ETV Bharat / sitara

ಸಲ್ಮಾನ್​ ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್ ಕಟ್​! ಈ ಬಗ್ಗೆ ನಟ ಸುದೀಪ್​ ಏನ್ ಹೇಳಿದ್ರು ಗೊತ್ತಾ?

ಸಲ್ಲು ಜತೆ 'ದಬಾಂಗ್-3' ಚಿತ್ರದಲ್ಲಿ ನೆಗೆಟಿವ್​ ರೋಲ್​ ನಿಭಾಯಿಸುತ್ತಿದ್ದಾರೆ. ಕನ್ನಡಿಗ ಪ್ರಭುದೇವ ನಿರ್ದೇಶನದ ಈ ಚಿತ್ರಕ್ಕೆ ಕಿಚ್ಚ 80 ದಿನಗಳ ಕಾಲ್‌ಶೀಟ್​ ಕೊಟ್ಟಿದ್ದಾರೆ.

author img

By

Published : May 9, 2019, 7:57 AM IST

ಚಿತ್ರಕೃಪೆ : ಟ್ವಿಟ್ಟರ್​

ಬಾಲಿವುಡ್​ ಸುಲ್ತಾನ್​ ಸಲ್ಮಾನ್ ಖಾನ್​ ಚಿತ್ರಕ್ಕೆ ಕನ್ನಡದ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್​ ಹೇಳ್ತಾರೆ. ಈ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹಾಗೂ ಮಂಜು ಹಣ ಹಾಕ್ತಾರೆ. ಈ ರೀತಿಯ ಬಿಸಿ ಬಿಸಿ ಸುದ್ದಿಯೊಂದು ಗಾಂಧಿನಗರದ ಗಲ್ಲಿಗಳಲ್ಲಿ ಗಿರಕಿ ಹೊಡೆಯುತ್ತಿದೆ.ಈ ರೂಮರ್​ ಹುಟ್ಟಿಕೊಳ್ಳಲು ಕಾರಣ 'ದಬಾಂಗ್​-3' ಸೆಟ್​​​ಲ್ಲಿ ಜೋಗಿ ಪ್ರೇಮ್ ಕಾಣಿಸಿಕೊಂಡಿರುವುದು.

ಕನ್ನಡದ ಬಚ್ಚನ್ ಸುದೀಪ್​ ಬಿಟೌನ್​​ಲ್ಲಿ ತಮ್ಮ ಮತ್ತೊಂದು ಇನ್ನಿಂಗ್ಸ್​ ಶುರು ಮಾಡಿದ್ದಾರೆ. ಸಲ್ಲು ಜತೆ 'ದಬಾಂಗ್-3' ಚಿತ್ರದಲ್ಲಿ ನೆಗೆಟಿವ್​ ರೋಲ್​ ನಿಭಾಯಿಸುತ್ತಿದ್ದಾರೆ. ಕನ್ನಡಿಗ ಪ್ರಭುದೇವ ನಿರ್ದೇಶನದ ಈ ಚಿತ್ರಕ್ಕೆ ಕಿಚ್ಚ 80 ದಿನಗಳ ಕಾಲ್‌ಶೀಟ್​ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಚಿತ್ರತಂಡ ಸೇರಿಕೊಂಡಿರುವ ಚಂದನವದ ಆರಡಿ ಕಟೌಟ್​, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಮೊನ್ನೆಯಷ್ಟೆ ಸುದೀಪ್,​ ಶೂಟಿಂಗ್​ನ ಮೊದಲ ದಿನದ ಖುಷಿಯನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು. ಪ್ರೇಮ್ ಕೂಡ ದಬಾಂಗ್ ಸೆಟ್​ಲ್ಲಿರುವ ಫೋಟೋ ಹಂಚಿಕೊಂಡು ಸುದೀಪ್ ಬಾಲಿವುಡ್ ಜರ್ನಿಗೆ ವಿಶ್ ಮಾಡಿದ್ದರು. ಇದರೊಟ್ಟಿಗೆ ಸಲ್ಲು ಜತೆಗಿರುವ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದರು. ಈ ಎಲ್ಲ ಲುಕ್​ಗಳನ್ನು ನೋಡಿದ ಕೆಲವರು, ದಬಾಂಬ್​- 3 ನಲ್ಲಿ ಪ್ರೇಮ್​ ಕೂಡ ಅಭಿನಯಿಸಲಿದ್ದಾರೆ ಎಂದು ಮಾತಾಡಿಕೊಂಡಿದ್ದರು. ಅಷ್ಟೇ ಅಲ್ಲ, ಸಲ್ಮಾನ್ ಮುಂದಿನ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಮಾಡಲಿದ್ದಾರೆ ಎಂದು ಸುದ್ದಿ ಪತ್ರಿಕೆಗಳಲ್ಲಿ ಹೆಡ್​ಲೈನ್ ಆಗಿತ್ತು. ಆದರೆ, ಈ ಎಲ್ಲ ಅಂತೆಕಂತೆಗಳೆಲ್ಲ ಸುಳ್ಳು ಎಂದಿದ್ದಾರೆ ಸುದೀಪ್​.

  • Saw some news about manju n me producing a Salman starter n prem directing it,,, jus wanna clarify tat there is no truth to it... Let no sch news spread.. Prem jus visited me on set n left n it ends there.

    — Kichcha Sudeepa (@KicchaSudeep) May 8, 2019 " class="align-text-top noRightClick twitterSection" data=" ">

ನಿನ್ನೆ ತಮ್ಮ ಟ್ವಿಟ್ಟರ್​​ನಲ್ಲಿ ಸ್ಪಷ್ಟನೆ ನೀಡಿರುವ ಅವರು, 'ಈ ಎಲ್ಲ ಸುದ್ದಿ ಸತ್ಯಕ್ಕೆ ದೂರವಾದವುಗಳು. ತಪ್ಪು ಮಾಹಿತಿ ಹರಡಬೇಡಿ. ಪ್ರೇಮ್, ಸೆಟ್​​ಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದರಷ್ಟೆ. ಅವತ್ತೇ ಅವರು ವಾಪಸ್ ಆದ್ರು' ಎಂದು ಹೇಳಿ ರೂಮರ್​ಗೆ ಫುಲ್ ಸ್ಟಾಪ್ ಹಾಕಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.