ETV Bharat / sitara

ಕನ್ನಡದ ವಿಚಾರವಾಗಿ ಕನ್ನಡಪರ ಸಂಘಟನೆಗಳಲ್ಲೇ ಗೊಂದಲವಿದೆ, ಸರಿಪಡಿಸಿಕೊಳ್ಳಿ: ಕಿಚ್ಚ ಸುದೀಪ್ ಸಲಹೆ - Actor Sudeep

ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ ಕನ್ನಡ ಪರವಾಗಿರುವ ಕೆಲ ಕನ್ನಡಪರ ಸಂಘಟನೆಗಳಲ್ಲಿಯೇ ಗೊಂದಲವಿದೆ. ನೀವು ಮೊದಲು ನಿಮ್ಮ ಗೊಂದಲವನ್ನು ಸರಿಪಡಿಸಿಕೊಳ್ಳಿ ಎಂದು ಕನ್ನಡಪರ ಹೋರಾಟಗಾರರಿಗೆ ಚಿತ್ರನಟ ಕಿಚ್ಚ ಸುದೀಪ್ ಸಲಹೆ ನೀಡಿದರು.

Actor Sudeep
ನಟ ಕಿಚ್ಚ ಸುದೀಪ್​
author img

By

Published : Mar 5, 2021, 8:05 PM IST

ರಾಮನಗರ: ಕನ್ನಡವನ್ನು ಕಿತ್ತುಕೊಂಡವರು ಯಾರು? ಯಾರಿಗಿದೆ ಆ ಧೈರ್ಯ. ಕನ್ನಡಕ್ಕಿರುವ ಇತಿಹಾಸ ಬೇರೆ ಯಾವ ಭಾಷೆಗೂ ಕೂಡ ಇಲ್ಲ. ಯಾವನಿಗಿದೆ ಕನ್ನಡವನ್ನು ಕಿತ್ತುಕೊಳ್ಳುವ ತಾಕತ್ತು?, ಬರೋಕೆ ಹೇಳಿ ನೋಡೋಣ ಎಂದು ನಟ ಕಿಚ್ಚ ಸುದೀಪ್​ ಹೇಳಿದರು.

ನಟ ಕಿಚ್ಚ ಸುದೀಪ್​

ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ, ಬುರ್ಜ್​ ಖಲೀಫಾದಲ್ಲಿ ಕನ್ನಡದ ಬಾವುಟ ಪ್ರದರ್ಶನ ಕಂಡ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್​ಗೆ ಕನ್ನಡಪರ ಹೋರಾಟಗಾರರು ಸನ್ಮಾನ ಮಾಡಿದರು. ಬಳಿಕ ಮಾತನಾಡಿದ ಕಿಚ್ಚ, ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ ಕನ್ನಡ ಪರವಾಗಿ ಇರುವ ಕೆಲ ಕನ್ನಡಪರ ಸಂಘಟನೆಗಳಲ್ಲಿಯೇ ಗೊಂದಲವಿದೆ ಎಂದರು.

ಈ ವೇಳೆ ಮಾತನಾಡಿದ ಅವರು, ನನಗೆ ಇತ್ತೀಚಿಗೆ ಯಾರಾದರೂ ಕನ್ನಡದ ಶಾಲು ಹಾಕಿ ಮನೆಗೆ ಬಂದರೆ ಖುಷಿ ಪಡೋದಾ, ಭಯ ಪಡೋದಾ ಗೊತ್ತಾಗಲ್ಲ. ನನಗೆ ಉಗಿಯೋಕೆ ಬಂದಿದ್ದಾರಾ, ಹೊಗಳೋಕೆ ಬಂದಿದ್ದಾರಾ ಎಂದು ಗೊತ್ತಾಗಲ್ಲ. ಕನ್ನಡ ಮಾತನಾಡಿದರೆ ಬೈತೀರಾ, ಮಾತನಾಡಿಲ್ಲ ಅಂದ್ರೂ ಬೈತೀರಾ ಎಂದರು.

ನಮಗೆ ಬೇರೆ ಭಾಷೆಗಳ ಮೇಲೂ ಅಭಿಮಾನ ಇರಬೇಕು. ಇದರ ಜೊತೆಗೆ ಬೇರೆಯವರು ನಮ್ಮ ಭಾಷೆ ಮಾತನಾಡುವಾಗ ಗಲಾಟೆಯಾಗುತ್ತೆ, ಆಗ ನನಗೆ ಗೊಂದಲ ಆಗುತ್ತೆ, ಯಾಕೆ ಅಂತಾ ಗೊತ್ತಾಗುತ್ತಿಲ್ಲ. ಸಂಘಟನೆಯವರ ಹಿಂದೆ ನೂರಾರು, ಸಾವಿರಾರು ಜನ ಬರ್ತೀರಾ. ಆದರೆ ಕಲಾವಿದರಿಗೆ ಅಭಿಮಾನಿಗಳಷ್ಟೇ ಇದ್ದಾರೆ, ಅವರು ರಾಜ್ಯದ ಮೂಲೆಗಳಲ್ಲಿ ಇರುತ್ತಾರೆ. ಹಾಗಾಗಿ ಕೆಲವರು ಏನಾದರೂ ಸ್ಟೆಪ್ ತಗೊಂಡಾಗ ಸ್ವಲ್ಪ ಯೋಚಿಸಿ ನಿರ್ಧಾರ ಕೈಗೊಂಡ್ರೆ ಒಳ್ಳೆಯದು ಎಂದು ಕನ್ನಡಪರ ಹೋರಾಟಗಾರರಿಗೆ ಕಿಚ್ಚ ಸುದೀಪ್ ಸಲಹೆ ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.