಪೆ ನಿವಾಸದಲ್ಲಿ ಸೇರುತ್ತಿದ್ದರು. ಅವರ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ, ಕೊರೊನಾದಿಂದಾಗಿ ಈ ವರ್ಷವೂ ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟುಹಬ್ಬ ಆಚರಣೆ ಮಾಡದಿರಲು ರಿಯಲ್ ಸ್ಟಾರ್ ಉಪೇಂದ್ರ ಮುಂದಾಗಿದ್ದಾರೆ. ಹಾಗಾಗಿ ಸಹಜವಾಗಿ ಇದು ಉಪ್ಪಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಅಭಿಮಾನಿಗಳ ಆರೋಗ್ಯ ದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆ ಇಲ್ಲ

ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಈ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿಲ್ಲ. ಅಲ್ಲದೇ ತಮ್ಮ ಹುಟ್ಟುಹಬ್ಬದ ದಿನದಂದು ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಹಾಗಾಗಿ ಎಲ್ಲ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇನ್ನು ಸೆ. 18 ರಂದು ಅಭಿಮಾನಿಗಳ ಜೊತೆಗೆ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿದ್ದರೂ ಫ್ಯಾನ್ಸ್‌ಗೆ ಖುಷಿ ನೀಡುವ ಸುದ್ದಿಯೊಂದು ಈಗಾಗಲೇ ಸಿಕ್ಕಿದೆ. ಉಪೇಂದ್ರ ಹುಟ್ಟುಹಬ್ಬದ ಮುಂಚಿತವಾಗಿ ಅವರದ್ದೇ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್​ ಆಗಿದ್ದು, ಚಿತ್ರದ ಟೈಟಲ್ ಕೂಡ ಈಗಾಗಲೇ ಲೀಕ್ ಆಗಿದೆ. ಸದ್ಯ ಲೀಕ್ ಆಗಿರುವ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಫಸ್ಟ್ ಲುಕ್‌ನಲ್ಲಿ ಸಿನಿಮಾದ ಟೈಟಲ್‌ ಮೂರು ನಾಮದ ಸಿಂಬಲ್ ಹೊಂದಿದೆ.

I ಎಂದರೆ ನಾನು U ಎಂದರೆ ನೀನು?

ಈ ಹಿಂದೆ ಸೂಪರ್ ಸಿನಿಮಾಗೂ ಅವರು ಚಿಹ್ನೆಯನ್ನೇ ಬಳಸಿದ್ದರು. ಅಲ್ಲದೇ, ಈ ನಾಮವನ್ನು ಬೇರೆ ಬೇರೆ ಅರ್ಥದಲ್ಲೂ ನಾವು ಓದಿಕೊಳ್ಳಬಹುದು. I ಎಂದರೆ ನಾನು ಮತ್ತು U ಎಂದರೆ ನೀನು ಎಂಬರ್ಥವೂ ಸಿಗಲಿದೆ. ಇದನ್ನ ಉಪ್ಪಿ 3 ಅಂತಲೂ ಕರೆಯಬಹುದಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿಲಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ವಿಶೇಷವೆಂದರೆ, ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಉಪೇಂದ್ರ ಅವರ ಫ್ಯಾಮಿಲಿಯೇ ನಿರ್ವಹಿಸಲಿದೆ.

ಒಟ್ಟಿನಲ್ಲಿ ಉಪೇಂದ್ರ ನಿರ್ದೇಶಿಸಲಿರುವ ಹೊಸ ಚಿತ್ರದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಆದರೆ, ಸದ್ಯ ಲೀಕ್ ಆಗಿರುವ ಸಿನಿಮಾದ ಹೆಸರು ಹಾಗೂ ಪೋಸ್ಟರ್ ಉಪೇಂದ್ರ ಅವರು ನಿರ್ದೇಶನ ಮಾಡಬೇಕಿರೋ ಚಿತ್ರದ ಹೆಸರು ಅನ್ನೋದು ಅಧಿಕೃತ ಆಗಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.